ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಕಳ್ಳಿ ಬಂಧನ

ಬಾಗಲಕೋಟೆ ೧೪ : ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ರಜನಿ ಎಂಬುವವರು ರೌಂಡ್ಸ್ಗೆ ಹೋದಾಗ ಸಾಕ್ಷಿ ಯಾದವಾಡ ಎಂಬ ಮಹಿಳೆ ಡಿಲೆವರಿ ಆಗಿಲ್ಲವಾದರೂ ಮಗುವಿಗೆ ಹಾಲು ಕುಡಿಸಿತ್ತಿದ್ದಳು. ಈ ವೇಳೆ ಜನ್ಮ ನೀಡಿದ ತಾಯಿಗೆ ಡಾ.ರಜನಿ ವಿಚಾರಣೆ ಮಾಡಿದಾಗ ಕಾಣೆ ಆಗಿದ್ದ ಮಗು ಇದೆ ಮಗು ಎಂದು ಖಚಿತ ಪಡಿಸಿಕೊಂಡು, ಜನ್ಮ ನೀಡಿದ ತಾಯಿ ಮಹಬೂಬಿ ನದಾಫ ಎಂಬವರಿಗೆ ಮಗು ತನ್ನದೇ ಎಂದು ಖಚಿತ ಪಡಿಸಿದ್ದಾಳೆ. ಆಗ ಕಳ್ಳತನವಾದ ಮಗು ಪತ್ತೆಯಾಗಿದೆ. ಈ ವಿಷಯದ ಕುರಿತು ಪೋಲಿಸರಿಗೆ ಮಾಹಿತಿ ಕೊಟ್ಟು ದೂರು ನೀಡಿದ್ದಾರೆ.

ಸ್ಥಳಕ್ಕೆ ಮಹಿಳಾ ಪೋಲಿಸರು ಹಾಗೂ ಅಧಿಕಾರಿಗಳು ಆಗಮಿಸಿ ಸಾಕ್ಷಿ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡಬೇಕಾಗಿದೆ.

ಈ ವಿಷಯದಿಂದಾಗಿ ಜನರಲ್ಲಿ ಸ್ವಲ್ಪ ಆಂತಕ ಸೃಷ್ಟಿ ಉಂಟಾಗಿತ್ತು.