
ಧಾರವಾಡ : ಒಂದು ದೇಶ ಒಂದು ಚುನಾವಣೆ’, ಕುರಿತು ಚುನಾವಣೆ’, ಕುರಿತು ಜನಾಭಿಪ್ರಾಯ ಸಂಗ್ರಹ, ಚರ್ಚೆ,ವಿಮರ್ಶೆ,ಚಿಂತನೆ ನಡೆಸುವುದು ಅಗತ್ಯವಿದೆ ಪ್ರಸ್ತುತ ‘ಒಂದು ದೇಶ ಒಂದು ಚುನಾವಣೆ’ ಗೆ ದೇಶವನ್ನು ಸಿದ್ಧಗೊಳಿಸುವ ಅವಶ್ಯಕತೆ ಇದೆ. ಎಂದು ಕವಿವಿ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಬಿ.ನಂದನ ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಎನ್.ಎಸ್.ಎಸ್. ಪ್ರಾದೇಶಿಕ ನಿರ್ದೇಶನಾಲಯ, ಧಾರವಾಡ ಜಿಲ್ಲಾ ನೆಹರು ಯುವ ಕೇಂದ್ರ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಹಯೋಗದಲ್ಲಿ ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ ಆಯೋಜಿಸಿದ ‘ ವಿಕಸಿತ ಭಾರತ ಜಿಲ್ಲಾ ಯುವ ಸಂಸತ್ತು-2025’, ಎಂಬ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಹೇಳಿದರು.
ಸಂವಿಧಾನದ ಪೀಠಿಕೆಯಲ್ಲಿ ಭಾರತದ ಭಾತೃತ್ವವನ್ನು ಒಳಗೊಂಡಿದ್ದು ಸಂವಿಧಾನದ ಆಶಯಗಳನ್ನು ನಿಜವಾಗಿಯೂ ಇಂದಿಗೂ ಇಡೇರಿಲ್ಲ ಎಂದ ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳನ್ನು ಬೇರು ಮಟ್ಟದಲ್ಲಿ ಈಡೇರಿಸಬೇಕಾಗಿದೆ ಎಂದ ಅವರು ಅವರು ಭಾರತವು ಪರಕೀಯರ ಆಡಳಿತಕ್ಕೆ ಒಳಪಟ್ಟು ನಮಗೆ ‘ಒಂದೇ ಮಾತರಂ’ ಎಂದು ಹೇಳಲು ನಮಗೆ 90 ವರ್ಷಗಳು ಬೇಕಾದವು ಸ್ವತಂತ್ರ ದೊರತು 75 ವರ್ಷಗಳಾದರೂ ದೇಶದಲ್ಲಿ ವಿವಿಧ ರೀತಿಯಲ್ಲಿ ಅವ್ಯಾಹತವಾಗಿ ತಾರತಮ್ಯ ನಡೆಯುತ್ತಿರುವದು ದುರದೃಷ್ಟಕರ. ಬಸವಾದಿ ಶರಣರು ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದರು ಎಂದರು.
ಕವಿವಿ ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದದ್ದಾಪೂರಿ ಮಾತನಾಡಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಅರ್ಥಮಾಡಿಕೊಳ್ಳಬೇಕು ಜಗತ್ತಿನಲ್ಲೇ ಸಂವಿಧಾನ ಶ್ರೇಷ್ಠವಾಗಿದ್ದು ಭಾರತೀಯ ಸಂವಿಧಾನ ಭಾರತೀಯರ ಆತ್ಮವಾಗಿದೆ ಎಂದ ಅವರು ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ಕವಿವಿ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎಸ್.ಎಸ್.ಪಟಗುಂಡಿ ಮಾತನಾಡಿ ಪ್ರಸ್ತುತ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಹಲವಾರು ವಿಷಯಗಳ ಬಗ್ಗೆ ಮತ್ತು ದಾರ್ಶನಿಕರ ತತ್ವಗಳನ್ನು ಅರ್ಥಮಾಡಿಕೊಂಡು ವಿದ್ಯಾರ್ಥಿಗಳು ಚಿಂತನಾ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಆಗಲು ಸಾಧ್ಯ ಎಂದರು. ಜಾಗತಿಕವಾಗಿ ಭಾರತ ಆರ್ಥಿಕವಾಗಿ ಐದನೇ ರಾಷ್ಟ್ರವಾಗಿದ್ದು, ಭವಿಷ್ಯದಲ್ಲಿ ಯುವ ಸಮುದಾಯವು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಮುಂಚೂಣಿಯಲ್ಲಿದೆ ಎಂದರು.
ಕವಿವಿ ಎನ್.ಎಸ್.ಎಸ್.ಕೋಶದ ಸಂಯೋಜಕ ಡಾ. ಎಂ.ಬಿ.ದಳಪತಿ ಮಾತನಾಡಿ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮವು ಜಿಲ್ಲಾ ಮಟ್ಟದಿಂದ ಆಯ್ಕೆಯಾ ಸ್ಪರ್ಧಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಈ ಯುವ ಸಂಸತ್ತು ಕಾರ್ಯಕ್ರಮದಲ್ಲಿ 150 ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯವು ಎನ್.ಎಸ್.ಎಸ್ ಯೋಜನೆಗೆ ಬಹಳ ಕೊಡುಗೆಯನ್ನು ನೀಡಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದರು.
ಈ ಎರಡು ದಿನದ ಕಾರ್ಯಕ್ರಮದಲ್ಲಿ ‘ ಒಂದು ದೇಶ ಒಂದು ಚುನಾವಣೆ’ ಮತ್ತು ‘ವಿಕಸಿತ ಭಾರತ’ ಕುರಿತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಭಾಗವಹಿಸುವವರು ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲಿದ್ದಾರೆ.
ಕವಿವಿ ವ್ಯಾಪ್ತಿಯ ಜಿಲ್ಲಾ ಯುವ ಸಂಸತ್ತು-2025 ಸ್ಪರ್ಧೆಯ ವಿಜೇತರ ವಿವರ:
ಧಾರವಾಡ ಜಿಲ್ಲೆ
ಪ್ರಥಮ ಸ್ಥಾನ- ಸಂದೀಪ್ ಕುಮಾರ್
ದ್ವಿತೀಯ ಸ್ಥಾನ- ಸ್ಪೂರ್ತಿ ತೇಲಿ
ತೃತೀಯ ಸ್ಥಾನ- ವಿಕಾಸ ಪಾಟೀಲ
ಗದಗ ಜಿಲ್ಲೆ:
ಪ್ರಥಮ ಸ್ಥಾನ- ಅಶ್ವಿನಿ. ಬಿ.ಡಿ
ದ್ವೀತಿಯ ಸ್ಥಾನ- ವೈಭವ
ತೃತೀಯ ಸ್ಥಾನ-ರವಿ ಲಮಾಣಿ
ಹಾವೇರಿ ಜಿಲ್ಲೆ:
ಪ್ರಥಮ ಸ್ಥಾನ-ಮನ್ಸೂರ ಅಲಿ ಜಮಖಾನೆ
ದ್ವೀತಿಯ ಸ್ಥಾನ- ಐಶ್ವರ್ಯ ಮಣೇಗಾರ
ತೃತೀಯ ಸ್ಥಾನ- ಸನತ್ ತೋಟಗೇರ
ಉತ್ತರ ಕನ್ನಡ ಜಿಲ್ಲೆ:
ಪ್ರಥಮ ಸ್ಥಾನ-ಪ್ರಸನ್ನ ಮರಾಠೆ
ದ್ವೀತಿಯ ಸ್ಥಾನ- ಧನು ಹೆಗಡೆ
ತೃತೀಯ ಸ್ಥಾನ- ಪ್ರಿಯಂಕಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿವಿ ಪ್ರಭಾರ ಕುಲಸಚಿವರಾದ ಡಾ.ಮೃತ್ಯುಂಜಯ ಅಗಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಗೊರವರ, ನೆಹರು ಕೇಂದ್ರದ ನಿರ್ದೇಶಕ ಎಂ.ಗೌತಮ್ ರೆಡ್ಡಿ, ಡಾ.ಬಸವರಾಜ ತಲ್ಲೂರ, ಡಾ.ವ್ಹಿ.ಎಚ್.ಕೊಳ್ಳಿ ಎನ್.ಎಸ್.ಎಸ್.ಸಹಾಯಕ ಅಧಿಕಾರಿ ಮಂಜುನಾಥ, ನಿಂಗರಾಜ, ಶಿವಯೋಗಿ ಸೇರಿದಂತೆ ಎನ್.ಎಸ್.ಎಸ್ ಸ್ವಯಂ ಸೇವಕರು ಇತರರು ಇದ್ದರು.