ಎಸ್. ಎ. ಇ. ಸೊಸಾಯಿಟಿ ಆಫ್ ಆಟೋಮೆಟಿವ್ ಇಂಜಿನಿಯರ್ಸ್ ಇಂಡಿಯಾ ಸಹಯೋಗದಿಂದ ಚೆನ್ನೈನ ಕೆಸಿಜಿ ಕಾಲೇಜ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ‘ಅಡ್ವಾನ್ಸ್ಡ್ ಡ್ರೋನ್ ಡಿಸೈನ್’ ಸ್ಪರ್ಧೆಯ ‘ಸೇಫ್ ಡಿಸೈನ್ ಆಫ್ ಡ್ರೋನ್’ ವಿಭಾಗದಲ್ಲಿ ಧಾರವಾಡದ ಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸೈಯದ್ ಸೊಹೈಲ್ ಅಹ್ಮದ್, ಶ್ರೀವರ್ಧನ, ಗೌತಮ್, ನೈಗೆಲ್, ಶಿವಾನಿ, ಸಾಕ್ಷಿ, ಆಶೀರ್ವಾದ್, ರುದ್ರಗೌಡ, ಪ್ರಸನ್ನ, ವೀರೇಶ್, ಸಾಮ್ರಾಟ್ ಮತ್ತು ಮಲ್ಲಪ್ಪ ಪ್ರಥಮ ಬಹುಮಾನ ಮತ್ತು ‘ಪೇಪರ್ ಪ್ರೆಸೆಂಟೇಷನ್’ ನಲ್ಲಿ ದ್ವಿತೀಯ ಬಹುಮಾನವನ್ನು ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧೀಂದ್ರ ಬಿಂದಿಗಿ ಮಾರ್ಗದರ್ಶನವನ್ನು ಮಾಡಿದ್ದರು. ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ ಕುಮಾರ್, ಪ್ರಾಂಶುಪಾಲರಾದ ಡಾ. ರಮೇಶ್ ಎಲ್. ಚಕ್ರಸಾಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಐ. ಶ್ರೀಧರ್ ಮತ್ತು ಎಲ್ಲ ಶಿಕ್ಷಕರು ಅವರು ಈ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.