ಧಾರವಾಡ: ಮಣಕಿಲ್ಲಾ ಶ್ರೀ ಮಹಾಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನದಲ್ಲಿ ಅ.೧೦ರಿಂದ ಅ.೨೦ರವರೆಗೆ ೭೪ನೇ ನವರಾತ್ರಿ ಉತ್ಸವ ನಡೆಯಲಿದೆ.
ಈ ಕುರಿತು ರಾಹುಲ್ ದತ್ತಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.೧೫ರಂದು ಲಲಿತಾ ಪಂಚಮಿಯAದು ಶ್ರೀ ಮಹಾಲಕ್ಷಿö್ಮÃ ವೆಂಕಟೇಶ್ವರ ಕಲ್ಯಾಣೋತ್ಸವ ನಡೆಯಲಿದೆ. ಸುಪ್ರಭಾತ ಸೇವೆ, ಪುಣ್ಯಾಹವಚನ, ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಮಣಕಿಲ್ಲಾ ಹನುಮಂತ ದೇವಸ್ಥಾನದವರೆಗೆ ಸಾಗಿ ನಂತರ ದೇವಸ್ಥಾನಕ್ಕೆ ಮರಳುವುದು. ಸಂಜೆ ೪ ಗಂಟೆಗೆ ಧ್ವಜಾರೋಹಣ, ಕಳಸ ಪೂಜೆ ಇದೆ. ಸಂಜೆ ೬ಕ್ಕೆ ಕಲ್ಯಾಣೋತ್ಸವ ಇರಲಿದೆ. ಭಕ್ತರ ಹಿತಕ್ಕಾಗಿ ವಿಶೇಷ ವಿಷ್ಣು ಹೋಮ ಜರುಗಲಿದ್ದು, ನಂತರ ಪ್ರಸಾದ ವಿತರಣೆ ನಡೆಯುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.
ಅ.೧೧ರಂದು ಘಟಸ್ಥಾಪನೆ, ನವರಾತ್ರಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನವರಾತ್ರಿ ನಿಮಿತ್ತ ಪ್ರತಿದಿನ ಶ್ರೀ ಲಕ್ಷಿö್ಮÃ ವೆಂಕಟೇಶ್ವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗುವುದು. ನವರಾತ್ರಿ ನಿಮಿತ್ತ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು. ಮಹಾಲಕ್ಷಿö್ಮÃ ಹಾಗೂ ವೆಂಕಟೇಶ್ವರ ಅಕ್ಕಪಕ್ಕದಲ್ಲಿರುವ ಅಪರೂಪದ ದೇವಸ್ಥಾನ ಇದಾಗಿದೆ. ದಕ್ಷಿಣ ಭಾರತದಲ್ಲಿ ಚೆನ್ನೆöÊ, ಬೆಂಗಳೂರು ಹಾಗೂ ಧಾರವಾಡದಲ್ಲಿ ಮಾತ್ರ ಇಂಧ ದೇಗುಲಗಳಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸತ್ಯನಾರಾಯಣ ವೆಂಕಟೇಶ, ಕೃಷ್ಣಮೂರ್ತಿ ವೆಂಕಟೇಶ, ಕೇಶವ ತೆಲಗು, ವಿನಾಯಕ ತೆಲಗು ಇದ್ದರು.



