ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ….
ಎಂಬ ಗೀತೆ ರಚಿಸಿ ಚಿತ್ರ ರಸಿಕರ ಹೃದಯ ಗೆದ್ದ ಸಂಗೀತ ಲೋಕದ ಧೃವತಾರೆ ಡಾ ಹಂಸಲೇಖ ಇವರ ಜನುಮ ದಿನ ಪ್ರಯುಕ್ತ ವಿಶೇಷ ಲೇಖನ……
75 ವಸಂತ ಕಂಡ ಡಾ ಹಂಸಲೇಖ ಅವರು ಶತಾಯುಷಿಗಳಾಗಲೆಂದು ಹಾರೈಸಿ,
ಈ ಲೇಖನ ಪ್ರಾರಂಭಿಸುವೆ..
ಸಂಗೀತ ಲೋಕದ ರಾಗ ಸಾರ್ವಭೌಮ, ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳ ಸೃಷ್ಟಿಕರ್ತ ಕನ್ನಡಾಂಬೆಯ ಕುವರ ಸಂಗೀತ ಶಾರದೆಯ ವರಪುತ್ರ ಡಾ ಹಂಸಲೇಖ ಅವರು
ಕನ್ನಡದ ‘ನಾದಬ್ರಹ್ಮ’ ಎಂದು ಜನಪ್ರಿಯರಾಗಿದ್ದಾರೆ..
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ ಇದು
ವಿಧಿ ಓಡಿಸುವಾ ಬಂಡಿ
ದಡ ಸೇರಿಸುವಾ ಬಂಡಿ
ಎಂಬ ಅತ್ಯುತ್ತಮ ಹಾಡನ್ನು ರಚಿಸಿ, ಕೋಟಿ ಕೋಟಿ ಕನ್ನಡಿಗರಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ಮಾಡಿದ ಸಾಹಿತ್ಯ ಬ್ರಹ್ಮ ಹಂಸಲೇಖ..
ಹಂಸಲೇಖ (ಮೂಲ ಹೆಸರು: ಜಿ. ಗಂಗರಾಜು) ಅವರು ಭಾರತೀಯ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರು ಮತ್ತು ಗೀತರಚನೆಕಾರರು. ೧೯೫೧ರ ಜೂನ್ ೨೩ರಂದು ಮೈಸೂರಿನಲ್ಲಿ ಜನಿಸಿದ ಇವರು, ೧೯೭೩ರ ‘ತ್ರಿವೇಣಿ’ ಚಿತ್ರದ ಮೂಲಕ ಗೀತರಚನೆಕಾರರಾಗಿ ಪಾದಾರ್ಪಣೆ ಮಾಡಿ, ೫೦೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ, ಸಾಹಿತ್ಯ ಮತ್ತು ಚಿತ್ರಕಥೆ ಒದಗಿಸಿದ್ದಾರೆ.ಆರಂಭಿಕ ಜೀವನ ಮತ್ತು ಹಿನ್ನೆಲೆಮೈಸೂರಿನಲ್ಲಿ ಜನಿಸಿದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. ಇವರ ತಂದೆ ಗೋವಿಂದರಾಜು ಮತ್ತು ತಾಯಿ ರಾಜಮ್ಮ. ಅವರ ಕುಟುಂಬಕ್ಕೆ ಸಂಗೀತದ ಹಿನ್ನೆಲೆಯಿತ್ತು. ಇವರ ಸಹೋದರರಾದ ಬಾಲಕೃಷ್ಣ ಮತ್ತು ಗುಂಡಣ್ಣ ಇವರೆಲ್ಲರಿಗೂ ಸಂಗೀತದ ಗೀಳು. ಹಂಸಲೇಖ ಅವರು ಎಸ್ಕೆ ಜೋಸೆಫ್ ಅವರಿಂದ ಕರ್ನಾಟಕ ಸಂಗೀತವನ್ನು ಮತ್ತು ಇತರ ಗುರುಗಳಿಂದ ಹಿಂದೂಸ್ಥಾನಿ ಹಾಗೂ ಪಾಶ್ಚಾತ್ಯ ಸಂಗೀತ ಶೈಲಿಗಳನ್ನು ಕಲಿತು ಸ್ವಂತ ಸಾಧನೆಯಿಂದ ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡರು.ಚಿತ್ರರಂಗದ ಪಯಣಗೀತ ರಚನೆಕಾರರಾಗಿ ಆರಂಭ: ೧೯೭೩ರಲ್ಲಿ ಬಿಡುಗಡೆಯಾದ ‘ತ್ರಿವೇಣಿ’ ಚಿತ್ರದ “ನೀನಾ ಭಗವಂತ…” ಹಾಡನ್ನು ಬರೆಯುವ ಮೂಲಕ ಚಿತ್ರರಂಗ ಪ್ರವೇಶಿಸಿದರು.ಸಂಗೀತ ನಿರ್ದೇಶಕರಾಗಿ: ೧೯೮೦ರ ದಶಕದ ಉತ್ತರಾರ್ಧದಲ್ಲಿ ರವಿಚಂದ್ರನ್ ಅವರ ‘ಪ್ರೇಮಲೋಕ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಇಡೀ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದರು.ಸಾಧನೆಗಳು: ಓಂ,
ಗಾನಯೋಗಿ ಪಂಚಾಕ್ಷರಿ ಗವಾಯಿ, ಸ್ಪರ್ಶ, ನೆನಪಿರಲಿ ಮತ್ತು ರಾಜಹುಲಿ ಮುಂತಾದ ಸೂಪರ್ ಹಿಟ್ ಚಿತ್ರಗಳಿಗೆ ಅದ್ಭುತ ಸಂಗೀತ ನೀಡಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಿಗೂ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಇವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಗೆ ಅನೇಕ ರಾಜ್ಯ ಪ್ರಶಸ್ತಿಗಳು ಹಾಗೂ ಫಿಲ್ಮ್ಫೇರ್ ಪ್ರಶಸ್ತಿಗಳು ಸಂದಿವೆ.ವೈಯಕ್ತಿಕ ಜೀವನ ಮತ್ತು ಸಮಾಜಮುಖಿ ಕೆಲಸಗಳುವೈಯಕ್ತಿಕ ಜೀವನ: ಹಂಸಲೇಖ ಅವರು ಹಿನ್ನೆಲೆ ಗಾಯಕಿ ‘ಲತಾ’ ಅವರನ್ನು ೧೯೯೦ರಲ್ಲಿ ವಿವಾಹವಾದರು.ದೇಸಿ ಪ್ರತಿಷ್ಠಾನ: ಜನಪರ ಕಾಳಜಿ ಹೊಂದಿರುವ ಇವರು ೨೦೦೧ರಲ್ಲಿ ‘ಹಂಸಲೇಖ ಮ್ಯೂಸಿಕ್ ಪ್ಲಸ್ ಟ್ರಸ್ಟ್’ ಮತ್ತು ೨೦೦೪-೦೫ರಲ್ಲಿ ‘ಹಂಸಲೇಖ ದೇಶಿ ವಿದ್ಯಾ ಸಂಸ್ಥೆ’ಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ದೇಸಿ ಸಂಗೀತದ ತರಬೇತಿಯನ್ನು ನೀಡುತ್ತಿದ್ದಾರೆ.
ಪ್ರಶಸ್ತಿಗಳು….
ಇವರು ತಮ್ಮ ಅದ್ಭುತ ಕೊಡುಗೆಗಾಗಿ ನಾಲ್ಕು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (ಸಂಗೀತ ನಿರ್ದೇಶನ) ಮತ್ತು ಮೂರು ಬಾರಿ ಗೀತರಚನೆಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಆರು ಬಾರಿ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಹಂಸಲೇಖ ಅವರ ಜೀವನ ಪಯಣ ಮತ್ತು ಅವರ ಸಾಧನೆಗಳು ಅವಿಸ್ಮರಣೀಯ.
ಸಂಗೀತದ ಮಾಂತ್ರಿಕ ಶಕ್ತಿ ಹೊಂದಿರುವ ಹಂಸಲೇಖ ಅವರು ಸಂಗೀತ ಲೋಕದ ಧೃವತಾರೆ…
ಕಲಿಯೋಕೆ ಕೋಟಿ ಭಾಷೆ,
ಆಡೋಕೆ ಒಂದೇ ಭಾಷೆ ಕನ್ನಡ
ಕಸ್ತೂರಿ ಕನ್ನಡ
ಎಂದು ಕನ್ನಡ ಗೀತೆ ರಚಿಸಿ ಕನ್ನಡಿಗರಾ ಮನಗೆದ್ದ ಡಾ ಹಂಸಲೇಖ ನಮಗೆಲ್ಲಾ ಚಿರಸ್ಮರಣೀಯರು..

ಮಹಾಂತೇಶ ನರೇಗಲ್ಲ
ಧಾರವಾಡ
7892928685





