ಸಿ ಸಿ ಪಾಟೀಲ ದಂಪತಿಗಳಿಗೆ ಈ ವರ್ಷದ ಆದರ್ಶ ದಂಪತಿ ರಾಜ್ಯ ಮಟ್ಟದ ಸನ್ಮಾನ.

ಧಾರವಾಡ : ನಗರದ ಸೈದಾಪುರ ಓಣಿಯ ಗೌಡ್ರು ಅಂತನೇ ಪ್ರಸಿದ್ದವಾದ ಮನೆತನದ ಚೆನ್ನವೀರಗೌಡ. ಸಿ. ಪಾಟೀಲರನ್ನು ರ‍್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಸುಕ್ಷೇತ್ರ ಮೈಲಾರ ತಾಲೂಕು ಹೂವಿನಹಡಗಲಿ ಜಿಲ್ಲಾ ವಿಜಯಪುರದಲ್ಲಿ ನೇರವೇರಿದ ಕಾರ್ಯಕ್ರಮದಲ್ಲಿ ಮೈಲಾರ ಬಸವಲಿಂಗ ಶರಣಶ್ರೀಯವರ ಹೆಸರಿನಲ್ಲಿ ಕೊಡುವ ಆರ‍್ಶ ದಂಪತಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಚೆನ್ನವೀರಗೌಡ ಸಿ. ಪಾಟೀಲರು ಅವಿಭಕ್ತ ಕುಟುಂಬದಿಂದ ಬಂದಂತಹ ಮತ್ತು ಈಗಿನ ಕಾಲದಲ್ಲಿಯೂ ಅವರ ತಮ್ಮಂದಿರ ಜೋತೆ ಅವಿಭಕ್ತ ಕುಟುಂಬದ ಸಂಪ್ರದಾಯಯವನ್ನು ನಡೆಸಿಕೊಂಡು ಮತ್ತೊಬ್ಬರಿಗೆ ಮಾರ್ಗದರ್ಶಕರಾಗಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಂತರ ಸೈದಾಪೂರ ಓಣಿಯ ಹಿರಿಯಾಸೆ ಮೇರೆಗೆ ರಾಜಕಾರಣಕ್ಕೆ ಧುಮುಕಿ ಪಾಲಿಕೆ ಸದಸ್ಯ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ, ಉಳವಿ ಚನ್ನಬಸವೇಶ್ವರ ಟ್ರಸ್ಟದ ಚೇರಮನ್ನ,ಮುರುಘಾಮಠದ ಆಡಳಿತ ಮಂಡಳಿಯ ಸದಸ್ಯರಾಗಿ ಹೀಗೆ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ನಾಲ್ಕಾರು ಜನರಿಗೆ ಸಹಾಯ ಹಸ್ತದಿಂದ ಜೀವನ ನಡೆಸುತ್ತಿದ್ದಾರೆ.
ಸನ್ಮಾನ ಸಮಾರಂಭದ ದಿವ್ಯಸಾನಿದ್ಯವನ್ನು ಡಾ.ಕೇದಾರಲಿಂಗ ಶಿವ ಶಾಂತವೀರ ಶಿವಾಚರ‍್ಯ ಸ್ವಾಮಿಗಳು ಹಾಗೂ ಪರಮೇಶ್ವರ ಸ್ವಾಮಿಗಳು ಗುರು ಕರಿಬಸವೇಶ್ವರ ಗದ್ದಗಿಮಠ ಮತ್ತು ಸೈಯದ್ ಖಾದರ್ ಷಾ ಖಾದ್ರಿ ಹಜರತ್ ಸ್ಯಯದ್ ಮಹಮ್ಮದ್ ಫೀರ್ ಷಾ ಖಾದ್ರಿ ಇವರ ಸಮ್ಮುಖದಲ್ಲಿ ಚೆನ್ನವೀರಗೌಡ ಸಿ. ಪಾಟೀಲರನ್ನು ಈ ವರ್ಷದ ಆದರ್ಶ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಲ್.ಕೃಷ್ಣಾನಾಯ್ಕ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಹಶಿಲ್ದಾರ ಸಂತೋಷಕುಮಾರ,ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಲಿಂಗೇಶ ರಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!