ಕುಡಿಯುವ ನೀರಿನಿಂದ ಆರೋಗ್ಯ ಹದಿಗೆಡುತ್ತಿದೆ

​ಧಾರವಾಡ: ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಿ.ಶಿಗಿಗಟ್ಟಿ ತಾಂಡಾದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಗ್ರಾಮದ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದೆ.
ಬಿ.ಶಿಗಿಗಟ್ಟಿ ತಾಂಡಾದ ವಾರ್ಡ್ ನಂ. 2 ರಲ್ಲಿ ಸಾರ್ವಜನಿಕರು ಬಳಸುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಶುದ್ಧ ಹಾಗೂ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಇದನ್ನು ಸೇವಿಸುವುದರಿಂದ ತಾಂಡಾದ ಜನರಲ್ಲಿ ಕೆಮ್ಮು, ಕಫ, ವಾಂತಿ-ಭೇದಿ, ಹಲ್ಲು ನೋವು, ಕೂದಲು ಉದುರುವಿಕೆ ಮತ್ತು ಕಿಡ್ನಿ ಸ್ಟೋನ್‌ನಂತಹ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು..