
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು.
ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಹಮಾಲರ ಸಂಘದ ಅಧ್ಯಕ್ಷರಾದ ಸಹದೇವ ತಹಸೀಲ್ದಾರ, ಅಲ್ಲಾಭಕ್ಷ ನವಲಗುಂದ, ರಾಜು ಸಿದ್ದಕ್ಕನವರ, ಧೂಲಾಸಾಬ್ ಯಕ್ಕುಂಡಿ, ದ್ಯಾಮಣ್ಣ ರಾಣಗೇರ್, ದವಲಾಸಬ್ ಬೈಚಾಬಳ, ಅಲ್ಲಸಾಬ್ ಜಿಂಣ್ಣೂರ್, ಶಿವಾನಂದ ಹಾವೋಜಿ, ಮಲ್ಲಪ್ಪ ನೆಲೋಡಿ, ಮೋದಿನಸಾಬ್ ಮುಲ್ಲಾ, ಗಂಗಪ್ಪ ರಾಮದುರ್ಗ, ಶೇಕಪ್ಪ ಮನೆಪ್ಪನವರ ಸೇರಿದಂತೆ ನೂರಾರು ಹಮಾಲಿ ಕಾರ್ಮಿಕರು ಉಪಸ್ಥಿತರಿದ್ದರು.