ಧಾರವಾಡ 14 : ಕರ್ನಾಟಕ ಇನ್ಕೂಬೇಷನ್ ಫೌಂಡೇಷನ್, ಧಾರವಾಡ ವತಿಯಿಂದ ವನಹಳ್ಳಿ ಗ್ರಾಮದಲ್ಲಿ ಏಪ್ರಿಲ್‍ 03 ಪ್ರಾರಂಭವಾದ ಚೈತನ್ಯ ಶಿಬಿರ ಇಂದು ಭಾವನಾಪೂರ್ಣವಾದ ಪಾದಪೂಜೆ ಕಾರ್ಯಕ್ರಮದಿಂದ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಶಿಬಿರವು ಅಕ್ಷರ ಕೇಂದ್ರದ ಮಕ್ಕಳಿಗಾಗಿ ಆಯೋಜಿಸಲಾಗಿದ್ದು, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಗ್ರಾಮಾಭಿವೃದ್ಧಿ ಮತ್ತು ಸೇವಾಭಾವನೆಗಳನ್ನು ಬೆಳೆಸುವುದೇ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದ ವಿಶೇಷತೆಗಳು ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ರಾಷ್ಟ್ರ ನಿರ್ಮಾಣ, ಗ್ರಾಮಾಭಿವೃದ್ಧಿ, ನಾಯಕತ್ವ ಹಾಗೂ ಸತ್ಕಾರ್ಯಗಳು ಕುರಿತು ವಿವಿಧ ತರಬೇತಿ ಸೇಶನ್‌ಗಳನ್ನು ನೀಡಲಾಯಿತು.
ಆತ್ಮವಿಶ್ವಾಸ, ಶಿಸ್ತು, ತಂಡಕಾರ್ಯ ಹಾಗೂ ಸಮಾಜಸೇವಾ ಮನೋಭಾವನೆಗಳನ್ನು ಮಕ್ಕಳಲ್ಲಿ ಬಿಂಬಿಸುವ ಕೆಲಸ ಮಾಡಲಾಯಿತು.

ಅಂತಿಮ ದಿನ ಪಾಲ್ಗೊಂಡ ಮಕ್ಕಳ ಪೋಷಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ಕೊನೆಗೆ ಪಾದಪೂಜೆ ಕಾರ್ಯವನ್ನು ನಡೆಸಲಾಯಿತು. ಮಕ್ಕಳು ತಮ್ಮ ಪೋಷಕರ ಪಾದ ಪೂಜೆ ಮಾಡುವ ಮೂಲಕ ಭಕ್ತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇದು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಹಾಗೂ ಶ್ರದ್ಧಾ ಕಾರ್ಯವಾಗಿದ್ದು, ಪೋಷಕರು ಮಕ್ಕಳ ಮೊದಲ ಗುರುಗಳು ಎಂಬ ಸಂದೇಶವನ್ನು ನೀಡುತ್ತದೆ. ಮಕ್ಕಳಲ್ಲಿ ವಿನಯ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಮಹತ್ವವನ್ನು ಈ ಮೂಲಕ ಬೋಧಿಸಲಾಯಿತು
ಕಾರ್ಯಕ್ರಮದ ಪರಿಣಾಮ ಪೋಷಕರು ಹಾಗೂ ಮಕ್ಕಳು ಭಾವುಕವರಾಗಿ ಈ ಕ್ಷಣವನ್ನು ಅನುಭವಿಸಿದರು.

ಶಿಬಿರದ ಕಲಿಕೆಗಳನ್ನು ತಮ್ಮ ಹಳ್ಳಿಯ ಅಭಿವೃದ್ಧಿಗೆ ಮುನ್ನಡೆಸಲು ಮಕ್ಕಳು ಪ್ರೇರಿತರಾದರು.

ಪೋಷಕರು ಈ ಉಪಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಲ್ಲಿ ಬದಲಾವಣೆ ಕಂಡು ಸಂತೋಷಪಟ್ಟರು.