ಹಾವೇರಿ : ಹಾವೇರಿ ಜಿಲ್ಲೆ ಹಾನಗಲ್ ತಾಲೂಕು 2024 25 ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಡಗುಪ್ಪಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದ ಚಂದನಾ ಹುಚ್ಚಮ್ಮನವರ. ದ್ವಿತೀಯ ಸ್ಥಾನ ಪಡೆದಂತಹ ನೇತ್ರಾ ಶಿವಯೋಗಿ ಬಾಳೂರ. ತೃತೀಯ ಸ್ಥಾನ ಪಡೆದ ದಿವ್ಯ ಸಾವಕ್ಕನವರ ವಿದ್ಯಾರ್ಥಿಗಳಿಗೆ ಬಹುಮಾನವನ್ನುವಿತರಿಸಲಾಯಿತು.

https://youtu.be/pASsyX9ozd8?si=_PW42J91Sl0XkKNR

ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಹಕರಿಸಿದಂತ ಎಸ್ ಡಿ ಎಮ್ ಸಿ ಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಪುಸ್ತಕವನ್ನು ಕೊಡುವುದರ ಮೂಲಕ ಗೌರವಿಸಿ ಅಭಿನಂದಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಿವಯೋಗಿ ಬಾಳೂರ. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕರಾದ ಜಿ.ಜಿ ಗೋರನವರ ಶಾಡಗುಪ್ಪಿ ಪ್ರೌಢಶಾಲಾ ಪ್ರಧಾನ ಗುರುಗಳು. ಎಸ್ ಡಿ ಎಂ ಸಿ ಸದಸ್ಯ ಕುಮಾರಣ್ಣ ಸಾವಕ್ಕನವರ. ಮಂಜಣ್ಣ ಸಾವಕ್ಕನವರ. ಪುಟ್ಟಣ್ಣ ಬಾರ್ಕಿ. ರಮೇಶಣ್ಣ ಕುಳೇನೂರ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಕಾಂತರಾಜ್ ಆರ್ .ಬಿ. ಶಿಕ್ಷಕರಾದ ಬಸವರಾಜ.ಎನ್. ಬಿದರಕೊಪ್ಪ. ಶ್ರೀಮತಿ ಎಲ್. ಎಸ್. ಕಾಟೇನಹಳ್ಳಿ. ಕಿರಣ್ ಕುಮಾರ್ ಎಂ .ವಿ. ಸುನಿಲ್ ಕುಮಾರ್ .ಎಂ. ಕುಮಾರಿ ಗೀತಾ ಸಾವಕ್ಕನವರ. ಕುಮಾರಿ ಲಕ್ಷ್ಮಿ ಪೂಜಾರ. ಮತ್ತು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.