ಧಾರವಾಡ :- ಭಾರತಿಯ ಪರಂಪರೆಯಲ್ಲಿ ಆರೋಗ್ಯಕ್ಕಾಗಿ ಯೋಗ ಎಂಬ ಸತ್ಯ ಈಗ ಜಗತ್ತಿಗೆ ಅರ್ಥವಾಗಿದ್ದು, ಯೋಗದ ಮೂಲಕ ನಮ್ಮ ಆರೋಗ್ಯಕೆ  ಆದ್ಯತೆ ನೀಡಬೇಕು ಎಂದು ಹ್ಯುಮ್ಯಾನಿಟಿ ಫೌಂಡೆಶನ್ ಅಧ್ಯಕ್ಷೆ ಸ್ವಾತಿ ಮಾಳಗಿ ತಿಳಿಸಿದರು.
ಧಾರವಾಡದ ಮದಿನಾ ಪದವಿ ಪೂರ್ವ ಕಾಲೇಜಿನಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ನಮ್ಮ ಆಹಾರ ವಿಹಾರಗಳು, ನಮ್ಮ ಪರಿಸರ ಉತ್ತಮ ಆರೋಗ್ಯಕ್ಕಾಗಿ ಇರಬೇಕು. ಕಲುಶಿತ ಆಹಾರಕ್ಕೆ ಆಸ್ಪತ್ರೆಗಳು ತುಂಬುತ್ತಿವೆ. ಹೀಗಾಗಿ ನಮ್ಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಹಾಗೂ ನಿತ್ಯ ಯೋಗ ಬೇಕೆಬೇಕು. ಯೋಗ ಕೆವಲ ಶಾರೀರಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಹೆಚ್ಚು ಸಹಕಾರಿ. ಕೆವಲ ದಿನಾಚರಣೆಗೆ ಸೀಮಿತವಾಗದೆ ಯೋಗವನ್ನು ನಮ್ಮ ಬದುಕಿಗಾಗಿ ನಿರಂತರ ಅಭ್ಯಾಸ ಮಾಡಿ ಅಳವಡಿಸಿಕೊಳ್ಳೊಣ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ|| ಆದಿತ್ಯ ಪಾಂಡುರAಗಿ, ಯೋಗ ಭಾರತದ ಹೆಮ್ಮೆ ಜಗತ್ತಿಗೆ ಯೋಗಜ್ಞಾನ ನೀಡಿದ್ದು ಭಾರತ ಯೋಗದ ಮೂಲಕ ಇಡಿ ಭಾರತವನ್ನು ರೋಗ ಮುಕ್ತ ಮಾಡಲು ಸಾಧ್ಯ ಅದಕ್ಕಾಗಿ ನಿತ್ಯನಿರತರ ಯೋಗ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಶ್ರೀ ಕೇಸರ ದಾಸನಕೊಪ್ಪರವರು ಬಾಲ್ಯದಿಂದಲೆ ಮಕ್ಕಳಿಗೆ ಯೋಗದ ತಿಳುವಳಿಕೆ ನೀತ್ಯ ಯೋಗಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು, ಯೋಗ ನಮ್ಮ ಆರೋಗ್ಯದ ಭಾಗ್ಯ, ಪಠ್ಯದಲ್ಲಿಯು ಕಡ್ಡಾಯವಾಗಿ ಯೋಗದ ಪರಿಚಯಬೇಕು ನಿತ್ಯ ಶಾಲೆಗಳಲ್ಲಿ ಯೋಗಕ್ಕೆ ಅವಕಾಶ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಗೌರಿ ತಾವರಗೇರಿ, ಡಾ.ಶೃತಿ, ಡಾ.ವಿಶ್ವನಾಥ್ಕಾಮತ್, ಯೋಗ ಗುರೂಜಿ ಸಂತೋಷ ಪೂಜಾರಿ, ಸಲೀಂ ಬರ್ಚಿವಾಲೆ, ಮೆಹಬೂಬ್ ರಾಮದುರ್ಗ, ಅನುಪಮಾ ಬೆಳ್ಳಕ್ಕಿ, ಹು ಡಾ ಸದಸ್ಯ ಮಂಜುನಾಥ ಭೋವಿ, ಉಪಸ್ಥಿತರಿದ್ದರು.