
ಧಾರವಾಡ 10 : ಗ್ರಾಮೀಣ ಎಲ್ಲರಿಗೂ ಸಿಗದ ಅಪರೂಪದ ಹುದ್ದೆ ಶಿಕ್ಷಕ ವೃತ್ತಿ. ಸಿಕ್ಕರೂ ಅದನ್ನ ಕೇವಲ ವೃತ್ತಿಯಾಗಿ ಸ್ವೀಕರಿಸಿದರೆ ಸಾಲದು. ಬೋಧನೆಯಲ್ಲಿ ಸಂಪೂರ್ಣ ನಿವೇದನೆ, ನಿಸ್ವಾರ್ಥ ಸೇವಾಮನೋಭಾವ, ನಿರಂತರ ಅಧ್ಯಯನಶೀಲ, ಹವ್ಯಾಸಗಳು ಈ ವೃತ್ತಿಯ ಅಗತ್ಯತೆಗಳು ಅಂತೆಯೇ ಶಿಕ್ಷಕಿ ಈ ಎಲ್ಲಾ ಅಗತ್ಯ ಗುಣಗಳ ಜೊತೆಯಲ್ಲಿ ಶಿಕ್ಷಕಿ ವೃತ್ತಿಯನ್ನೇ ತನ್ನ ಜೀವನದ ಅನನ್ಯ ಭಾಗವಾಗಿ ಸ್ವೀಕರಿಸಿ ಸಹೋದ್ಯೋಗಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಾ, ಶಾಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳೋಪಾದಿಯಲ್ಲಿ ಉಪಚರಿಸುತ್ತಾ, ಊರ ಜನರೊಂದಿಗೆ ಉತ್ತಮ ಬಾಧವ್ಯ ಹೊಂದುವ ಮೂಲಕ ಅಜಾತ ಶತ್ರುವಿನ ರೀತಿಯಲ್ಲಿ ಶಾಲೆಯಲ್ಲಿ 28 ವರ್ಷಗಳ ಕಾಲ ಒಂದೇಶಾಲೆಯಲ್ಲಿ ಸಾರ್ಥಕ ಸೇವೆಸಲ್ಲಿಸಿದ್ದಾರೆ. ಇವರನ್ನು ಶಿಕ್ಷಕಿ ಎನ್ನುವ ಬದಲು ಮಾತಾಜಿ ಎನ್ನುವ ಪದವೇ ಜಾಸ್ತಿ.
ಹೌದು ಧಾರವಾಡ ತಾಲ್ಲೂಕಿನ ಕಣವಿಹೊನ್ನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ಮಾಲತಿ ಶಂಕರ ಕೆಲಗೇರಿ ಈ ಅಪರೂಪದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್, ಎಂದು ಕರೆನೀಡಿದರು.
ಅವರು ಧಾರವಾಡ ತಾಲ್ಲೂಕಿನ ಕಣವಿಹೊನ್ನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ಮಾಲತಿ ಶಂಕರ ಕೆಲಗೇರಿ ನಿವೃತ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಿಕ್ಷಕ ದೇವರಿಗೆ ಸಮಾನ ಎಂದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿದೆ. ಮಕ್ಕಳಲ್ಲಿ ಅಡಗಿರುವ ಕ್ರಿಯಾತ್ಮಕ ಶಕ್ತಿಯನ್ನು ಗುರುತಿಸಿ, ಅವರನ್ನು ಒಳ್ಳೆಯ ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಇಂತಹ ನಿವೃತ್ತಿ ಸೇವೆ ಸಲ್ಲಿಸಿ ಮಾತೆ ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗವ್ವ ದೊಡಮನಿ ಮಾತನಾಡುತ್ತಾ ಗುರು-ಶಿಷ್ಯರ ಸಂಬAಧ ದೂರವಾಗುತ್ತಿದೆ. ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ, ಧಾರವಾಡ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬAಧಕ್ಕೆ ಮಾಲತಿ ಶಂಕರ ಕೆಲಗೇರಿ ಸಾಕ್ಷಿಯಾಗಿದ್ದಾರೆ ಎಂದರು.
ಧಾರವಾಡ ತಾಲ್ಲೂಕಿನ ಕಣವಿಹೊನ್ನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಲತಿ ಶಂಕರ ಕೆಲಗೇರಿ ಇವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಶಿಕ್ಷಕರು ನಾನೆಂಬ ಅಹಂಭಾವವನ್ನು ಮರೆತು, ಮಕ್ಕಳೊಂದಿಗೆ ಬೆರೆತು, ನಯ-ವಿನಯಗಳ ಸಾಕಾರದಿಂದ ಮಕ್ಕಳಿಗೆ ರಾಷ್ಟ್ರಾಭಿಮಾನ-ದೇಶರಕ್ಷಣೆಯ ಶಿಕ್ಷಣ ನೀಡಿ, ರಾಷ್ಟ್ರಕಂಡ ಪ್ರಬುದ್ಧ ನಾಯಕರಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಬಿಆಯ್‌ಇಆರಟಿ ಶಿಕ್ಷಕರಾದ ಲಲಿತಾ ಹೊನ್ನವಾಡ ಮಾತನಾಡುತ್ತಾ ಸೇವೆ ಯಾರು ಹೊಗಳದಿದ್ದರೂ ಕಲಿತ ಮಕ್ಕಳು ಸಿಕ್ಕಾಗ ಉನ್ನತ ಉದ್ಯೋಗದಲ್ಲಿ ಇದ್ದು ಮಾತನಾಡಿದರೆ ಸಾಕು ಅದೇ ನಮ್ಮ ಶಿಕ್ಷಕ ವೃತ್ತಿಗೆ ಸನ್ಮಾನ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಹಿಂದೆ ಕಲಿತಿರುವ ಸುಕ್ಷಣಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು. 2010 -11 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕಲಿಸಿದ ಗುರುಗಳಿಗೆ ವಂದಿಸಿದರು.
ಎಸ್‌ಡಿಎಮಸಿ ಅಧ್ಯಕ್ಷರಾದ ಸಿದ್ರಾಮಪ್ಪ ದೊಡಮನಿ,ಶಾಲಾ ಮುಖ್ಯ ಶಿಕ್ಷಕರಾದ ಜಿ ಪಿ ರಾಠೋಡ, ರಾಜೇಶ್ವರಿ ಕೊರಿ, ಕಸ್ತೂರಿ ಕುಂದರಗಿ, ಶಕುಂತಲಾ ಸಾಂಬ್ರಾಣಿ , ಮಂಜುಳಾ ಬೆಟಗೇರಿ, ಅನಿಸಾ ಕೊಲ್ಹಾಪುರ, ದೀಪಾ ಕುಲಕರ್ಣಿ, ಜಯಲಕ್ಷ್ಮಿ ಕುಲಕರ್ಣಿ, ಸವಿತಾ ಮಾದರ , ವಿಜಯ ಭಂಡಾರಿ ಶಿಕ್ಷಕರ ವೃಂದ, ವಿದ್ಯಾರ್ಥಿಗಳು, ಪಾಲಕರು, ಹಳೆ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಜಿ.ಪಿ .ರಾಠೋಡ ನಿರೂಪಿಸಿದರು. ಕೊನೆಯಲ್ಲಿ ಜಯಲಕ್ಷ್ಮೀ ಕುಲಕರ್ಣಿ ವಂದಿಸಿದರು.
ಧಾರವಾಡ ತಾಲ್ಲೂಕಿನ ಕಣವಿಹೊನ್ನಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ಮಾಲತಿ ಶಂಕರ ಕೆಲಗೇರಿ ದಂಪತಿಗಳಿಗೆ ಸನ್ಮಾನ ಹಾಗೂ ೨೦೧೦-೧೧ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕಲಿಸಿದ ಎಲ್ಲ ಗುರುಗಳಿಗೆ ವಂದಿಸಿದರು.