
ಧಾರವಾಡ 28 : ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಶಂಕರ ಮಠದ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮನ್ವಯ ಸಮಿತಿ ಸಭೆ ನಡೆದಿದೆ. ಎರಡು ದಿನಗಳ ಕಾಲ ಈ ಸಭೆ ನಡೆಯಲಿದೆ. ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಗಮಿಸಿದ್ದಾರೆ . ನಿನ್ನೆ ಸಂಜೆಯೇ ಧಾರವಾಡಕ್ಕೆ ಬಂದಿದ್ದ ವಿಜಯೇಂದ್ರ ಇಂದು ಬೆಳಿಗ್ಗೆ ಶಂಕರ ಮಠಕ್ಕೆ ಆಗಮಿಸಿದ್ದಾರೆ . ವಿಜಯೇಂದ್ರ ಅವರಿಗೆ ಕಾರ್ಕಳ ಎಂಎಲ್‌ಸಿ ಸುನಿಲ್ ಕುಮಾರ್ ಕೂಡ ಸಾಥ್ ನೀಡಿದರು.
ವಿಜಯೇಂದ್ರ ಅವರು ಬೆಂಗಾವಲು ವಾಹನ ಇಲ್ಲದೇ ಶಂಕರ ಮಠಕ್ಕೆ ಬಂದಿದ್ದು , ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಕೂಡ ನೀಡದೇ ಆರ್‌ಎಸ್ಎಸ್ ಸಭೆಗೆ ತೆರಳಿದರು.