ಸಮಾರೋಪ ಸಮಾರಂಭ ಸುತಗಟ್ಟಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿತು. ಸಮಾರೋಪ ಸಮಾರಂಭದಲ್ಲಿ ಡಾ. ಲಿಂಗರಾಜ ಅಂಗಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇಂದಿನ ಯುವಕರಲ್ಲಿ ಸಾಮಾಜಿಕ ಬದ್ಧತೆ ಅವಶ್ಯ ಎಂದು ಹೇಳಿದರು . ಸಮಾಜವನ್ನು ಸುಧಾರಿಸುವಲ್ಲಿ ಯುವಕರ ಪಾತ್ರ ಅಮೂಲ್ಯ. ಅವರು ಜವಾಬ್ದಾರಿ ಬೆಳೆಸಿಕೊಳ್ಳಬೇಕು, ನೈತಿಕ ಮೌಲ್ಯಗಳನ್ನು ಪಾಲಿಸಬೇಕು ಮತ್ತು ತಮ್ಮ ಶಕ್ತಿ, ಸಮಯ ಹಾಗೂ ಪ್ರತಿಭೆಯನ್ನು ಸಮಾಜದ ಉತ್ತಮ ಭವಿಷ್ಯಕ್ಕಾಗಿ ಬಳಸಬೇಕು ಎಂದು ಡಾ. ಲಿಂಗರಾಜ ಅಂಗಡಿ ತಿಳಿಸಿದರು.

ಪ್ರಾಚಾರ್ಯ ಡಾ. ರಾಜೇಶೇಖರಪ್ಪಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.‌ ಶ್ರೀಮತಿ ಆಶಾ ಬೇಗಂ ಮುನವಳ್ಳಿ ಹಾಗೂ ಎಸ್ ಡಿ ಎಂ ಅಧ್ಯಕ್ಷರು ಆದ ಶ್ರೀ ಸಿದ್ದಪ್ಪ ಕುಂಬಾರ, ಡಾ. ಪುಷ್ಪಾ ಬಸನಗೌಡರ , ಪ್ರೊ .ಮೇಲ್ಮಾಳಗಿ, ಪ್ರೊ ಸಿ. ಕೆ ಹುಬ್ಬಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಲಿಂಗರಾಜ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳು ಆದ ಡಾ. ತೇಜಸ್ವಿನಿ ಅರಳಿಕಟ್ಟಿ ವರದಿ ವಾಚಿಸಿದರು.‌ ಎನ್ ಎಸ್ ಎಸ್ ಸ್ವಯಂ ಸೇವಕಿಯರು ಎನ್. ಎಸ್. ಎಸ್ ಗೀತೆ ಪ್ರಸ್ತುತ ಪಡಿಸಿದರು.ಸ್ವಯಂ ಸೇವಕಿಯರಾದ ಕೋಮಲ್ ಗಾಣದಾಳ ಸ್ವಾಗತಿಸಿದರು.ಪವಿತ್ರಾ ಸಾವಂತ ಕಾರ್ಯಕ್ರಮ ನಿರೂಪಿಸಿದರು.ನಿರ್ಮಲಾ ವಂದಿಸಿದರು.