ನಿರುದ್ಯೋಗಿಗಳಿಗೆ “ಉದ್ಯೋಗ”- ಎಸ್.ಪಿ.ಫೌಂಡೇಶನ್ ಅಮೋಘ ಕಾರ್ಯ

ನವಲಗುಂದ 10 : ಸಣ್ಣಪುಟ್ಟ ಸಹಾಯ ಮಾಡುವ ಜೊತೆಗೆ ಜೀವನದುದ್ದಕ್ಕೂ ಬದುಕು ಕಟ್ಟಿಕೊಳ್ಳಲು ನೌಕರಿ ಕೊಡಿಸುತ್ತಿರುವ ಎಸ್.ಪಿ.ಫೌಂಡೇಶನ್ ಕಾರ್ಯ ಅಮೋಘ ಎಂದು ಅಣ್ಣಿಗೇರಿಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ನುಡಿದರು.

ನವಲಗುಂದ ಮಾಡೆಲ್ ಹೈಸ್ಕೂಲಿನಲ್ಲಿ ಎಸ್.ಪಿ.ಫೌಂಡೇಶನ್ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗಿಗಳೇ ಇಲ್ಲದಂತೆ ಮಾಡಲು ಹೊರಟಿರುವ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ನಾವಿರುವ ನೆಲದ ಋಣ ತೀರಿಸಲು ಸದಾಕಾಲ ಫೌಂಡೇಶನ್ ಜೊತೆಗೂಡಿ, ಕೆಲಸ ಮಾಡುತ್ತೇನೆ. ಕ್ಷೇತ್ರದ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಜೊತೆಗೆ ರೈತಪರ, ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಆಧ್ಯತೆ ಕೊಡಲು ಫೌಂಡೇಶನ್ ಮುಂದಾಗಬೇಕೆಂದು ಹೇಳಿದರು.

ಉದ್ಯೋಗ ಮೇಳವನ್ನ ನವಲಗುಂದ ಗವಿಮಠದ ಅಭಿನವ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಾಗಲಿಂಗ ಮಠದ ಶ್ರೀ ವೀರಯ್ಯ ಮಹಾಸ್ವಾಮಿಗಳು, ಫೌಂಡೇಶನ್ ಅಧ್ಯಕ್ಷೆ ಫ್ರಭಾವತಿ ಪಾಟೀಲಮುನೇನಕೊಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಾವಿತ್ರಿ ಪೂಜಾರ, ಸಿ.ಎಸ್.ವಿ.ಪ್ರಸಾದ, ರಾಜಶೇಖರ ಕಂಪ್ಲಿ, ಶಿವಯೋಗಿ ಸುರಕೋಡ, ಸದಾನಂದ ಗಾಳಪ್ಪನವರ, ರೋಹಿತ ಮತ್ತಿಹಳ್ಳಿ, ಪ್ರಭು ಗುಳಗಣ್ಣನವರ, ಮುತ್ತು ಚಾಕಲಬ್ಬಿ, ಸೋಮಶೇಖರ್ ಪಟ್ಟಣಶೆಟ್ಟಿ, ಸುಭಾಸ ಕಿತ್ಲಿ, ಶಿವಕುಮಾರ ಬಳಿಗೇರ, ಷಣ್ಮುಖ ಗುರಿಕಾರ, ಎ.ಬಿ.ಹಿರೇಮಠ, ಎ.ಎಂ.ಮನಮಿ, ಅಣ್ಣಪ್ಪ ಬಾಗಿ, ರಾಯನಗೌಡರ, ಮಹಾಂತೇಶ ಕಲಾಲ, ವಿನಾಯಕ ದಾಡಿಬಾವಿ, ಮುತ್ತಣ್ಣ ಮನಮಿ, ಸಾಯಿಬಾಬಾ ಆನೇಗುಂದಿ, ಶರಣಪ್ಪಗೌಡ ದಾನಪ್ಪಗೌಡರ, ಈರಣ್ಣ ಹಸಬಿ, ಬಸವರಾಜ ಕಾತರಕಿ, ಅರುಣ ಮೆಣಸಿನಕಾಯಿ, ಮಲ್ಲಿಕಾರ್ಜುನ ಸಂಗನಗೌಡರ, ರಾಜುಗೌಡ ಪಾಟೀಲ, ಮಂಜುನಾಥ ರೋಗಣ್ಣನವರ, ಗಂಗಾಧರ ದುಂದೂರ, ಚಂದ್ರು ಕುಂದಗೋಳ, ಜಯಪ್ರಕಾಶ್ ಬಾದಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ 2890 ಅಭ್ಯರ್ಥಿಗಳು ಭಾಗವಹಿಸಿದ್ದರು, ಒಂದು ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಿದೆ.

  • Related Posts

    ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ

    ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.…

    ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ

    ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು…

    RSS
    Follow by Email
    Telegram
    WhatsApp
    URL has been copied successfully!