ಹುಬ್ಬಳ್ಳಿ 28 : ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಿಂದ ಗಡಿಪಾರ ಆದ ವಿಜಯಕುಮಾರ ತಂದೆ ಯಮನಪ್ಪ ಆಲೂರ, ಸಾ ಗಿರಣಿಚಾಳ, ಹಾಲಿ ಕಾರವಾರ ರೋಡ ಅರವಿಂದನಗರ 2 ನೇ ಕ್ರಾಸ ಹಳೇಹುಬ್ಬಳ್ಳಿ ಈತನನ್ನು ಇದೇ ವರ್ಷ ಜನೇವರಿ ದಿ 13 ರಂದು ಉಪ ಪೊಲೀಸ ಆಯುಕ್ತರು(ಕಾವಸು) ಹು-ಧಾ ರವರ ಆದೇಶದ ಮೇರೆಗೆ ಸದರಿ ಆಸಾಮಿಯನ್ನು ಚಿಕ್ಕಮಂಗಳೂರ ಜಿಲ್ಲೆ ತರಿಕೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಗಡಿಪಾರಿಗೆ ಆದೇಶಿಸಿದ್ದು ಇತ್ತು.

ಗಡಿಪಾರಾದ ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗಿ ಹುಬ್ಬಳ್ಳಿಯಲ್ಲಿಯೇ ತಲೆಮರೆಸಿಕೊಂಡು ಉಳಿದು ಮಾಚ೯ ದಿ 23 ರಂದು ಗಿರಣಿ ಚಾಳದಲ್ಲಿರುವ ನವಜೀವನ ಸಮುದಾಯ ಭವನದಲ್ಲಿ ಕೇರಮ್ ಆಡುತ್ತಿದ್ದ ಹುಡುಗರೊಂದಿಗೆ ತಂಟೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ದಸ್ತಗೀರ ಮಾಡುವ ಕಾಲಕ್ಕೆ ನಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಸಿದ್ದರಿಂದ ಆರೋಪಿತನ ಮೇಲೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿದ್ದು ಸದರಿ ಆರೋಪಿತನನ್ನು ದಸ್ತಗೀರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಆರೋಪಿತನು ಸದ್ಯ ನ್ಯಾಯಾಂಗ
ಬಂಧನದಲ್ಲಿರುತ್ತಾನೆ ಎಂದು ಆಯುಕ್ತ ರು ಪ್ರಕಟನೆಯಲ್ಲಿ ತಿಸಿಳಿದ್ದಾರೆ.