ನವಲಗುಂದ : ಅ 23 ರಂದು ನಡೆಯುವ ಪಶ್ಚಿಮ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿನಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪದವಿಧರರು ಮತದಾನ ಮಾಡುವ ಮೂಲಕ ಅವರನ್ನು ಗೆಲ್ಲಿಸಬೇಕೆಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಶನಿವಾರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಶ್ಚಿಮ ಪದವೀಧರ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೋಹನ ಲಿಂಬಿಕಾಯಿ ಅವರು ಅಭ್ಯರ್ಥಿಯಾಗಿದ್ದು ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಅವರು ವಿಶ್ವವಿದ್ಯಾಲಯದ ಸಿನೆಟ್ ಸಿಂಡಿಕೇಟ್ ಅಕ್ಯಾಡೆಮಿ ಕೌಂನ್ಸಿಲ್ ಸದಸ್ಯರಾಗಿ ರಾಜ್ಯ ವಕೀಲ ಪರಿಷತ್ತಿನ ಉಪಾಧ್ಯಕ್ಷರಾಗಿ, ಪ್ರಾಚಾರ್ಯರಾಗಿ, ಮಾಜಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಅನುಭವವನ್ನು ಪದವಿಧರರ ಸಲುವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು.
ಪದವೀಧರ ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ನವಲಗುಂದ ಕ್ಷೇತ್ರದ ಹೆಚ್ಚು ಪದವಿಧರರು ಆಶೀರ್ವದಿಸಿ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕು ಎಂದು ಕೋನರಡ್ಡಿ ಮನವಿ ಮಾಡಿದರು.
ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ ನಾನು ವಿಧಾನ ಪರಿಷತ್ ಸದಸ್ಯನಾಗಿ ಹಲವಾರು ಅಭಿವೃದ್ಧಿ ಪರ, ಪದವೀಧರರ ಸಮಸ್ಯೆಗಳ ಕುರಿತು ಕಾರ್ಯನಿರ್ವಹಿಸಿದ್ದು ಈಗ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನನ್ನ ಹೆಸರಿನ ಮುಂದೆ 1 ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕೆಂದು ಪದವಿಧರ ಮತದಾರರಲ್ಲಿ ಮನವಿ ಮಾಡಿದರು.
ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳನ್ನು ನಿರ್ಮಿಸಿ ರಾಜ್ಯದಲ್ಲಿಯೇ ಹೆಸರು ಗಳಿಸಿರುವ ಶಾಸಕರು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.
ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ್ ಹಿರೇಗೌಡ್ರ,ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ತದ್ದೇವಾಡಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಮುರಗಯ್ಯಜ್ಜ ವೀಕ್ತಮಠ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಹುಬ್ಬಳ್ಳಿ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ಎಮ್.ಎಸ್. ರೋಣದ, ಆರ್.ಎಚ್. ಕೋನರಡ್ಡಿ, ಜೀವನ ಪವಾರ, ಅರುಣಕುಮಾರ ಮಜ್ಜಗಿ, ಅಲ್ಲಸಾಬ್ ಕಲ್ಲಕುಟ್ರಿ, ಪ್ರಚಾರ ಸಮಿತಿ ಅಧ್ಯಕ್ಷರ ಆನಂದ ಹವಳಕೋಡ್, ಕುಮಾರ ಮಾದರ್, ಮಹಾಂತೇಶ ಹಂಚಿನಾಳ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ನಂದಿನಿ ಹಾದಿಮನಿ, ಪ್ರೇಮಾ ನಾಯ್ಕರ, ಹುಸೇನಬಿ ಧಾರವಾಡ, ಕಸ್ತುರೆವ್ವ ರಾಯನಾಯ್ಕರ, ಬಿ.ಎಲ್. ಜೈನರ, ಭೀಮಣ್ಣ ಹೆಬ್ಬಳ್ಳಿ, ಕಲ್ಲಪ್ಪ ಹುಬ್ಬಳ್ಳಿ, ರಾಜಣ್ಣ ಹಳ್ಯಾಳ, ಕುಮಾರ ಮಾದರ, ದಾವಲಸಾಬ ಖುದ್ದಣ್ಣವರ, ಪ್ರಕಾಶ ಶಿಗ್ಲಿ, ಪರಪ್ಪ ಗಾಣಿಗೇರ, ಡಿ.ಕೆ. ಹಳ್ಳದ, ಕಿರಣ ಉಳ್ಳಿಗೇರಿ, ಶಿವಾನಂದ ಬಂಡಿವಾಡ, ಶಿವಾನಂದ ತಡಸಿ, ಮೊದೀನ ಶಿರೂರ, ಶಂಕರು ಶಿರಗುಪ್ಪಿ, ಮದರಸಾಬ ಉಗರಗೋಳ, ಶಂಕರು ಗಾಣಿಗೇರ, ಅರುಣ ಸುಣಗಾರ, ರಮೇಶ ನವಲಗುಂದ, ಸೋಮು ಸಿದ್ನಾಳ, ಈರಣ್ಣ ಹಡಪದ, ಮಾಂತೇಶ ತೋಟಿ, ಶೇಕಣ್ಣ ಕಡ್ಲಿ, ಹನಮಂತ ಕೆಳಗೇರಿ, ಅಲ್ಲಾಸಾಬ ಕಲಕುಟ್ರಿ, ಏಕನಾಥ ಜಾಧವ, ಕರಿಯಪ್ಪ ಕೋಟೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





