ಜ. 19 ರಂದು ಗುರುವಿನ ಗುರು ಅಭಿನಂದನಾ ಗ್ರಂಥ ಹಾಗೂ ಜೀಣೋದ್ಧಾರ ಕಟ್ಟಡಗಳ ಉದ್ಘಾಟನೆ
ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ಹಾಗೂ ಮಾದರಿ ಶಿಕ್ಷಕರಾದ ವಿಶ್ರಾಂತ ಪ್ರಾಚಾರ್ಯ ಸುಧಾಕರ ಬೇಲಿ ಅವರ ಅಭಿನಂದನಾ ಸಮಾರಂಭವನ್ನು ನಾಳೆ ಜನವರಿ 19, 2025 ರಂದು ಬೆಳಿಗ್ಗೆ 10:30 ಗಂಟೆಗೆ ಧಾರವಾಡ ಬಾಸೆಲ್ ಮಿಶನ್ ಶಿಕ್ಷಕ ಮತ್ತು ಶಿಕ್ಷಕಿಯರ ತರಬೇತಿ ಸಂಸ್ಥೆ ಆವರಣದಲ್ಲಿ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಕರ್ನಾಟಕ ಉತ್ತರ ಸಭಾ ಪ್ರಾಂತ್ಯದ ಸಹಕಾರ್ಯದರ್ಶಿಗಳು ಹಾಗೂ ಹೆಬಿಕ್ ಮೆಮೋರಿಯಲ್ ಚರ್ಚ ಸಭಾಪಾಲಕರಾದ ರೆವರೆಂಡ್ ಸ್ಯಾಮುವೆಲ್ ಕೆಲ್ವಿನ್ ಅವರು ವಹಿಸಲಿದ್ದಾರೆ.
ಜೀಣೋದ್ಧಾರಗೊಂಡ ಕಟ್ಟಡಗಳನ್ನು ಹಿರಿಯ ನ್ಯಾಯವಾದಿ ಹಾಗೂ ಅಥಣಿ ವಿಮೋಚನಾ ಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್.ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಗುರುವಿನ ಗುರು ಅಭಿನಂದನಾ ಗ್ರಂಥವನ್ನು ಹೃದಯ ರೋಗ ತಜ್ಞ ಡಾ.ಎಸ್.ಆರ್.ಹೆಬ್ಬಾಳ ಅವರು ಮತ್ತು ಹಳೆಯ ವಿದ್ಯಾರ್ಥಿಗಳ ಕೃತಿಗಳ ಲೋಕಾರ್ಪಣೆಯನ್ನು ದರ್ಮದರ್ಶಿ ವಿಜಯಕುಮಾರ ವ್ಹಿ.ದಂಡಿನ ಮಾಡಲಿದ್ದಾರೆ.
ವಿಶ್ರಾಂತ ಪ್ರಾಚಾರ್ಯ ಸುಧಾಕರ ಬೇಲಿ ಅವರ ಕುರಿತು ಅಭಿನಂದನಾಪರ ನುಡಿಗಳನ್ನು ವಿಲ್ಸ್‍ನ್ ಮೈಲಿ ಹಾಗೂ ಎಮ್.ಎಮ್. ಚಿಕ್ಕಮಠ ಆಡಲಿದ್ದಾರೆ. ಈ ಭವ್ಯ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಸುಜಯ ಪಿ.ಹೊಂಗಲ ವಹಿಸಲಿದ್ದು, ಅಭಿನಂದಿತರಾದ ಸುಧಾಕಾರ ಬೇಲಿ ಅವರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಬಾಸೆಲ್ ಮಿಶನ್ ಪ್ರಾಯೋಗಿಕ ಶಾಲೆ, ಬಾಸೆಲ್ ಮಿಶನ್ ಶಿಕ್ಷಕ ಶಿಕ್ಷಕಿಯರ ತರಬೇತಿ ಸಂಸ್ಥೆ, ತರಬೇತಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರು, ಭೋದಕ, ಭೋದಕೇತರ ಸಿಬ್ಬಂದಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.