
ಧಾರವಾಡ 10 : ಫೆಬ್ರವರಿ 12 ರಂದು ನಗರದ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ನಮ್ಮ ಬಸವ ಸೇನೆ (ರಿ) ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಆಶ್ರಯದಲ್ಲಿ ನಿವೃತ್ತ ಕ್ಯಾಪ್ಟನ್ ಬಿ.ಬಿ.ಚಕ್ರಸಾಲಿ ರಚನೆಯ “ಶರಣರ ಸದನ” ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಸಾಮಾಜಿಕ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ “ಬಸವ ಶ್ರೀ” ಹಾಗೂ “ಬಸವ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ ಕೆ. ದಶರಥ್ ಉಪಸ್ಥಿತರಿರುವರು. ಬಸವಸೇನೆ, ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷರಾದ ಲೋಕೇಶ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಪುಷ್ಪಾ ಬಸನಗೌಡರ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಗಂಗಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕರಾದ ವಿ. ಕೃಷ್ಣಮೂರ್ತಿ, ಆರ್ಮಿ ನಿವೃತ್ತ ಅಧಿಕಾರಿ ಬಿ.ಬಿ.ಚಕ್ರಸಾಲಿ, ಶ್ರೀ ಶಿವಾನಂದಸ್ವಾಮಿ ಬೇತೂರಮಠ ಟ್ರಸ್ಟ್ನ ಅಧ್ಯಕ್ಷರಾದ ಮಹಾಂತೇಶ ಬೇತೂರಮಠ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಧಾರವಾಡ ಜಿಲ್ಲಾಧ್ಯಕ್ಷರಾದ ಅಶೋಕ ಶೆಟ್ಟರ್, ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ (ಕ್ರಾಂತಿ) ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುನಾಥ ಹಿರೇಮನಿ, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಬಸವರಾಜ ಬೂದಿಹಾಳ ಭಾಗವಹಿಸಲಿದ್ದಾರೆ.
“ಬಸವ ಶ್ರೀ” ಪ್ರಶಸ್ತಿಯನ್ನು ಡಾ. ವೀಣಾ ಬಿರಾದಾರ, ಡಾ. ಲತಾ ಎಸ್. ಮುಳ್ಳೂರ, ಡಾ. ಕುಮದ್ವತಿ ಶಂಕರಗೌಡ ಭರಮಗೌಡ್ರ, ಬಿ. ಆರ್. ಚಂದ್ರಶೇಖರ, ರಮ್ಯಾ ವರ್ಷಿಣಿ, ವಿಲಿಯಮ್ಸ್, ಸುಲೋಚನಾ ಕೆ. ಮುದಲಿಯಾರ, ವಿಜಯಲಕ್ಷೀ ಕಮ್ಮಾರ, ಯಮನಪ್ಪ ಜಾಲಗಾರ, ಉಮರಖನ್ ಮೈ. ಚಪ್ಪರಬಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
“ಬಸವ ರತ್ನ” ಪ್ರಶಸ್ತಿಯನ್ನು ಮಹಾಂತೇಶ ಬ. ಬಡ್ಲಿ, ಬಸವರಾಜ ಎಸ್. ಕುದರಿ, ಸುನಂದಾ ರಾಮ್ ಕರಿಗಾರ, ಗಂಗಾಂಬಿಕೆ ತಿಪ್ಪಣ್ಣ ಕುರುಬರ, ಗಂಗವ್ವ ಮಲ್ಲಿಕಾರ್ಜುನ ಮುಗಳಿ, ಕು. ನೇತ್ರಾವತಿ ಮಡ್ಲಿ, ಡಾ. ಭೀಮಾಶಂಕರ ಎಂ.ಆರ್., ಕು. ಸುವರ್ಣಾ ಬಿ. ಸುರಕೋಡ, ಸತೀಶ ಎಸ್. ಸರ್ಜಾಪೂರ, ರತ್ನಾ ಗೋಧಿ, ಮಂಜುನಾಥ ತಿಮ್ಮಣ್ಣ ಹಿರೇಮನಿ, ರತ್ನಕುಮಾರ, ಅಶ್ವತಪ್ಪ, ಸಿದ್ಧಾರ್ಥ ಎಲ್. ಪಾತ್ರೋಟ, ಶ್ರೀನಿವಾಸ ಅವರೊಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವರಾಜ ಆನೆಗುಂದಿ ಹಾಗೂ ನಮ್ಮ ಬಸವ ಸೇನೆಯ ರಾಜ್ಯಾಧ್ಯಕ್ಷರಾದ ಲೋಕೇಶ್ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.