ನಿರಂಜನ ಅವರು ಕನ್ನಡ ಸಾಹಿತ್ಯಕಾರರ ಮೇರು ಲೇಖಕ-ಡಾ.ಸಿ.ವೀರಣ್ಣ.

ಧಾರವಾಡ 10 : ನಿರಂಜನ ಅವರು ಕನ್ನಡ ಸಾಹಿತ್ಯಕಾರರ ಮೇರು ಲೇಖಕರಾಗಿದ್ದ ಅವರ ಬರವಣಿಗೆಯಲ್ಲಿ ಪ್ರಗತಿ ಶೀಲ ಸಾಮಾಜಿಕ ಹಿತವನ್ನು ನಿರಂಜನ ಅವರ ಬರಹದಲ್ಲಿ ‌ಕಾಣಬಹುದು. ಎಂದು ಸಾಹಿತಿ ಡಾ.ಸಿ.ವೀರಣ್ಣ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ನಿರಂಜನ ವಿಚಾರ ವೇದಿಕೆ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಾಯದಲ್ಲಿ ಆಯೋಜಿಸಿದ ನಿರಂಜನರ ಜನ್ಮ ಶತಮಾನೋತ್ಸವ ‌ನೆನಪಿನಲ್ಲಿ ನಿರಂಜನ ಬದಕು-ಸಾಹಿತ್ಯ ಒಂದು ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡದಲ್ಲಿ ನಿರಂಜನ ಮತ್ತು ಕಟ್ಟಿಮನಿ ಅವರು ಪ್ರಗತಿಶೀಲ ಬರಹಗಾರರಾಗಿದ್ದರು. ಸೃಜನಶೀಲ ಮನಸ್ಸು ಸತ್ಯವನ್ನು ಹೇಳುತ್ತದೆ‌ಆ ಸಾಲಿನಲ್ಲಿ ನಿರಂಜನರು ನಿಲ್ಲುತ್ತಾರೆ.
ನಿರಂಜನರು ಕನ್ನಡ ಬರಗಾರರಲ್ಲಿ ಶ್ರೇಷ್ಠ ಬರಹಗಾರರು ಅವರ ಅನೇಕ ಕೃತಿಗಳು ಸಾಮಾಜಿಕ ಪ್ರಗತಿಶೀಲವನ್ನು ಕಾಣಬಹುದು.ಇಂದಿನ ಬರಹಗಾರರು ಜನರಲ್ಲಿ ಪ್ರಗತಿಶೀಲ ಬೌದ್ಧಿಕ ಚಿಂತನೆ ಒಳಪಡಿಸುವ ಕಾರ್ಯ ಆಗಬೇಕಾಗಿದೆ. ನಿರಂಜನ ಅವರ ಗಾರ್ಕಿ ಅವರ ಕಾದಂಬರಿ ನಾಟಕವಾಗಿ ಬಹಳ ಜನಪ್ರಿಯವಾಯಿತು. ನಿರಂಜನ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ.ಇಂದಿನ ಬರಹಗಾರರು ನಿರಂಜನ ಅವರ ತತ್ವಗಳನ್ನು ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ಹಿರಿಯ ವಿಮರ್ಶಕರಾದ ಡಾ.ರಾಜೇಂದ್ರ ಚನ್ನಿ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಚಾಲಕ ಶಕ್ತಿಯಾಗಿ ನಿರಂಜನ ಅವರು ಕನ್ನಡ ಸಾಹಿತ್ಯವನ್ನು ಬೆಳೆಸಿದರು. ಅವರು ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ‌ನೀಡಿದ್ದಾರೆ. ಕನ್ನಡ ಪ್ರಗತಿಶೀಲ ಬರವಣಿಗೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ನೋಡಬೇಕಾಗಿದೆ ಎಂದ ಅವರು 1930-40ರ ದಶಕದಲ್ಲಿ ರೈತ ಚಳುವಳಿಗೆ ನಡೆದವು ಪುಲೆ,ಅಂಬೇಡ್ಕರ್ ಚಳುವಳೆ ನಡೆದ ಮುಖ್ಯವಾದ ಘಟ್ಟವಾಗಿದೆ ಎಂದರು. ನಿರಂಜನರು‌ ಬಹಳ ವಿಶಿಷ್ಠವಾದ ಬರಹಗಾರರಾಗಿದ್ದರು. ನಿರಂಜನರ ‌ಕಥೆಗಳಲ್ಲಿ ಪ್ರಯೋಗಶೀಲತೆಯನ್ನು ಕಾಣಬಹುದು. 50ರ ದಶಕದಲ್ಲಿ ನಿರಂಜನರು ಪ್ರಗತಿಶೀಲ ಬರಹವನ್ನು ನೀಡಿದರು. ನಿರಂಜನರು‌ ಸಾಮಾಜಿಕ ಅನ್ಯಾಯಗಳನ್ನು ತಮ್ಮ ಬರಹದಲ್ಲಿ ನಿರಂಜನರನ್ನು ಕಾಣಬಹುದು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್‌.ಎನ್.ಮುಕುಂದರಾಜ ಮಾತನಾಡಿ…ಪ್ರಸ್ತುತ ಕಾಲವನ್ನು ಸರಿಯಾಗಿ ಗ್ರಹಿಸಿದಾಗ ಸಂವಿಧಾನವನ್ನು ಅರ್ಥವನ್ನು ಮಾಡಿಕೊಳ್ಳಲು ಸಾಧ್ಯ. ಎಂದು ಅವರು ಸಾಹಿತ್ಯ ಅಕಾಡೆಮಿ ವಿವಿಧ ಮಹನೀಯರ ಜೀವನ ದರ್ಶನವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಅನೇಕ ಮಹಿಳಾ ಬರಹಗಾರರ ಮುಖಾಂತರ ವಿವಿಧ ವಿಷಯಗಳ ಮೇಲೆ ಕೃತಿಗಳನ್ನು ರಚಿಸಲಾಗುತ್ತದೆ ಎಂದರು. ಅನೇಕ ಲೇಖಕರು ಸಾಮಾಜಿಕ ವಿಷಯಗಳನ್ನು ಇಟ್ಟುಕೊಂಡು ಸಮಾಜಪರ ಬರಹಗಳನ್ನು ಕೃತಿಗಳ ಮೂಲಕ ರಚಿಸಿ ಸಮಾಜಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ನಿರಂಜನರ ಬರಹಗಳು ಸಾಮಾನ್ಯ ಜನಪರ ಹಿತ ಚಿಂತನೆಗಳನ್ನು ಒಳಗೊಂಡಿವೆ. ನಿರಂಜನರ ಬರಹಗಳಿಂದ ಓದುಗರ ಸಂಖ್ಯೆ ಹೆಚ್ಚಾಯಿತು. ಕನ್ನಡ ಸಾಹಿತ್ಯಕ್ಕೆ ಸಮಾಜ ಬದಲಾವಣೆ ಮಾಡಲು ಕನ್ನಡ ಸಾಹಿತ್ಯಕ್ಕೆ ಶಕ್ತಿ ಇದೆ ಎಂದರು. ಕನ್ನಡ ಸೂಕ್ಷ್ಮ ಆಯಾಮಗಳನ್ನು ನೋಡಬಹುದಾಗಿದೆ ಎಂದ ಅವರು ಇಂದಿನ ಸಮೂಹ ಮಾಧ್ಯಮ ಗಳಿಂದ ಜನಪರ ಹಿತ ಚಿಂತನೆ ಸಾಹಿತ್ಯದ ಕುರಿತು ಹೆಚ್ಚಿನ ಕೆಲಸ ಮಾಡಬೇಕಾಗಿದೆ ಎಂದರು.

 

ಮೊದಲ ತಾಂತ್ರಿಕ ಗೋಷ್ಠಿ:

ನಿರಂಜನರ ಜೀವನ ಮತ್ತು ದರ್ಶನ ತಾಂತ್ರಿಕ ಗೋಷ್ಠಿಯಲ್ಲಿ ಹಿರಿಯ ಲೇಖಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ ಪ್ರಾದೇಶಿಕತೆ ಯನ್ನು ನಿರಂಜನರು ತಮ್ಮ ಬರಹಗಳ ಮೂಲಕ ಕಟ್ಟಿ ಕೊಟ್ಟರು. ನಿರಂಜನರು ಮತ್ತು ಬಸವರಾಜ ಕಟ್ಟಿಮನಿಯವರು ಅವರು ಸಾಮಾಜಿಕವಾಗಿ ರೈತರನ್ನು, ಕಾರ್ಮಿಕರ ಜೀವನವನ್ನು ಒಳಗೊಂಡಿತ್ತು ಎಂದ ಅವರು ನಿರಂಜನರು ತಮ್ಮ ಕಾದಂಬರಿಗಳಲ್ಲಿ ‌ಸಮುದಾಯದ. ಜೀವನ ಬವಣೆ ಮತ್ತು ‌ಸಮಸಮಾಜವನ್ನು ಕಾಣಬಹುದು ಎಂದರು. ಅವರ ಬರಹಗಳಲ್ಲಿ ಸಾಮಾಜ್ಯಶಾಹಿ ಮತ್ತು ಅಧಿಕಾರಿ ಶಾಹಿ ವ್ಯವಸ್ಥೆ ಸಮಗ್ರ ಚಿತ್ರವನ್ನು ನೀಡುತ್ತದೆ ಎಂದರು.

ಚಿಂತಕ ಡಾ‌.ಬಿ.ಆರ್.ಮಂಜುನಾಥ ಮಾತನಾಡಿ ಲಿಂಗ ಅಸಮಾನತೆ, ಪ್ರಗತಿಶೀಲ ಸಮಾಜವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದ ಅವರು ಅನಕೃ ಮತ್ತು ನಿರಂಜನರ ಸಾಹಿತ್ಯವು ಭಿನ್ನವಾಗಿದ್ದು, ನಿರಂಜನರ ಸಾಹಿತ್ಯವು ಸಮಾಜಮುಖಿಯಾದ ಸಾಹಿತ್ಯವನ್ನು ಒಳಗೊಂಡಿದೆ ಎಂದರು.

ಪ್ರಾಧ್ಯಾಪಕ ಡಾ.ರಂಗನಾಥ ಕಂಟನಕುಂಟೆ ಅವರು ಪ್ರಗತಿಪರ ಚಳುವಳಿಗಳ ಒಡನಾಟ ಎಂಬ ವಿಷಯದ ಕುರಿತು ‌ಮಾತನಾಡಿ….ನಿರಂಜನರ ಸಾಹಿತ್ಯ ಹೊಸ ಆಯಮಾ ಸಮಾಜಕ್ಕೆ ನೀಡಿತು. ಇಂದಿನ ವಿದ್ಯಾರ್ಥಿಗಳು ನಿರಂಜನರ ಸಾಹಿತ್ಯವನ್ನು ಓದಬೇಕು.ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಸತ್ಯಕ್ಕೆ ದೂರವಾದ ಮಾಹಿತಿಯಿಂದ ಯುವ ಮನಸ್ಸುಗಳು ಮೇಲೆ ಪ್ರಭಾವ ಬೀರುತ್ತಿವೆ ಎಂದರು.

ನಿರಂಜನರ ಸಾಹಿತ್ಯದ ಕುರಿತು ಎರಡನೇ ಗೋಷ್ಠಿ:

ಹಿರಿಯ ಪತ್ರಕರ್ತ ಡಿ‌.ಉಮಾಪತಿ ಅವರು ಪತ್ರಿಕೆ ಮತ್ತು ಇತರ ಬರಹಗಳು ಎಂಬ ವಿಷಯದ ಕುರಿತು ‌ಮಾತನಾಡಿ…ಇಂದಿನ ವಿದ್ಯಾರ್ಥಿಗಳು ಚಳುವಳಿಗಳ ಬಗ್ಗೆ ತಿಳಿದುಕೊಳ್ಳವದು ಅಗತ್ಯ ಇದೆ ಎಂದ ಅವರು ದೇಶ ಕಾರ್ಪೊರೇಟ್ ಸಂಸ್ಕೃತಿಗೆ ಇಂದಿನ ಪತ್ರಿಕೆಗಳು ಒಳಗಾಗಿವೆ. ನಿರಂಜನರು ಪತ್ರಿಕೆಗಳ ಕುರಿತು ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದ ಅವರು ಪತ್ರಕರ್ತರು ಸಾರ್ವಜನಿಕ ಸಂಪರ್ಕಗಳಾಗಿದ್ದಾರೆ ಎಂದು ಉಲ್ಲೇಖಿಸಿದ ಅವರು ಪ್ರಸ್ತುತ ಜಾಹಿರಾತುಗಳ ಪತ್ರಿಕೆಗಳ ಮುಖ್ಯ ಎನಿಸಿವೆ ಎಂದ ಅವರು
ಮಾಧ್ಯಮ ಸಂಸ್ಥೆಗಳು ಇಂದು ಆಳುವ ಸರಕಾರದ ಪರವಾಗಿವೆ ಎಂದು ಅವರು ಫೇಕ್ ನ್ಯೂಸ್ ಹರಡುವಿಕೆಯಿಂದ ಆಲೋಚನಾ ಶಕ್ತಿ ಕಡಿಮೆ ಆಗುತ್ತದೆ ಎಂದ‌ ಅವರು ಪತ್ರಿಕಾ ಸ್ವಾತಂತ್ರ್ಯ ಧಕ್ಕೆ ಉಂಟಾಗುತ್ತದೆ ಎಂದರು. ನಿರಂಜನ ಅವರು ಹುಬ್ಬಳ್ಳಿಯ ಜನಶಕ್ತಿ ಪತ್ರಿಕೆಯ ಸಂಪಾದಕರಾಗಿದ್ದರು ಎಂದರು.ನಿರಂಜನರ ಪತ್ರಿಕೋದ್ಯಮ ಕುರಿತು ಹೆಚ್ಚಿನ ಅಧ್ಯಯನ ಆಗಬೇಕಾಗಿದೆ ಎಂದ ಅವರು ನಿರಂಜನರು ರಾಷ್ಟ್ರ ಬಂಧು ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು ಎಂದರು.

ನಿರಂಜನರ ಸಾಹಿತ್ಯ ಸೃಜನಾತ್ಮಕವಾಗಿದೆ. ನಿರಂಜನ ಇಪ್ಪತ್ತೈದು ಕಾದಂಬರಿಗಳಿದ್ದು ಅವು ಎಲ್ಲವೂ ಸಮಾಜದ ಪರವಾದ ಸಾಹಿತ್ಯವಾಗಿದೆ ಅವರ ಸಾಹಿತ್ಯವು ಸಾಮಾಜಿಕ ಪರಿವರ್ತನೆ ವಿಶಿಷ್ಠವಾದ ಸಾಹಿತ್ಯ ಒಳಗೊಂಡಿತ್ತು. ಎಂದ ಅವರು ನಿರಂಜನರ ‌ಕುರಿತು ಸಮಕಾಲಿನ ಸಾಹಿತ್ಯದಲ್ಲಿ ಹೆಚ್ಚು ಕೃತಿಗಳು ರಚನೆ ಆಗಿವೆ ಎಂದರು.

ಕವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಅನುಸಯಾ ಕಾಂಬಳೆ ಅವರು ನಿರಂಜನರ ಕಥೆಗಳು ಎಂಬ ವಿಷಯದ ಕುರಿತು ಮಾತನಾಡಿ ನಿರಂಜನರ‌ ಕಥೆಗಳಲ್ಲಿ ‌ಸಮುದಾಯ ಆಧಾರಿತ ಚಿಂತನೆ ಇದೆ. ಮಾರ್ಕ್ಸನ ಪ್ರಭಾವ ನಿರಂಜನರ ಕಥೆಗಳಲ್ಲಿ ಕಾಣಬಹುದು ಎಂದ‌ ಅವರು ಅವರ ಕಥೆಗಳಲ್ಲಿ ಯುದ್ದ, ಬಂಡವಾಳಶಾಹಿ, ಸ್ತ್ರೀವಾದ ,ಆರ್ಥಿಕ ಅಸಮಾನತೆ ಕುರಿತು ಅಂಶಗಳನ್ನು ಹೊಂದಿವೆ ಎಂದರು.

ಕಾರ್ಯಕ್ರಮದಲ್ಲಿ‌ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಅರ್ಜುನ ಗೊಳಸಂಗಿ, ನಿರಂಜನ ವಿಚಾರ ವೇದಿಕೆಯ ಸಂಷಾಲಕರಾದ ಎಚ್.ಜಿ.ದೇಸಾಯಿ, ನಿರಂಜನ ವಿಚಾರ ವೇದಿಕೆಯ ಕೆ.ರಾಮರೆಡ್ಡಿ. ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ, ಪತ್ರಕರ್ತೆ ಡಾ.ಆರ್.ಪೂರ್ಣಿಮಾ, ರಂಜಾನ ದರ್ಗಾ, ಸೇರಿದಂತೆ ಇತರರು ಇದ್ದರು.

  • Related Posts

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ಧಾರವಾಡ 25 : ಬೆಳಗಾವಿಯ ಜಿಲ್ಲೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆಯವತಿಯಿಂದ ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಸಾರಿಗೆ ಸಚಿವರಾದ…

    ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯಿಂದಲೇ ಅಡ್ಡಗಾಲು : ಏಗನಗೌಡರ ಆರೋಪ

    ಧಾರವಾಡ 25 : ಧಾರವಾಡ ಮಹಾನಗರ ಪಾಲಿಕೆ ಗೆ ಬಿಜೆಪಿಯಿಂದಲೇ ಅಡ್ಡಗಾಲಾಗಿದೆ ಎಂದು ಕಿಡಿಕಾರಿದ ಅರವಿಂದ ಏಗನಗೌಡರ ಕಿಡಿಕಾರಿದರು ಅವರು ಪತ್ರಿಕಾಗೋಷ್ಠಿ ಮಾತನಾಡಿ, ಧಾರವಾಡ ಮಹಾನಗರ ಪಾಲಿಕೆಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ಸರಕಾರ ಅನುಮೋದನೆ ನೀಡಿ ಗೆಜೆಟ್ ಹೊರಡಿಸಿದ್ದು ಧಾರವಾಡದ ಸಮಸ್ತ…

    RSS
    Follow by Email
    Telegram
    WhatsApp
    URL has been copied successfully!