ಧಾರವಾಡ ಶಿಕ್ಷಣ ಸಂಸ್ಥೆಗಳ ಸಭೆ | ಪ್ರಲ್ಹಾದ್ ಜೋಶಿ | ಎಸ್.ವಿ. ಸಂಕನೂರು

ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚೆ – ಎಸ್.ವಿ. ಸಂಕನೂರು ಪರ ಮತಯಾಚನೆ

ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್‌ನಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರೊಂದಿಗೆ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಗುಣಮಟ್ಟದ ಶಿಕ್ಷಣ, ಉನ್ನತ ಶಿಕ್ಷಣದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವ ಕುರಿತು ವಿಸ್ತೃತವಾಗಿ ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರ ಪರವಾಗಿ ಮತಯಾಚಿಸಿದ ಸಚಿವರು, ಪದವೀಧರ ಮತದಾರರು ಸಂಕನೂರು ಅವರನ್ನು ಮೂರನೇ ಬಾರಿಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಶಾಸಕ ಅರವಿಂದ ಬೆಲ್ಲದ ಅವರು ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಭ್ಯರ್ಥಿ ಎಸ್.ವಿ. ಸಂಕನೂರು ಅವರ ಪರವಾಗಿ ಮತಯಾಚಿಸಿದರು. ಶಿಕ್ಷಣ ಕ್ಷೇತ್ರದ ಸಮಸ್ಯೆಗಳು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಪದವೀಧರರ ಹಿತಾಸಕ್ತಿಗಳ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.

ಸಭೆಯಲ್ಲಿ ಡಾ. ಅಜಿತ ಪ್ರಸಾದ, ಶ್ರೀಕಾಂತ ಪಾಟೀಲ, ಹಂಚಿನಮನಿ, ನಾಗೇಶ ಅಣ್ಣಿಗೇರಿ, ಬಸವರಾಜ ತಾಳಿಕೋಟಿ, ಮಹಾವೀರ ಉಪಾಧ್ಯಾಯ, ಲಕ್ಷ್ಮಣ ಉಪ್ಪಾರ, ಡಾ. ವೆಂಕಟರೆಡ್ಡಿ, ಪ್ರಭಾ ನಿಡವಣಿ, ಸಂಜಯ ಕಪಟಕರ್ ಸೇರಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು,  ವೀರೇಶ ಅಂಚಟಗೇರಿ, ಟಿ.ಎಸ್. ಪಾಟೀಲ, ಬಸವರಾಜ ಕರಗ, ಮಂಜು ಮಲ್ಲಿಗೆವಾಡ, ಸಾವನ್ ಡಂಬಲ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಶಿಕ್ಷಣ ಕ್ಷೇತ್ರದ ಗಣ್ಯರು, ಶಿಕ್ಷಕರು ಹಾಗೂ ಪದವೀಧರರು ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ಪದವೀಧರರ ಸಮಸ್ಯೆಗಳ ಕುರಿತು ಚರ್ಚಿಸಲು ನಡೆದ ಈ ಸಮಾಲೋಚನಾ ಸಭೆಯಲ್ಲಿ, ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರನ್ನು ಬೆಂಬಲಿಸುವಂತೆ ಪದವೀಧರ ಮತದಾರರಲ್ಲಿ ಮನವಿ ಮಾಡಲಾಯಿತು.