ಬಸವರಡ್ಡಿ ಶಿಕ್ಷಣ ಸಂಸ್ಥೆಯ 34 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶಿಕ್ಷಣ ಸಂಸ್ಥೆಯಿಂದ ಸಧೃಡ ಸಮಾಜ ಕಟ್ಟಲು ಸಾಧ್ಯ- ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಧಾರವಾಡ 26 : ಹಣದ ವ್ಯಾಮೋಹವಿಲ್ಲದೇ, ಶಿಕ್ಷಣ ಸಂಸ್ಥೆಯನ್ನು ನಡೆಸಿದರೆ, ಸಧೃಡ ಸಮಾಜವನ್ನು ಕಟ್ಟಬಹುದು ಎಂದು, ಉಪ್ಪಿನಬೆಟಗೇರಿಯ ಶ್ರೀ ಮೂರುಸಾವಿರ ವೀರಕ್ತಮಠದ ಪರಮಪೂಜ್ಯ ಶ್ರೀಮದ್ ನಿರಂಜನ ಪ್ರಣವ ಸ್ವರೂಪಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಯ, ಬಸವರಡ್ಡಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯ 34 ನೇ ವರ್ಷದ ಸಾಂಸ್ಕೃತಿಕ ಉತ್ಸವ-2025 ವಾರ್ಷಿಕೋತ್ಸವ ಕಾರ್ಯಕ್ರಮವನ್ನು, ಬಸವರಡ್ಡಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಸಾಧಿಸುವ ಛಲವಿದ್ದರೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಬಹುದು. ಈ ನಿಟ್ಟಿನಲ್ಲಿ ಬಸವರಡ್ಡಿ ಶಿಕ್ಷಣ ಸಂಸ್ಥೆ ಹಗಲಿರುಳು ಕೆಲಸ ಮಾಡುತ್ತಿದ್ದು, ಉತ್ತರೋತ್ತರ ಏಳಿಗೆ ಆಗಲಿ ಎಂದು ಆಶಿಸಿದರು.

ಬಸವರಡ್ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶಂಕರ.ವಿ.ಬಸವರಡ್ಡಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಎಂದಿಗೂ ರಾಜಿಯಾಗುವ ಮಾತಿಲ್ಲಾ. ಆಟದ ಜೋತೆಗೆ ಪಠ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುವುದರ ಜೋತೆಗೆ ಮಕ್ಕಳ ಆರೋಗ್ಯದ ಕಡೆಗೂ ನ್ಯೂಟ್ರಿಶನ್ ಪುಡ್ ಉತ್ತಮ ಎಂದು ಮನಗಂಡಿರುವ ಸಂಸ್ಥೆ ನಮ್ಮದು. ಬರುವ ದಿನಗಳಲ್ಲಿ ಕಲಘಟಗಿ ಹಾಗೂ ರೋಣದಲ್ಲಿ ಶಾಲೆ ಪ್ರಾರಂಭಮಾಡಲಾಗುವುದು ಎಂದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೃಷ್ಟಿ, ಶಂಕರ ಬಸವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಪೀಳಿಗೆಯ ನವ ಆಲೋಚನೆ, ಸಂಸ್ಥೆಯ ಬೆಳವಣಿಗೆ ಹಾಗೂ ಸಂಸ್ಥೆಯ ಮುಂದಿನ ಯೋಚನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಸವರಡ್ಡಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಮಡಿವಾಳ ಅವರು ಸ್ವಾಗತ ಕೋರಿದರು. ಕವಿತಾ ನಿಲೇಕಣಿ ಹಾಗೂ ವಿಜಯಲಕ್ಷ್ಮಿ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಚಂದ್ರು ಲಮಾಣಿ ವಂದಿಸಿದರು.

  • Related Posts

    ಫೆ 14 ರಂದು ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಲು ಆಗ್ರಹಿಸಿ

    ಧಾರವಾಡ 11 :ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಬಿಸಿಯೂಟ ಕಾರ್ಮಿಕರ ಸಂಘ(ರಿ)ದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

    ಗ್ರಾಮ ಆಡಳಿತ ಅಧಿಕಾರಿಗಳ‌ ಸಂಘದ ಮುಷ್ಕರ

    ಧಾರವಾಡ11 :  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ನಗರದ ತಹಶೀಲ್ದಾರ‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ್ದ ಕರೆಯ ಮೇರೆಗೆ ಗ್ರಾಮ ಆಡಳಿತ…

    RSS
    Follow by Email
    Telegram
    WhatsApp
    URL has been copied successfully!