ಹುಬ್ಬಳ್ಳಿ: ಏಳು ವರ್ಷದ ಬಾಲಕ ನೀರಿನ ಟ್ಯಾಂಕ್‌ನಲ್ಲಿ(ಸಂಪ್) ಬಿದ್ದು, ಮೃತಪಟ್ಟಿರುವ ಘಟನೆ ಉಣಕಲ್‌ನ ಗಣೇಶ ಕಾಲೋನಿಯ ಅಂಬಾಭವಾನಿ ದೇವಸ್ಥಾನದ ಹತ್ತಿರ ನಡೆದಿದೆ. ಅವರ ಮಗ ಸಿದ್ಧಾರ್ಥ (೭) ಮೃತಪಟ್ಟಿರುವ ಬಾಲಕ. ಮನೆಯ ಮುಂಭಾಗದಲ್ಲಿದ್ದ ಸಂಪಿನಲ್ಲಿ ಸಿದ್ಧಾರ್ಥ ನೀರು ತುಂಬಿಕೊಳ್ಳಲು ಹೋಗಿದ್ದ. ನೀರು ತುಂಬಿಕೊಳ್ಳುವ ಸಂದರ್ಭದಲ್ಲಿ ಸಿದ್ಧಾರ್ಥನ ಕಾಲು ಜಾರಿ ಸಂಪಿನಲ್ಲಿ ಬಿದ್ದಿದ್ದಾನೆ. ಕೂಡಲೇ ಅವನ ಚಿಕಿತ್ಸೆಗೆ ಕೆಎಂಸಿಆರ್‌ಐಗೆ ಸಾಗಿಸಲಾಗಿತ್ತು. ಮಾರ್ಗ ಮಧ್ಯದಲ್ಲಿಯೇ ಸಿದ್ಧಾರ್ಥ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
೧೨.೫೦ ಲಕ್ಷ ವಂಚನೆ: ಆನ್‌ಲೈನ್‌ನಲ್ಲಿ ಕಾರ್ಗೋ -ಂಚೈಸಿ ಖರೀದಿಸಲು ಹೋದ ಉಣಕಲ್‌ನ ಕೊಪ್ಪಳ ಲೈಓಟ್ ನಿವಾಸಿ ವಾಸಿಮ್ ಸುಂಕದ ಎಂಬುವರಿಂದ ೧೨.೫೦ ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಾಸಿಮ್ ಅವರು ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿರುವಾಗ ಗೊ ಟ್ರ್ಯಾಕ್ ಎಕ್ಸಪ್ರೆಸ್ ಪ್ರೈ. ಲಿ. ಎಂಬ ಜಾಹೀರಾತು ನೋಡಿ ಕಾರ್ಗೋ -ಂಚೈಸಿ ಖರೀದಿಸಲು ಮುಂದಾಗಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಖಾಸಗಿವೊಂದು ಕಂಪನಿ ಹೆಸರು ಹೇಳಿಕೊಂಡು ಕರೆ ಮಾಡಿದ್ದಾರೆ. ಕಾರ್ಗೋ -ಂಚೈಸಿ ಖರೀದಿಸುವ ಬಗ್ಗೆ ಮಾಹಿತಿ ನೀಡಿ ರಿಜಿನಲ್ -ಂಚೈಸಿ ಕಂಡಕೊಳ್ಳಲು ನಂಬಿಸಿ ವಿವಿಧ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



