
ಧಾರವಾಡ 29 : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ ಬಿ ಎಂ ಪಾಟೀಲ್ ಅಭಿನಂದನಾ ಸಮಿತಿ ಧಾರವಾಡ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಧಾರವಾಡ ಖೇಲ್ ಕರ್ನಾಟಕ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಂಘ ಹಾಗೂ ಧಾರವಾಡ, ಜಿಲ್ಲಾ ಕುಸ್ತಿ ಸಂಘ ಇವರುಗಳ ಸಹಯೋಗದೊಂದಿಗೆ ಡಾ ಬಿ ಎಂ ಪಾಟೀಲ್ ರವರ ಅಭಿನಂದನೆ ಮತ್ತು ಸದ್ಗುಣ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ. ಪ್ರ. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಧಾರವಾಡ ವಹಿಸಿ ನಿವೃತ್ತಿ ಆಗುತ್ತಿರುವ ಡಾ ಬಸನಗೌಡ ಪಾಟೀಲ್ ಅವರಿಗೆ ಶುಭ ಹಾರೈಸಿದರು.
ಅತಿಥಿಗಳಾಗಿ ಪ್ರೊ ಕೆ ಬಿ ಗುಡಿಸಿ ವಿಶ್ರಾಂತ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವಹಿಸಿಕೊಂಡಿದ್ದರು. ಡಾ ಬಿ ಎಂ ಪಾಟೀಲ್ ಅವರ ಕುರಿತ ಸದ್ಗುಣ ಸಿರಿ ಕೃತಿಯನ್ನು ಅಜಿತ್ ಪ್ರಸಾದ್ ಕಾರ್ಯದರ್ಶಿಗಳು ಜನತಾ ಶಿಕ್ಷಣ ಸಮಿತಿ ಧಾರವಾಡ ರವರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. (ಶ್ರೀಮತಿ) ಜಯಶ್ರೀ ಎಸ್ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಡಾ ಎ. ಚನ್ನಪ್ಪ ಕುಲಸಚಿವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ. ನಿಜಲಿಂಗಪ್ಪ ವೈ. ಮಟ್ಟಿಹಾಳ ಕುಲ ಸಚಿವರು (ಮೌಲ್ಯಮಾಪನ) ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ ಪ್ರತಾಪ್ ಸಿಂಗ್ ತಿವಾರಿ ವಿಶ್ರಾಂತ ಕುಲಪತಿಗಳು ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿ, ಪ್ರೊ. ಸುಂದರ್ ರಾಜ್ ಅರಸ, ಡಾ. ರಾಜಕುಮಾರ್ ಪಿ ಮಾಲಿಪಾಟೀಲ, ಎಂ ಜಿ ತಿಮ್ಮಾಪುರ, ಗಿರೀಶ್ ದೊಡ್ಡಮನಿ ಕ್ರೀಡಾ ಪತ್ರಕರ್ತರು ಪ್ರಜಾವಾಣಿ ಬೆಂಗಳೂರು, ರಂಜಾನ್ ನದಾಫ್ ಪಿಎಸ್ಐ ಕುಸ್ತಿಪಟು ಲೋಕುರ್, ಎಂ ಎಸ್ ಪಾಸೋಡಿ, ಎನ್ ಡಿ ವಿರೂಪಾಕ್ಷಪ್ಪ, ಪಾಲ ಕುರಕುರಿ, ಶ್ರವಣ್ ಕುಮಾರ್ ಯೋಗಿ, ಬಾಹುಬಲಿ ಚೌಗಲಾ ಸೇರಿದಂತೆ ಹಲವಾರು ಕ್ರೀಡಾ ತಜ್ಞರು ನಿವೃತ್ತ ಶಿಕ್ಷಕರು ಅವರ ಅಭಿಮಾನಿ ಬಳಗ ಹಾಗೂ ವಿದ್ಯಾರ್ಥಿಗಳು ಮುಂತಾದವರು ಭಾಗವಹಿಸಿದರು.
ಜಿನ್ನಪ್ಪ ಕುಂದಗೋಳ ಸ್ವಾಗತಿಸಿದರು, ರವಿ ಗೋಲಾ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ಮನೋಜ್ ಕೋಪರ್ಡೆ ವಂದಿಸಿದರು.