ಕ್ರಿಯಾಶೀಲ ಸಾಹಿತ್ಯ ಓದಿ-ಪ್ರೊ.ಸಿ.ಆರ್.ಯರವೀನತಲಿಮಠ.

ಧಾರವಾಡ 22 : ಕಲಿಕೆ‌ ನಿರಂತರವಾದ ಒಂದು ಪ್ರಕ್ರಿಯೆ ಆಗಿದ್ದು,ಸಾಹಿತ್ಯದ ವಿಧಗಳನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ‌ಮಾಡಬೇಕು.ಕ್ರಿಯಾಶೀಲ ಸಾಹಿತ್ಯವನ್ನು ಓದುವುದರಿಂದ ಕ್ರಿಯಾಶೀಲ ಚಿಂತನೆ ಬೆಳಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಆರ್.ಯರವೀನತಲಿಮಠ ಅಭಿಪ್ರಾಯ ಪಟ್ಟರು.

ಅವರು ಕರ್ನಾಟಕ ಕಲಾ ಕಾಲೇಜಿನ ಪಿ.ಜಿ.ಬ್ಲಾಕ್ ನ ಸಭಾಂಗಣದಲ್ಲಿ ಸ್ನಾತಕೋತ್ತರ ಇಂಗ್ಲೀಷ್ ವಿಭಾಗವು ಆಯೋಜಿಸಿದ ಇಂಗ್ಲಿಷ್ ವಿಷಯದಸ್ನಾತಕೋತ್ತರ ಪ್ರಥಮ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದಂತೆ ಇಂಗ್ಲಿಷ್ ಸಾಹಿತ್ಯವು ಕೂಡ ಹಳೆಯ ಭಾಷೆಗಳಾಗಿವೆ. ಇಂಗ್ಲಿಷ್ ಭಾಷೆ ಇತರೆ ಭಾಷೆಗಳಿಂದ ಶ್ರೀಮಂತ ಹೊಂದಿದೆ. ಮಹಾನ್ ಇಂಗ್ಲಿಷ್ ‌ಲೇಖಕರಾದ ಚೌಸರ್, ಶೆಕ್ಸಪಿಯರ್ ,ಡ್ರಡೇನ್, ಆಲ್ ಫ್ರಡ್ ಡೆನಿಸನ್ಸ್ ಅವರು ಇಂಗ್ಲಿಷ್ ‌ಭಾಷೆಗೆ‌ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಕಲಿಕೆ ನಿರಂತರವಾದ ಒಂದು‌ ಪ್ರಕ್ರಿಯೆ ಆಗಿದೆ. ಪ್ರತಿಯೊಬ್ಬರೂ ಕಲಿಯುವ ಕಡೆಗೆ ಹೆಚ್ಚು ಗಮನ ನೀಡಬೇಕು.

ಕರ್ನಾಟಕ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ.ಅಶೋಕ ಹುಲಿಬಂಡಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ‌ ಅಧ್ಯಯನದತ್ತ ಗಮನ ಹರಿಸಬೇಕು. ಗುರಿ ಮುಟ್ಟಿತು ನಿರಂತರವಾದ ಅಧ್ಯಯನ ಮಾಡಬೇಕು ಎಂದರು.

ಕರ್ನಾಟಕ ಕಲಾ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಂಯೋಜಕ ಮುಕುಂದ ಲಮಾಣಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನಿಂದ ಇರಬೇಕು. ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡಬೇಕು ಶಿಕ್ಷಕ ಮತ್ತು ತಂದೆ ತಾಯಿಗಳನ್ನು ಗೌರವಿಸಲು ಕಲಿಯಬೇಕು ಎಂದರು.

ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಮಾತನಾಡಿ ಸಾಹಿತ್ಯ ಓದುವುದರಿಂದ ಭಾಷಾ ಪ್ರಬುದ್ಧತೆ ಹೆಚ್ಚುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು
ಎಲ್ಲಾ ರೀತಿಯ ಸಾಹಿತ್ಯಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಬೇಕು. ಇಂಗ್ಲಿಷ್, ಕನ್ನಡ ಬರಹಗಾರರ ಕೃತಿಗಳನ್ನು ಓದಬೇಕು ಆಗ ಮಾತ್ರ ಸಾಹಿತ್ಯದಲ್ಲಿ ನೈಪುಣ್ಯತೆ ಹೊಂದಲು ಸಾಧ್ಯ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಡಾ‌.ಶ್ರೀದೇವಿ ಪಿ.ಜಿ.ಪ್ರಶಾಂತ ‌ಮಾಂಡ್ರೆ, ಚಂದ್ರಶೇಖರ ವೈದ್ಯ, ನಿಖಿತಾ, ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು, ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.

  • Related Posts

    ಫೆ 14 ರಂದು ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಲು ಆಗ್ರಹಿಸಿ

    ಧಾರವಾಡ 11 :ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಬಿಸಿಯೂಟ ಕಾರ್ಮಿಕರ ಸಂಘ(ರಿ)ದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

    ಗ್ರಾಮ ಆಡಳಿತ ಅಧಿಕಾರಿಗಳ‌ ಸಂಘದ ಮುಷ್ಕರ

    ಧಾರವಾಡ11 :  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ನಗರದ ತಹಶೀಲ್ದಾರ‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ್ದ ಕರೆಯ ಮೇರೆಗೆ ಗ್ರಾಮ ಆಡಳಿತ…

    RSS
    Follow by Email
    Telegram
    WhatsApp
    URL has been copied successfully!