ಸಂಕನೂರ ಹ್ಯಾಟ್ರಿಕ್ ಸಾಧನೆಗೆ ಕೈಜೋಡಿಸಿ: ಮಾಜಿ ಸಚಿವ ಮುನೇನಕೊಪ್ಪ

https://youtu.be/2MxHowvgJp4

ನವಲಗುಂದ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ವಿ. ಸಂಕನೂರ ಅವರು ಅನುಭವಿ ಹಾಗೂ ಸಮರ್ಥ ಅಭ್ಯರ್ಥಿಯಾಗಿದ್ದು, ಪದವೀಧರರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕನಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪದವೀಧರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮತದಾರರು ಸಂಕನೂರ ಅವರಿಗೆ ಬೆಂಬಲ ನೀಡಿ, ಮೂರನೇ ಬಾರಿಗೆ ಗೆಲುವು ತಂದುಕೊಡಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮನವಿ ಮಾಡಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ವಿ. ಸಂಕನೂರ ಅವರು ಈಗಾಗಲೇ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ತಮ್ಮ ಅನುಭವದ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸೇವೆ ಹಾಗೂ ಅನುಭವಕ್ಕೆ ಮತ್ತೊಮ್ಮೆ ಅವಕಾಶ ಕಲ್ಪಿಸುವ ಮೂಲಕ ಹ್ಯಾಟ್ರಿಕ್ ಗೆಲುವಿಗೆ ಮತದಾರರು ಸಹಕರಿಸಬೇಕು ಎಂದು ಕರೆ ನೀಡಿದರು.

https://youtu.be/ycfEoUCserM

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು ಸಾಧಿಸಲು ಮುಖಂಡರು, ಕಾರ್ಯಕರ್ತರು ಹಾಗೂ ಪದವೀಧರ ಮತದಾರರು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಅಭ್ಯರ್ಥಿಯ ಪರವಾಗಿ ವ್ಯಾಪಕ ಪ್ರಚಾರ ನಡೆಸಿ, ಮತದಾರರನ್ನು ಸಂಪರ್ಕಿಸುವ ಮೂಲಕ ಗೆಲುವಿನ ಗುರಿ ಸಾಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷ ಗಂಗಣ್ಣ ಮನಮಿ, ನಗರ ಅಧ್ಯಕ್ಷ ಸಾಯಿಬಾಬಾ ಆನೇಗುಂದಿ, ಉಸ್ತುವಾರಿಗಳಾದ ಸುಭಾಷ್ ಪಾಟೀಲ, ಪ್ರಕಾಶ ಅಂಗಡಿ, ಶ್ರೀಶೈಲ ಮೂಲಿಮನಿ, , ಷಣ್ಮುಖ ಗುರಿಕಾರ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ, ಐ.ಡಿ. ಪ್ರಭು, ಮಹಾಂತೇಶ ಕಲಾಲ, ಶಂಕ್ರು ತೋಟದ, ಈರಣ್ಣ ಚವಡಿ, ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ದೇವರಾಜ ಕರಿಯಪ್ಪನವರ, ಬಸವರಾಜ ಕಾತರಕಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.