ಧಾರವಾಡ : ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ಸರ್ಕಾರದ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡುವ ಕುರಿತು ಪ್ರತಿಭಟನೆಯ ಮಾಡಲಾಯಿತು.
ಬಿಡದಿ ಮತ್ತು ಹಾರೋಹಳ್ಳಿ, ಹೋಬಳಿಯ ವ್ಯಾಪ್ತಿಯಲ್ಲಿರುವ ಬಡರೈತರ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯದ ಪುಸ್ತುತ ಕಾಂಗ್ರೆಸ್ ಸರ್ಕಾರವು ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ. ಪ್ರಸ್ತುತ ಸರ್ಕಾರವು ಜಾರಿಗೆ ತರುತ್ತಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ಧಂದೆ ಅಡಗಿದೆ. ಸ್ಥಳೀಯ ಮಣ್ಣಿನ ಮಕ್ಕಳ ಹಾಗೂ ರೈತರ ಹಿತರಕ್ಷಣೆಯ ದೃಷ್ಟಿಯಿಂದ, ಈ ಕೆಳಗಿನ ಅತ್ಯಂತ ಗಂಭೀರವಾದ ಅಂಶಗಳನ್ನು ಮತ್ತು ಅಂಕಿ-ಅAಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಅತ್ಯಂತ ಫಲವತ್ತಾದ ಕೃಷಿ ಭೂಮಿಯ ಧ್ವಂಸ ಮತ್ತು ಸಣ್ಣ ರೈತರ ಒಕ್ಕಲೆಬ್ಬಿಸುವಿಕ ಪುಸ್ತುತ ಮೊದಲ ಹಂತದಲ್ಲಿ ವಶಪಡಿಸಿಕೊಳ್ಳಲು ಹೊರಟಿರುವ ೪೯೮.೩೪ ಎಕರೆ ಫಲವತ್ತಾದ ಕೃಷಿಭೂಮಿಯಿಂದಾಗಿ ಒಟ್ಟು ೭೫೫ ರೈತ ಕುಟುಂಬಗಳು ಬೀದಿಗೆ ಬೀಳುತ್ತಿವೆ.
ಈ ಪೈಕಿ ಬರೋಬ್ಬರಿ ೬೧೪ ರೈತರು (ಶೇ. ೮೧% ಕ್ಕೂ ಹೆಚ್ಚು) ಕೇವಲ ೧ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅತಿ ಸಣ್ಣ ಕೃಷಿಕರಾಗಿದ್ದಾರೆ. ತಮ್ಮ ಒಪ್ಪತ್ತಿನ ಗಂಜಿಗಾಗಿ ಕೇವಲ ಈ ಅರ್ಧ ಅಥವಾ ಕಾಲು ಎಕರೆ ಜಮೀನನ್ನೇ ನಂಬಿ ಬದುಕುತ್ತಿದ್ದ ದಲಿತ ಹಾಗೂ ಹಿಂದುಳಿ ದವರ್ಗಗಳ ಬಡಕುಟುಂಬಗಳನ್ನು ಈ ಸರ್ಕಾರ ಸಂಪೂರ್ಣವಾಗಿ ನಾಶಮಾಡಲು ಹೊರಟಿದೆ.
ಮುಂದಿನ ತಿಂಗಳು ೭,೫೦೦ಕ್ಕೂ ಹೆಚ್ಚು ಎಕರೆ ವಶಪಡಿಸಿಕೊಳ್ಳುವ ಕರಾಳ ಸಂಚು ಜೂನ್ ೧೨ ರಂದು ಹೊರಬಿದ್ದಿರುವ ಅಧಿಸೂಚನೆಯು ಕೇವಲ ೫೦೦ ಎಕರೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ತಿಂಗಳ ಒಳಗೆ ಇಡೀ ಬಿಡದಿ ಭಾಗದ ಬರೋಬ್ಬರಿ ೭,೪೮೧ ರಿಂದ ೯,೬೦೦ ಎಕರೆ ವರೆಗಿನ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ಬಲವಂತವಾಗಿ ಕಸಿದು ಕೊಳ್ಳಲು ಸರ್ಕಾರ ಗಡುವು ನಿಗದಿಪಡಿಸಿದೆ.
ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲದಿದ್ದರೂ, ಅವರ ಹಣವನ್ನು ಕೋರ್ಟ್ ನಲ್ಲಿ ಜಮೆ ಮಾಡಿ ಜಮೀನು ಕಿತ್ತುಕೊಳ್ಳುವ ಕರಾಳ ಎಚ್ಚರಿಕೆಯನ್ನು ಸರ್ಕಾರ ನೀಡುತ್ತಿದೆ.
ಹೈನುಗಾರಿಕೆ, ರೇಷ್ಮೆ ಮತ್ತು ತೋಟಗಾರಿಕೆ ಉದ್ಯಮದ ಸಂಪೂರ್ಣ ವಿನಾಶ
ಈ ಇಡೀ ವಲಯವು ಹಸಿರು ಭೂಮಿಯಾಗಿದ್ದು, ಹೈನುಗಾರಿಕೆಯೇ ಇಲ್ಲಿನ ಜನರ ಪುಮುಖ ಜೀವನಾಧಾರವಾಗಿದೆ. ಈ ಯೋಜನೆಯಿಂದಾಗಿ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ ಬರೋಬ್ಬರಿ ೬ ಲಕ್ಷ ಲೀಟರ ಹಾಲು ಸಂಪೂರ್ಣವಾಗಿ ನಿಂತು ಹೋಗಲಿದ್ದು, ರಾಜ್ಯದ ಹಾಲಿನ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳಲಿದೆ.
ಈ ಭಾಗದ ಶೇಕಡಾ ೫೦% ಕ್ಕೂ ಹೆಚ್ಚು ಕುಟುಂಬಗಳು ಕೇವಲ ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕ ಮತ್ತು ತೋಟಗಾರಿಕೆಯನ್ನು ನಂಬಿ ಸ್ವಾವಲಂಬಿ ಬದುಕು ನಡೆಸುತ್ತಿವೆ.
ರೂ. ೩೩,೫೬೨ ಕೋಟಿ ರಿಯಲ್ ಎಸ್ಟೇಟ್ ದಂಧ ಮತ್ತು ಆರ್ಥಿಕ ಹಗರಣ
ಬಡ ರೈತರ ಭೂಮಿಯನ್ನು ಕನಿಷ್ಠ ಬೆಲೆಗೆ ಕಸಿದುಕೊಂಡು, ಬರೋಬ್ಬರಿ ರೂ. ೩೩,೫೬೨ ಕೋಟಿ ಕೊಳ್ಳೆ ಹೊಡೆಯಲು ಸರ್ಕಾರ ತೀರ್ಮಾನಿಸಿದೆ.
ಸ್ವತಃ ಸರ್ಕಾರದ ಹಣಕಾಸು ಇಲಾಖೆಯು ಇದು “ಕೇವಲ ಒಂದು ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆ” ಎಂದು ಲಿಖಿತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಮುಖ್ಯಮಂತ್ರಿಗಳು ಹಠಕ್ಕೆ ಬಿದ್ದು ರೂ. ೯,೦೧೧ ಕೋಟಿಗಳ ಸರ್ಕಾರಿ ಗ್ಯಾರಂಟಿ ನೀಡಿದ್ದಾರೆ.
ಈ ಯೋಜನೆಗಾಗಿ ಬಿ.ಡಿ.ಎ ಮತ್ತು ಬಿ.ಎಂ.ಆರ್.ಡಿ.ಎ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಬಳಕೆಯ ಆಸ್ತಿಗಳನ್ನು ಬರೋಬ್ಬರಿ ರೂ. ೩,೬೫೦ ಕೋಟಿ ಮೌಲ್ಯಕ್ಕೆ ಹುಡೋ ಬ್ಯಾಂಕಿನಲ್ಲಿ ಅಡಮಾನ ಇಡಲಾಗಿದೆ.
೧೦ ಲಕ್ಷ ಹಸಿರು ಮರಗಳ ಪರಿಸರ ಮಾರಣಹೋಮ ಸ್ಮಾರ್ಟ್ಟಿ ಮತ್ತು ಇಂಟಿಗ್ರೇಟೆಡೇನ್ ಹೆಸರಿನಲ್ಲಿ ಈ ಭಾಗದ ಹಸಿರು ವಲಯದಲ್ಲಿರುವ ಬರೋಬ್ಬರಿ ೧೦ ಲಕ್ಷಕ್ಕೂ ಹೆಚ್ಚು ಹಸಿರು ಮರಗಳನ್ನು ಕತ್ತರಿಸಿ ಪರಿಸರ ಮಾರಣ ಹೋಮ ಮಾಡಲು ಸರ್ಕಾರ ಮುಂದಾಗಿದೆ. ಇದು ಪರಿಸರ ಸಮತೋಲನವನ್ನು ಸಂಪೂರ್ಣವಾಗಿ ನಾಶಪಡಿಸಲಿದೆ.ಕಾನೂನು ಬಾಹಿರ ಪ್ರಕ್ರಿಯೆ ಮತ್ತು ರೈತರ ಪ್ರತಿಭಟನೆಯ ಹತ್ತಿಕ್ಕುವಿಕ ಕೇಂದ್ರದ ೨೦೧೩ರ ಭೂಸ್ವಾಧೀನ ಕಾಯ್ದೆಯ ಕಟ್ಟುನಿಟ್ಟಾದ ನಿಯಮಗಳನ್ನು ತಪ್ಪಿಸಲು, ಸರ್ಕಾರವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ನು ಬಳಸಿಕೊಂಡು ಕಡ್ಡಾಯವಾಗಿ ನಡೆಸಬೇಕಾದ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಮತ್ತು ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಬೈಪಾಸ್ಮಾಡಿದೆ ನಮ್ಮಪ್ರಮುಖ ಬೇಡಿಕೆಗಳು ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಈ ಕರಾಳ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
ಮುಂದಿನ ತಿಂಗಳು ಜಾರಿಗೆ ತರಲು ಉದ್ದೇಶಿಸಿರುವ ೭,೫೦೦ ಕ್ಕೂ ಹೆಚ್ಚು ಎಕರೆ ಭೂಸ್ವಾಧೀನದ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು.
ಪ್ರತಿ ತಿಂಗಳು ೬ ಲಕ್ಷ ಲೀಟರ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಾರಿಕೆಯನ್ನು ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ಜೀವನೋಪಾಯವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಅನುಮತಿ ನೀಡಬೇಕು.
ಸಾರ್ವಜನಿಕ ಆಸ್ತಿಗಳಾದ ಸಿ.ಎ ನಿವೇಶನಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಿರುವ ಆರ್ಥಿಕ ದುರ್ನೀತಿಯನ್ನು ತಕ್ಷಣ ನಿಲ್ಲಿಸಬೇಕು.
ಈ ಕೂಡಲೇ ಜಿಲ್ಲಾಧಿಕಾರಿಗಳು ಈ ವಿಷಯದ ಗಾಂಭೀರ್ಯತೆಯನ್ನು ಅರಿತು, ಬಡ ಮತ್ತು ಅತಿ ಸಣ್ಣ ರೈತರ ಪರವಾಗಿ ನಿಲ್ಲಬೇಕೆಂದು ಮತ್ತು ಈ ಅನ್ಯಾಯದ ಭೂಸ್ವಾಧೀನದ ವಿರುದ್ಧ ನಮ್ಮ ತೀವು ಪ್ರತಿರೋಧದ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಬೇಕೆಂದು ಈ ಮೂಲಕ ಕಳಕಳಿಯಿಂದ ಮನವಿ ಮಾಡಲಾಯಿತು ಪ್ರತಿಭಟನೆಯಲ್ಲಿ ಜನತಾದಳ ಜಾತ್ಯಾತೀತ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಶೀಮರದ, ದೇವರಾಜ ಕಂಬಳಿ, ಮಂಜುನಾಥ ಹಗೇದಾರ,ಗಂಗಾಧರ ಶಿರೂರ,ಬಿ ಜಿ ಕುರಹಟ್ಟಿಮಠ,ಪ್ರೇಮಾ ಭಟ್,ರಾಮಪ್ಪ ಆಲೂರ,ಬೀಮರಾಯ ಗುಡೇನಕಟ್ಟಿ, ವಸಂತ ಬ್ಯಾಳಿ,ಸುಧೀರ ಕ್ಷತ್ರಿ,ಶಂಕರಪ್ಪ ತಲ್ಲೂರ, ಎಮ್ ಬಿ ಹಿಂಡಸಗೇರಿ ಇದ್ದರು.




