ಧಾರವಾಡ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆದೇಶ ದಿ ೦೨.೦೭.೨೦೨೫ ರ ಪ್ರಕಾರ ೩೭೦೦ ರೂ. ಇದ್ದಂತಹ ಶುಲ್ಕವನ್ನು ೮೫೮೦ ರೂ. ಕ್ಕೆ ಏರಿಸಲಾಗಿದೆ, ಈ ಆದೇಶದ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದ ೧೨೯ % ಶುಲ್ಕ ಹೆಚ್ಚಳ ಕಾನೂನ ಬಾಹಿರ ಎಂದು ಪರಿಗಣಿಸಿ, ಎರಡು ತಿಂಗಳೊಳಗೆ ಹೆಚ್ಚುವರಿ ಹಣವನ್ನು ವಿದ್ಯಾರ್ಥಿಗಳಿಗೆ ಮರು ಪಾವತಿಸಲು ನಿರ್ದೇಶಿಸಲಾಗಿದೆ, ಈ ಆದೇಶವನ್ನು ಪಾಲಿಸದೆ ಮರು ಪ್ರಶ್ನಿಸಿ ನ್ಯಾಯಾಲಯದ ಮುಂದೆ ಹೋಗಿರುವುದನ್ನು ಎಬಿವಿಪಿ ಖಂಡಿಸುತ್ತದೆ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಆಗ್ರಹಿಸುತ್ತವೆ.
ಅದೇ ಮಾದರಿಯಲ್ಲಿ ಮರು ಪರೀಕ್ಷೆ ಶುಲ್ಕವನ್ನು ೨೦೨೩ರಲ್ಲಿ ಇದ್ದ ೨೬೦ ರೂ. ನಿಂದ ೨೦೨೬ರಲ್ಲಿ ೩೬೮ ರೂ ಮಾಡಿದಾರೆ, ಯುಜಿಸಿ ನಿಯಮದಲ್ಲಿ ಪ್ರತಿ ೩ ವರ್ಷಕ್ಕೆ ೧೫% ಶುಲ್ಕ ಹೆಚ್ಚಳ ಮಾಡಲು ಅವಕಾಶ ಇದ್ದರೂ ವಿಶ್ವವಿದ್ಯಾಲಯದ ೩೧% ಶುಲ್ಕ ಹೆಚ್ಚಳ ಮಾಡಿದೆ ಈ ಶುಲ್ಕವನ್ನು ಸಹ ಕಡಿಮೆ ಮಾಡಬೇಕು. ಮತ್ತು ೨೦೨೧-೨೨, ೨೦೨೨-೨೩ ೨೦೨೩-೨೪ರ ಶೈಕ್ಷಣಿಕ ಸಾಲಿನಲ್ಲಿ ನಿಯಮಿತ ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಈ ವರ್ಷ ಹಿಂದಿನ ಶುಲ್ಕ ಪಾವತಿಸಾಲು ಆದೇಶ ನೀಡಿದೆ ಈ ಆದೇಶವನ್ನು ಕೈ ಬಿಡಬೇಕು ಎಂದು ಆಗ್ರಹಿಸುತ್ತವೆ.
ಈ ವರ್ಷದ ಘಟಿಕೋತ್ಸವದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮಾಡಬೇಕು ಮತ್ತು ಪ್ರವೇಶಾತಿ ಶುಲ್ಕವನ್ನು ಸಮವಾಗಿ ಪರಿಗಣಿಸಿ ೨೪೭೯ ರೂ. ಗೆ ಇಳಿಸಬೇಕು, ಮತ್ತು ಅಂಚೆ ಪದವಿ ಪಡೆಯುವವರಿಗೆ ಅಂಚೆ ಖರ್ಚು ಹಣವನ್ನು ಮಾತ್ರ ಪಡೆಯಬೇಕೆಂದು ಎಬಿವಿಪಿ ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಈ ಎಲ್ಲಾ ವಿಷಯಗಳ ಜೊತೆಗೆ ಕೆ ಏಸ್ ಎಲ್ ಯು, ಲಾ ,ಸ್ಕೂಲ್ ನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಬೇಕೆಂದು ಆಗ್ರಹಿಸಲಾಯಿತು. ಮಾನ್ಯ ಕುಲಪತಿಗಳು ಮನವಿಯನ್ನು ಸ್ವೀಕರಿಸಿ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿ ನಾಯಕರ ಒಂದು ಸಭೆಯನ್ನು ಮಾಡಿ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಡಾಂಗೆ, ಸಚಿನ್ ಕುಳಗೇರಿ, ಅಭಿಷೇಕ್ ದೊಡ್ಡಮನಿ, ಸನತ್ ತೋಟಿಗೇರ್, ಮಣಿಕಂಠ ದೇಸಾಯಿ, ಲೋಕೇಶ್, ಫಣಿ ರಾಘವೇಂದ್ರ, ಅಮರ, ದರ್ಶನ್, ಇಶಿಕಾ, ಸಂಜನಾ, ಮನೋಜ್ ಮುಂತಾದವರು ಉಪಸ್ತಿತರಿದ್ದರು.