ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಅಂಡರ -೧೯ ಟೆಕ್ವಾಂಡೋ ಕ್ರೀಡಾಕೂಟ- ೨೦೨೪ ರಲ್ಲಿ ಪದಕ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಧಾರವಾಡ ೧೪ : ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಧಾರವಾಡ ನಗರದ ಜಿಲ್ಲಾ ಟೆಕ್ವಾಂಡೋ ಸಂಸ್ಥೆಯ ಮುಖ್ಯ ತರಬೇತುದಾರರು ಆದ ಮಾಸ್ಟರ್ ಅಂಜಲಿ ಪರಪ್ಪ ಮತ್ತು ಪರಪ್ಪ ಎಸ್ ಕೆ. ಅವರ ಮಾರ್ಗದರ್ಶನದಲ್ಲಿ ಟೆಕ್ವಾಂಡೋ ತರಬೇತಿ ಹೊಂದಿದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮಿಂಚಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಿನಾಂಕ ೫ ಮತ್ತು ೬ ರಂದು ಹಾವೇರಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜುಗಳ ೨೦೨೪-೨೫ ನೇ ಸಾಲಿನ ರಾಜ್ಯಮಟ್ಟದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯಿಂದ ಸ್ಪರ್ಧಿಸಿ ಬಾಲಕರ ವಿಭಾಗದಲ್ಲಿ ಸಾಯಿಪ್ರಸಾದ ಪಿ.ಕೆ ಮತ್ತು ಬಾಲಕೀಯರ ವಿಭಾಗದಲಿ ಪ್ರೀಯಾ ಬಿ. ವೆಂಕಟಾಪೂರ ಪ್ರಥಮ ಸ್ಥಾನದಲ್ಲಿ ಮಿಂಚಿ ಬಂಗಾರದ ಪದಕ ಪಡೆಯುವುದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ಇವರು ಮುಂಬರುವ ಅಂಡರ್-೧೯ ನ್ಯಾಶನಲ್ ಸ್ಕೂಲ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರೊಂದಿಗೆ ಮಿಲನ್ ಭಟ್ – ಬೆಳ್ಳಿ ಪದಕ ವಿನೀತ ಫತ್ತೆಪುರ್ – ಬೆಳ್ಳಿ ಪದಕ, ಸರಸ್ವತಿ ನಾಗಲಾವಿ – ಕಂಚಿನ ಪದಕ ಪಡೆಯುವುದರೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕುಟದಿಂದ ಒಂದು ಹೆಜ್ಜೆ ಹಿಂದೂಳಿದಿರುತ್ತಾರೆ. ಅದೇ ರೀತಿ ಅಜಿತ್ ರಾಯ್ , ಬಾಲರಾಜ್ ಎಸ್. ಕೆ, ಸಾಗರ್ , ಸಿಂರನ,ಪೂಜಾ, ಅಶ್ವಿನಿ ಇವರುಗಳು ಕೂಡಾ ಭಾಗವಹಿಸಿದ್ದರು.

ಇವರಿಗೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಬಸವರಾಜ್ ತಾಳಿಕೋಟಿ, ರಾಷ್ಟ್ರೀಯ ತರಬೇತುದಾರರು ಹಾಗೂ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕರು ಆದ ಪರಪ್ಪ ಎಸ್.ಕೆ, ಸಂಸ್ಥೆಯ ಮುಖ್ಯಕಾರ್ಯದರ್ಶಿ ಹಾಗೂ ಅಂತರಾಷ್ಟ್ರೀಯ ನಿರ್ಣಾಯಕಿ ಆದ ಅಂಜಲಿ ಪರಪ್ಪ ಕೆ, ಸಂಸ್ಥೆಯ ಪದಾಧಿಕಾರಿಗಳು, ಪಾಲಕರು ಹಾಗೂ ಕ್ರೀಡಾಪಟುಗಳು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!