ಧಾರವಾಡ : ಜಗನ್ಮಾತಾ ಅಕ್ಕಮಹಾದೇವಿ ಮಠದ 57ನೆಯ ವಾರ್ಷಿಕೋತ್ಸವ ಹಾಗೂ 16ನೇ ಶರಣೋತ್ಸವ ಏಪ್ರಿಲ್  13 ಮತ್ತು 14. 2025 ರಂದು ಮುಂಜಾನೆ 10.30 ಗಂಟೆಗೆ ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಉಳವಿ ರಸ್ತೆ, ಧಾರವಾಡ ನಡೆಯಲಿದೆ ಎಂದು  ಪೂಜ್ಯಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿಯವರು ಪೀಠಾಧ್ಯಕ್ಷರು ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠಧಾರವಾಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು
ದಿ 13 ಬೆಳಿಗ್ಗೆ 10.30ಕ್ಕೆ ಶರಣೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಧರ್ಮಗುರುಪೂಜೆ ಧಾರವಾಡದ ಶರಣೆಯರಿಂದ ನಡೆಯಲಿದೆ.
ದಿವ್ಯ ಸಾನಿಧ್ಯ  ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಗಂಗಾದೇವಿಯವರು ಪೀಠಾಧ್ಯಕ್ಷರು, ಬಸವಧರ್ಮಪೀಠ ಕೂಡಲಸಂಗಮ.
ದಿವ್ಯ ಸಮ್ಮುಖ  ಪೂಜ್ಯ ಶ್ರೀ ಜಗದ್ಗುರು ಮಾತೆ ದಾನೇಶ್ವರಿಯವರು ಪೀಠಾಧ್ಯಕ್ಷರು, ಅಕ್ಕನಾಗಲಾಂಬಿಕೆ ಯೋಗ ಪೀಠ ಉಳವಿ.
  ಪೂಜ್ಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿಯವರು ಪೀಠಾಧ್ಯಕ್ಷರು, ಅಲ್ಲಮ ಪ್ರಭು ಶೂನ್ಯಪೀಠ, ಬಸವ ಕಲ್ಯಾಣ, ಪೂಜ್ಯ ಶ್ರೀ ಸದ್ಗುರು ಮಾದೇಶ್ವರ ಸ್ವಾಮೀಜಿಯವರು ಬಸವಧರ್ಮಪೀಠ, ಕೂಡಲಸಂಗಮ, ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರು ಬಸವಧರ್ಮಪೀಠ, ಕೂಡಲಸಂಗಮ, ಪೂಜ್ಯ ಶ್ರೀ ಸದ್ಗುರು ಚನ್ನಬಸವರಾಜ ಸ್ವಾಮೀಜಿಯವರು ಬಸವಧರ್ಮಪೀಠ, ಕೂಡಲಸಂಗಮ, ಪೂಜ್ಯಶ್ರೀ ಸದ್ಗುರು ಬಸವಪ್ರಕಾಶ್ ಸ್ವಾಮೀಜಿ ಚನ್ನಬಸವ ಯೋಗ ಜ್ಞಾನಪೀಠ ಉಳವಿ.
ನೇತೃತ್ವ : ಪೂಜ್ಯ ಶ್ರೀ ಜಗದ್ಗುರು ಬಸವಕುಮಾರ ಸ್ವಾಮೀಜಿಯವರು ಅಲ್ಲಮಪ್ರಭು  ಯೋಗಪೀಠ, ಅಲ್ಲಮಗಿರಿ
ಧ್ವಜಾರೋಹಣ : ಡಾ.ವಿನುತಾ ಮುಕ್ತಮಠ ವಿಜ್ಞಾನ ಕೃಷಿ ವಿಶ್ವವಿದ್ಯಾಲಯ ಧಾರವಾಡ. ಉದ್ಘಾಟನೆಯನ್ನು ಡಾ. ಮೌನೇಶ್ವರಿ ಆರ್ ಕಮ್ಮಾರ್. ಪ್ರಾಧ್ಯಾಪಕರು, ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಧಾರವಾಡ. ನೆರವೇರಿಸುವರು. ಪರಮಪೂಜ್ಯ ಅಂಗೈಕ್ಯ ಮಹಾಜಗದ್ಗುರು ಲಿಂಗಾನಂದ  ಸ್ವಾಮಿಗಳ ಮೂರ್ತಿ ಉದ್ಘಾಟನೆಯನ್ನು ಶಂಕ್ರಪ್ಪ ಪಾಟೀಲ್,  ರಾಜ್ಯಾಧ್ಯಕ್ಷರು ರಾಷ್ಟ್ರೀಯ ಬಸವದಳ ಜಯರಾಬಾದ್ ತೆಲಂಗಾಣ. ಪರಮಪೂಜ್ಯ ಲಿಂಗೈಕ್ಯ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರ ಮೂರ್ತಿ ಉದ್ಘಾಟನೆಯನ್ನು ವಿಜಯಕುಮಾರ್ ಮೇಳಕುಂದಿ. ಕೋಶಾಧ್ಯಕ್ಷರು ರಾಷ್ಟ್ರೀಯ ಬಸವದಳ ಕಲಬುರ್ಗಿ. ಮ್ಯೂಸಿಯಂ ಉದ್ಘಾಟನೆಯನ್ನು ಬಸವ ಟಿವಿ ಮುಖ್ಯಸ್ಥರಾದ ಈ ಕೃಷ್ಣಪ್ಪ ಉದ್ಘಾಟಿಸುವರು. ಪ್ರಸ್ತಾವನೆಯನ್ನು ಪೂಜಾ ಸವದತ್ತಿ ಹೈಕೋರ್ಟ್ ನ್ಯಾಯವಾದಿಗಳು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಧಾರವಾಡ ಸಲ್ಲಿಸುವರು. ಮುಖ್ಯ ಅತಿಥಿಗಳಾಗಿ ಶರಣ ಅಜಯ್ ಆರ್ ಚೌವ್ಹಾಣ ಆಗಮಿಸುವರು. ಮಹಿಳಾ ಅನುಭವ ಗೋಷ್ಠಿ ಏಪ್ರಿಲ್ 13 ರ ಸಾಯಂಕಾಲ 4:೦೦ಕ್ಕೆ ನಡೆಯಲಿದ್ದು ಅದರ ಉದ್ಘಾಟನೆಯನ್ನು  ಪೂಜಾ ಸವದತಿ,್ತ ಹೈಕೋರ್ಟ್ ನ್ಯಾಯವಾದಿಗಳು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಧಾರವಾಡ ನೆರವೇರಿಸುವರು.
ಅಧ್ಯಕ್ಷತೆಯನ್ನು ಡಾ. ಲತಾ ಎಸ್ ಮುಳ್ಳೂರು  ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಪುಲೆ, ರಾಷ್ಟ್ರೀಯ ಶಿಕ್ಷಕಿಯರ ಫೆಡರೆಶನ್, (ರಿ) ನವದೆಹಲಿ  ವಹಿಸುವರು. ಧ್ವಜಾರೋಹಣವನ್ನು ಡಾ, ಶಾಂತಾದೇವಿ ಬಿರಾದಾರ, ಕಾರ್ಯದರ್ಶಿ, ಸಾವಿತ್ರಿಬಾಯಿ ಪುಲೆ, ರಾಷ್ಟ್ರೀಯ ಶಿಕ್ಷಕಿಯರ ಫೆಡರೆಶನ್ ನವದೆಹಲಿ. ನೆರವೇರಿಸುವರು. ವಿಶೇಷ ಉಪನ್ಯಾಸವನ್ನು ಪ್ರೊಫೆಸರ್ ಜಯ  ಯಂಡಿಗೇರಿ ಹಾಗೂ ಯುವ ವಾಗ್ಮಿ ಕುಮಾರಿ ಹಾರಿಕ್ ಮಂಜುನಾಥ್ ನೀಡುವರು ಮೂರು ವರ್ಷದ ಮಗು ಕುಮಾರಿ ದಿತಿ ಶಿರಶ್ಯಾಡ್ ಬಸವಣ್ಣನವರ ವಚನಗನ್ನು ಹೇಳುವಳು. ಮುಖ್ಯ ಅತಿಥಿಗಳಾಗಿ ಬಸವರಾಜ ಆನೆಗುಂದಿ ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳ, ಧಾರವಾಡ. ಸಂತೋಷ್ ಬಡಿಗೇರ್ ಕೋಶ್ಯಾಧ್ಯಕ್ಷರು ರಾಷ್ಟ್ರೀಯ ಬಸವದಳ, ಧಾರವಾಡ. ಪರಮೇಶ್ವರ್ ಕೆಂಗಾರ್ ಉಪಾಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಧಾರವಾಡ. ಲೀಲಾವತಿ ಸಾಮ್ರಾಣಿ, ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಬಸವ ದಳ, ಧಾರವಾಡ. ಪದ್ಮಾವತಿ ಕಮ್ಮಾರ್ ರಾಷ್ಟ್ರೀಯ ಬಸವದಳ, ಧಾರವಾಡ. ಅಶೋಕ್ ಶೆಟ್ಟರ್, ರಾಷ್ಟ್ರೀಯ ಬಸವದಳ, ಧಾರವಾಡ. ಬಸವರಾಜ್ ಸತ್ಯಣ್ಣನವರ್, ರಾಷ್ಟ್ರೀಯ ಬಸವದಳ, ಧಾರವಾಡ. ರಮಾನಂದ ಕಮ್ಮಾರ್, ರಾಷ್ಟ್ರೀಯ ಬಸವದಳ, ಧಾರವಾಡ ಸುಜಾತಾ ಮೇಲೇಗೌಡ, ರಾಷ್ಟ್ರೀಯ ಬಸವದಳ, ಬೆಂಗಳೂರು.  ವಿಜಯಲಕ್ಷ್ಮೀ ತೋಟಗಿ, ಅಧ್ಯಕ್ಷರು ರಾಷ್ಟ್ರೀಯ ಬಸವದಳ, ಬೈಲಹೊಂಗಲ ಆನಂದ ಹೊಸೂರು, ರಾಷ್ಟ್ರೀಯ ಬಸವದಳ, ತಮಿಳುನಾಡು,  ನಾಗರಾಜ ತಿಗಡಿ, ತಿಗಡಿ ಕ್ಲಾಸಸ್, ಧಾರವಾಡ ಶರಣ. ಆನಂದ ಸಿದ್ದಪ್ಪ ಗುಡಸ್. ರಾಷ್ಟ್ರೀಯ ಬಸವದಳ. ಬೆಳಗಾವಿ ವೀರೇಶ ಹಲ್ಕಿ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಬಸವದಳ, ಬೈಲಹೊಂಗಲ ಸುಧೀರವಾಲಿ ಬೈಲಹೊಂಗಲ, ನಗರಸಭೆ ಪುರಾಸಭಾ ಸದಸ್ಯರು. ಬೈಲಹೊಂಗಲ ಡಿ. ಬಿ. ಗೌಡರ ಹುಬ್ಬಳ್ಳಿ ಆಗಮಿಸುವರು
  ೧೩ ರಂದು ಸಂಜೆ ನಡೆಯಲಿರುವ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಿನ್ನದ ಪದಕ ವಿಜೇತರಾದ ಕು. ಶ್ರೀಧರ ಭಜಂತ್ರಿ ಅವರಿಂದ ಹಿಂದುಸ್ಥಾನಿ ಶಹನಾಯಿ ವಾದನ. ಹಾಗೂ ಕುಮಾರಿ ಕಾವೇರಿ ಕಟಗಿ ಮತ್ತು ಕಿಶನ್ ಲಿಂಗಾಯತ ಅವರಿಂದ ವಚನ ನೃತ್ಯ ಕಾರ್ಯಕ್ರಮಗಳು ಜರಗುಲಿವೆ.
ಸೋಮವಾರ 14 ಬೆಳಿಗ್ಗೆ 10.3೦ಕ್ಕೆ ಅಕ್ಕಮಹಾದೇವಿ ಅನುಭಾವ ಪೀಠದ  ಪೀಠಾರೋಹಣ ಜಗದ್ಗುರು ಮಾತೆ ಜ್ಞಾನೇಶ್ವರಿ ಮಾತಾಜಿ. ಯವರಿಗೆ ನಡೆಯುವುದು. ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಗಂಗಾದೇವಿಯವರು ಪೀಠಾಧ್ಯಕ್ಷರು,ಬಸವಧರ್ಮಪೀಠ ಕೂಡಲಸಂಗಮ,  ವಹಿಸುವರು. ಅಧ್ಯಕ್ಷತೆಯನ್ನ ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶಿವಪುರ, ಉಳವಿ ವಹಿಸುವರು. ಶರಣರ ಕಾಲಜ್ಞಾನ ವಚನಗಳ ಕುರಿತು  ಡಾ|| ವೀಣಾ ಬಿರಾದಾರ್ ಅಧ್ಯಕ್ಷರು ಶ್ರೀ ಸಾಯಿ ಪಿಯು ಸೈನ್ಸ್ ಮತ್ತು ಕಾಮರ್ಸ್ ಕಾಲೇಜ್ ಧಾರವಾಡ ಉಪನ್ಯಾಸ ನೀಡುವರು. ಪ್ರಸ್ತಾವನೆಯನ್ನು ಶಶಿಕಲಾ ಬಸವರೆಡ್ಡಿ, ಕಾರ್ಯದರ್ಶಿ, ಬಸವ ರೆಡ್ಡಿ ಶಿಕ್ಷಣ ಸಂಸ್ಥೆ, ಧಾರವಾಡ ಸಲ್ಲಿಸುವರು.
 ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ದಾನೇಶ್ವರಿ ಮಾತಾಜಿ ವಿಜಯಾಂಬಿಕೆ ಮಾತಾಜಿ , ಪರಮೇಶ್ವರ ಕೆಂಗಾರ, ಬಸವರಾಜ ಆನೆಗುಂದಿ , ಅಜೇಯ ಚೌಹ್ಹಾಣ ಇದ್ದರು.