ನಟ ನಾನಾ ಪಾಟೇಕಾರ ಅಗಲಿಕೆ ಕುಮಾರಸ್ವಾಮಿ ಸ್ಮರಣೆ
ತೀವ್ರ ಅಘಾತ ಉಂಟಾಯಿತು, ತಮ್ಮ ಸಹಜ ಅಭಿನಯ ಹಾಗೂ ಕಂಚಿನ ಕಂಠದ ಸಂಭಾಷಣೆಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಮಹಾನ್ ಕಲಾವಿದ ಅವರಾಗಿದ್ದರು, ಕೇವಲ ಬೆಳ್ಳಿತೆರೆಯ ನಟರಾಗಿ ಮಾತ್ರವಲ್ಲದೆ, ನಾಮ್ ಫೌಂಡೇಶನ್ ಮೂಲಕ ರೈತರು ಹಾಗೂ ಗ್ರಾಮೀಣ ಜನರಿಗಾಗಿ ಮಿಡಿದ ಸೂಕ್ಷ್ಮ ಸಂವೇದನೆಯ ವ್ಯಕ್ತಿತ್ವ ನಾನಾ ಪಟೇಕರ ಅವರದ್ದು,
ಪರಿಂದಾ, ಕ್ರಾಂತವೀರ, ನಟಸಾಮ್ರಾಟ, ಅಗ್ನಿಸಾಕ್ಷಿ, ಮುಂತಾದ ಅಮೋಘ ಚಿತ್ರಗಳಲ್ಲಿ ಅವರು ನೀಡಿದ ಅಭಿನಯ ಸರ್ವ ಶ್ರೇಷ್ಠ , ಅಂತಹ ನಟ ನಮ್ಮನ್ನಗಲಿರುವುದು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
ಈ ರೀತಿಯಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸ್ಮರಿಸಿಕೊಂಡಿದ್ದಾರೆ


