
ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ರ್ಯಾಂಕ್ಗಳ
ಬ್ಯಾಂಕ ಆಗಿದ್ದ ಧಾರವಾಡ ಜಿಲ್ಲೆ, ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣುತ್ತಿದೆ. ಆದರೆ ಕಳೆದ ಜುಲೈದಿಂದ ನಿರಂತರವಾಗಿ 10 ತಿಂಗಳಿಂದ ಮಿಷನ್ ವಿದ್ಯಾಕಾಶಿ ಮೂಲಕ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ತರಗತಿ, ಸಂಜೆ ಪಾಠ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೊಬ್ಬ ಜಾಣನ ಜೋಡು, ಯುನಿಟ್ ಟೆಸ್ಟ್, ಅಭ್ಯಾಸ ಹಾಳೆ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮುಂತಾದ ವಿನೂತನ ಪ್ರಯೋಗ ಮತ್ತು ವಿಶೇಷ ಪ್ರಯತ್ನಗಳ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಯಶಸ್ವಿ ಆಗಿದ್ದೇವೆ.
ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದ್ದು, ಖಂಡಿತವಾಗಿ ಅದರ ಸಮೀಪಕ್ಕಾದರೂ ಬರುತ್ತೇವೆ. ಕಳೆದ ಸಲ 23 ನೇ ರ್ಯಾಂಕ್ ನಲ್ಲಿ ಇದ್ದ ನಮ್ಮ ಜಿಲ್ಲೆ ಈ ಸಲ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತದೆ. ನನಗೆ ಬಲವಾದ ನಂಬಿಕೆ ಇದೆ.
ಶ್ರೀಮತಿ ದಿವ್ಯ ಪ್ರಭು
ಜಿಲ್ಲಾಧಿಕಾರಿಗಳು ಹಾಗೂ
ಅಧ್ಯಕ್ಷರು, ಮಿಷನ್ ವಿದ್ಯಾಕಾಶಿ ಯೋಜನೆ