ಧಾರವಾಡ : ಜೀವದ ಪರಿವರ್ತನೆಗಾಗಿ ಶಿಕ್ಷಣ ಬಹಳ ಮುಖ್ಯವಾಗಿದ್ದು, ಧಮನಿತ ಸಮುದಾಯಕ್ಕೆ ಶಿಕ್ಷಣ ಪಡೆಯಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಎಂ.ಬಿ.ಹೆಗ್ಗಣ್ಣವರ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವದ ಸಭಾಂಗಣದಲ್ಲಿ ಕವಿವಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಬರುವ ಕಷ್ಟ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಲು ಪ್ರಯತ್ನ ಮಾಡಬೇಕು. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಮಾಡಲು ಪ್ರಯತ್ನಿಸಿ ಎಂದ ಅವರು ವಿದ್ಯಾರ್ಥಿ ಜೀವದ ದಿಸೆಯಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದರು.

ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಅಪ್ಪಗೇರೆ ಸೋಮಶೇಖರ ಪ್ರಧಾನ ಭಾಷಣಮಾಡಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಹಿಂದುಳಿದ ಧಮನಿತ ಸಮುದಾಯಗಳಿಗೆ ಮಾತ್ರವಲ್ಲದೆ. ಈ ದೇಶದ ಮಹಿಳೆಯರಿಗೆ ಸಮಾನತೆ, ಸ್ವಾಭಿಮಾನ ಮತ್ತು ಗೌರವವನ್ನು ಸಂವಿಧಾನದ ಆಶಯಗಳು ಮೂಲಕ ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಕೇವಲ ನಿರ್ದಿಷ್ಟ ಸಮುದಾಯಗಳಿಗೆ ಸಮೀತ ಮಾಡದೇ ಅವರನ್ನು ಎಲ್ಲ ಸಮುದಾಯದ ನಾಯಕ ಅಂತ ಅರಿತು ಅವರನ್ನು ಅಧ್ಯಯನ ಮಾಡಬೇಕಾದ ಅವ್ಯಕತೆ ಇದೆ ಆಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಅರ್ಥವಾಗುತ್ತಾರೆ ಎಂದರು. ಈ ದೇಶದ ತಳಸಮುದಾಯಗಳಿಗೆ ಶಿಕ್ಷಣ, ಸಾಮಾಜಿಕ ನ್ಯಾಯ, ಮತ್ತು ರಾಜಕೀಯ ಹಕ್ಕುಗಳನ್ನು ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು. ಅಂಬೇಡ್ಕರ್ ಅವರನ್ನು ಜನ್ಮದಿನಾಚರಣೆಗೆ ಮತ್ತು ಪರಿದಿಬ್ಬಾಣ ದಿನಗಳಿಗೆ ಮಾತ್ರ ಸೀಮಿತಗೊಳಿಸಿರುವದು ವಿಪರ್ಯಾಸ ಎಂದರು.

Dr. Babasaheb Ambedkar's contribution to providing education to the marginalized community is immense - Dr. M.B. Heggannavara.

ಬುದ್ಧ ಬಸವಾದಿ ಶರಣರು ಅಂತರಜಾತಿ ವಿವಾಹ, ಸಹ ಭೋಜನ ಪಂಕ್ತಿದಂತಹ ಕ್ರಾಂತಿಕಾರಿ ಹೆಜ್ಜೆಗಳಿಂದ ಸಮಾಜದಲ್ಲಿ ಸಮಾನತೆಯ ಕ್ರಾಂತಿಯನ್ನು ಮಾಡಿದರು ಎಂದ ಅವರು ಭಾರತದ ಸಂವಿಧಾನವು ಬುದ್ದ, ಬಸವ ಅಂಬೇಡ್ಕರ್ ಅವರ ಆಶಯಗಳನ್ನು ಒಳಗೊಂಡಿದ್ದು ಈ ದೇಶದ ಎಲ್ಲ ಸಮುದಾಯಗಳಿಗೆ ಆಮಾಜಿಕ ನ್ಯಾಯ ನೀಡಿದ್ದಾರೆ ಎಂದ ಅವರು ಇಂದಿ ಧಮನಿತ ಸಮುದಾಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಂಡುನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಹಣಕಾಸು ಅಧಿಕಾರಿಗಳಾದ ಪ್ರೊ.ಸಿ.ಕೃಷ್ಣಮೂರ್ತಿ ಮಾತನಾಡಿ ಅಂಬೇಡ್ಕರ್ ಅವರ ತತ್ವ ವಿಚಾರಗಳನ್ನು ಇಂದಿನ ವಿದ್ಯಾರ್ಥಿಗಳು ಅನುಸರಿಸಬೇಕು ಅಂಬೇಡ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಸುಭಾಸಚಂದ್ರ ನಾಟೀಕಾರ ಪ್ರಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಯುವ ಸಲುವಾಗಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗ ಸಮಾವೇಶ ಮಾಡಲಾಗುತಿದೆ. ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಮೂಡಬೇಕು ಎಂಬುದು ವಿದ್ಯಾರ್ಥಿಗಳ ಸಮಾವೇಶದ ಆಶಯವಾಗಿದ್ದು, ಹಿಂದೆ 90 ರ ದಶಕದಲ್ಲಿ ಕವಿವಿಯಲ್ಲಿ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳ ಸಮಾವೇಶ ನಡೆಯುತ್ತಿತ್ತು ನಂತರ ಆ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂಬೇಡ್ಕರ್ ಕುರಿತು ಕುರಿತು ಆಶು ಭಾಷಣ ಸ್ಪರ್ಧೆ, ಸಿದ್ದ ಭಾಷಣ ಸ್ಪರ್ಧೆ ಮತ್ತು ಕ್ರಾಂತಿ ಗೀತೆಗಳ ಸ್ಪರ್ಧೆಗಳನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ತುಳಜಪ್ಪ ಪೂಜಾರ, ಮಾಜಿ ಸಿಂಡಿಕೇಟ್ ಸದಸ್ಯರಾದ ಪರಮೇಶ್ವರ ಕಾಳೆ, ಪ್ರೊ. ವೇದಮೂರ್ತಿ ಡಾ.ಎಸ್.ಕೆ.ಪವಾರ, ಡಾ.ರವೀಂದ್ರ ಕಾಂಬಳೆ, ಡಾ.ಶಿಲಾಧರ ಮುಗಳಿ, ಡಾ.ಸಂಜುಕುಮಾರ ಮಾಲಗತ್ತಿ ಸೇರಿದಂತೆ ಸುಮಾರು 500 ಕ್ಕಿಂತ ಹೆಚ್ಚು ಪದವಿ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.