
ಧಾರವಾಡ 10 : ಧಾರವಾಡದ ಗಾಂಧಿ ಚೌಕ್ ಬಳಿ ಇರುವ ದತ್ತಾತ್ರೆ ಗುಡಿಯ ಸಭಾಂಗಣದಲ್ಲಿ ಧಾರವಾಡದ ಬಂಗಾರ ಅಂಗಡಿ ಮಾಲೀಕರ ಸಭೆ ಕರೆಯಲಾಗಿತ್ತು ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಗಮನ ಬೇರೆ ಕಡೆ ಸೆಳೆದು ಕಳ್ಳತನ ಮಾಡುತ್ತಿರುವುದು ಮತ್ತು ಕಳ್ಳತನದ ಬಂಗಾರ ಖರೀದಿ ಇದರ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮತ್ತು ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಂಗಾರ ಮಾಲೀಕ ಸದಸ್ಯರು ಮತ್ತು ಅಂಗಡಿಯ ಮಾಲೀಕರು ಉಪಸ್ಥಿತರಿದ್ದರು.
ಉಪ ಆಯುಕ್ತ ಪ್ರಶಾಂತ್ ಸಿದ್ದನಗೌಡರ, ಸಿ ಪಿ ಆಯ್ ನಾಗೇಶ್ ಕಾಡು ದೇವರಮಟ್.ಪಿ ಎಸ್ ಏ ನದಾಫ್ಎ, ಎಸ್ ಐ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.