ಧಾರವಾಡ 14 : ಕಳೆದ 2023-24 ನೇ ಸಾಲಿನ ಅವಧಿಗೆ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಅಧ್ಯಕ್ಷರಾಗಿ ಉತ್ತಮ ಸೇವೆಯೊಂದಿಗೆ ರೋಟರಿಯ ಏಳು ಉದ್ದೇಶಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾದ ಹಿನ್ನಲೆಯಲ್ಲಿ ಈ ಬಾರಿ ಸುನಿಲ್ ಬಾಗೇವಾಡಿ ಅವರಿಗೆ ರೋಟರಿ ಸೇವಾ ವೃತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೂ ಉದ್ಯಮಿ ನಾಗರಾಜ್ ಎಲಿಗಾರ ಹಾಗೂ ಜಯಂತಿಲಾಲ್ ಜೈನ ಅವರನ್ನೂ ಸಹ ಸತತವಾಗಿ ರೋಟರಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವದಕ್ಕೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 

ಈ ಸಂದರ್ಭದಲ್ಲಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಗಣೇಶ್ ಭಟ್, ರೋಟರಿ ಅಧ್ಯಕ್ಷ ಕರಣ ದೊಡವಾಡ, ರೋಟರಿ ಕಾರ್ಯದರ್ಶಿ ವಾಮನ ಮಂತ್ರಿ, ಚಾರ್ಟರ್ ಮೆಂಬರಗಳಾದ ಅರವಿಂದ್ ಕುಲಕರ್ಣಿ, ನಜೀರ್ ದೇಸಾಯಿ, ಡಾ. ಸಹದೇವ್ ಹುಕ್ಕೇರಿ ಮತ್ತು ರೋಟರಿಯನಗಳಾದ ಡಾ. ಸತೀಶ್ ಇರಕಲ್, ಡಾ. ಉದಯ ಭಾಂದೇ, ಡಾ.ಆನಂದ ತಾವರಗೇರಿ, ಡಾ. ಚಂದ್ರಶೇಖರ ಕಾಚಾಪುರ, ರವಿ ಶುರಪಾಲಿ, ರಮೇಶ್ ಬಣಕಾರ, ರಾಮು ದೊಡ್ಡಮನಿ, ನಾಗರಾಜ್ ತಾಯನ್ನವರ ಉಪಸ್ಥಿತರಿದ್ದರು.