ಸಾಧನೆ ಮಾಡಲು ಉತ್ಸಾಹ ಬಹಳ ಮುಖ್ಯ- ಪ್ರೊ.ಶಶಿಧರ ತೋಡಕರ

ಧಾರವಾಡ 10 : ಸಾಧನೆ ಮಾಡಲು ಉತ್ಸಾಹ ಬಹಳ ಮುಖ್ಯ ಸಾಧಿಸಲು ಅನೇಕ ಸವಾಲುಗಳ ಎದುರಾಗುತ್ತವೆ ಅವುಗಳನ್ನು ಎದುರಿಸಿ
ಸಾಧನೆ ಮಾಡಿ ಎಂದು ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಶಶೀಧರ ತೋಡಕರ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ‌ಕಲಾ‌ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗವು ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ‌ ಮಾತನಾಡಿದರು.

ಶೈಕ್ಷಣಿಕವಾಗಿ ಪಿಯುಸಿ ಅತ್ಯಂತ ಮುಖ್ಯ ಹಂತವಾಗಿದೆ. ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ವಿದ್ಯಾರ್ಥಿ ಗಳು ಮೂರು ಮುಖ್ಯವಾದ ಅಂಶಗಳನ್ನು ಗಮನದಲ್ಲಿಡುವದು ಅಗತ್ಯ. ಅದರಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಆಲಿಸುವದು, ಪಾಲಿಸುವುದು ‌ಮತ್ತು ಯೋಚಿಸುವುದನ್ನು ಕಲಿಯಬೇಕು. ಕಲಿಕಾ ಹಂತದಲ್ಲಿ ತಪ್ಪುಗಳಾಗುವದು ಸಹಜ ಆದರೆ ತಪ್ಪನ್ನು ತಿದ್ದಿಕೊಳ್ಳುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು. ಒಬ್ಬ ಶಿಕ್ಷಕ ತಾಯಿಯ ಮನಸ್ಸನ್ನು ಹೊಂದಿರುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳ ಮೇಲೆ ಸದಾ ಕಾಳಜಿಯನ್ನು ಶಿಕ್ಷಕ ಹೊಂದಿರುತ್ತಾನೆ ಎಂದ ಅವರು ಬದುಕನ್ನು ರೂಪಿಸಿಕೊಳ್ಳಲುಒಂದು ಸವಾಲಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದ ಅಧ್ಯಯನ ಅಗತ್ಯ. ನಿಮ್ಮ ಶಕ್ತಿ ಸಾಮಾರ್ಥ್ಯವನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ಕಲಾ ಕಾಲೇಜಿನ ಪಿಯುಸಿ ವಿಭಾಗದ ಸಂಯೋಜಕರಾದ ಡಾ.ಮುಕುಂದ ಲಮಾಣಿ ಮಾತನಾಡಿ ಈ ಕಳೆದ ವರ್ಷ ಕರ್ನಾಟಕ ಕಲಾ‌ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ ಮಾಡಿದ್ದು ಸಂತಸದ ಸಂಗತಿ ಎಂದ‌ ಅವರು ವಿದ್ಯಾರ್ಥಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಮಾತನಾಡಿ ವಿದ್ಯಾರ್ಥಿಗಳ ಸಾಹಿತ್ಯವನ್ನು ಓದುವುದನ್ನು ಬೆಳೆಸಿಕೊಳ್ಳಬೇಕು. ಸತತ ಪರಿಶ್ರಮದಿಂದ ಅಧ್ಯಯನ ‌ಮಾಡಬೇಕು. ಕಾಲೇಜಿನ ಕೀರ್ತಿ ಹೆಚ್ಚಿಸಿ ಶಿಕ್ಷಕರನ್ನು ಗೌರವಿಸಬೇಕು ಎಂದು ಅವರು ಕರ್ನಾಟಕ ಕಲಾ ಕಾಲೇಜು ದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುವುದೇ ಒಂದು ಸೌಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ.ಎಸ್.ಜಿ.ಜಾಧವ್, ಪ್ರೊ.ವಿಲಾಸ ದೊಡಮನಿ, ವಿಜಯಲಕ್ಷ್ಮಿ ಪಾಟೀಲ್, ಡಾ. ವೀರೇಶ್ ಬಿಸನಳ್ಳಿ, ಅಶಾ ಪಾಟೀಲ್, ಶ್ವೇತಾ ಪಾಣಿಘಟ್ಟಿ, ಶೈಲಜಾ ವಡಕನವರ, ಅಜ್ಜನಗೌಡ ಮೂಲಿಮನಿ, ಭಾಗಿರತಿ ಮ್ಯಾಗೇರಿ, ಅಶ್ವಿನಿ ಗಸ್ತಿ, ಪಾರ್ವತಿ ಪಟ್ಟಣಶೆಟ್ಟಿ, ವಿಜಯ ಪವಾರ, ಇಮ್ರಾನ್ ಯಾದಗಿರಿ, ರವಿ ಕೆಸರಕರ, ವಿನಿತಾ ಮಹೇಂದ್ರಕರ, ಸಭಾಅಪ್ಸರ ಇನಾಮದಾರ, ಡಾ. ಶ್ರೀಧರ್ ಮುದುಕವಿ, ಸಂತೋಷ್ ರೇವಡಿಹಾಳ, ಸುಬ್ರಹ್ಮಣ್ಯ ಭೂತೆ ಪಿ.ಯು.ಸಿ ಕಲಾ ಹಾಗೂ ವಾಣಿಜ್ಯ ವಿಭಾಗ.ಸೇರಿದಂತೆ ‌ಪಿಯುಸಿ ವಿಭಾಗದ ಕಲಾ ಮತ್ತು ವಾಣಿಜ್ಯ ವಿಭಾಗದ ಬೋಧಕರು ಹಾಜರಿದ್ದರು.

  • Related Posts

    ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ

    ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.…

    ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ

    ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು…

    RSS
    Follow by Email
    Telegram
    WhatsApp
    URL has been copied successfully!