
ಕಠಿಣ ಪರಿಶ್ರಮದಿಂದ ಯಶಸ್ಸು ಸಾದ್ಯ-ಮಾಜಿ ಶಾಸಕ ಪಿ.ರಾಜೀವ್.
ಧಾರವಾಡ 13 : ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯನ್ನು ಬೆಳಸಿಕೊಂಡು, ಪರಿಶ್ರಮದ ಮೂಲಕ ಸವಾಲುಗಳನ್ನು ಎದುರಿಸಿ ಸಾಧನೆ ಪ್ರಯತ್ನ ಮಾಡಬೇಕು ಎಂದು ಕುಡಚಿ ಮತ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟರು.
ಅವರು ನಗರದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ವಿದ್ಯಾರ್ಥಿಗಳು ಈಗಿನ ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಧನಾತ್ಮಕವಾಗಿ ಆಲೋಚನೆ ಮೈಗೂಡಿಸಿಕೊಳ್ಳುವದರಿಂದ ಯಾವುದೇ ಸವಾಲುಗಳನ್ನು ಎದುರಿಸಬಹುದು. ಭಾರತವು ತನ್ನದೆ ಆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಭಾರತವು ಜಗತ್ತಿಗೆ ಯೋಗ ಹಾಗೂ ಆಧ್ಯಾತ್ಮಿಕತೆಯನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದ ಅವರು ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಪಡೆಯಬೇಕಾದಾರೆ ಕಷ್ಟ ಹಾಗೂ ಕಠಿಣ ಪರಿಶ್ರಮವಿರಬೇಕಾಗುತ್ತದೆ ಎಂದರು.
ಜೀವನದಲ್ಲಿ ಸವಾಲುಗಳು ಬರುತ್ತವೆ, ಅವುಗಳನ್ನು ಧನಾತ್ಮಕ ಆಲೋಚನೆಗಳಿಂದ ನಿವಾರಿಸಬೇಕು ಎಂದು ಸಲಹೆ ನೀಡಿದರು. ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳಿಂದ ದೂರವಿರಬೇಕು. ನಿಮ್ಮೊಳಗೆ ಇರುವ ಶಕ್ತಿಯನ್ನು ನೀವು ತಿಳಿದುಕೊಂಡು ಬದುಕಿ ಎಂದರು. ಬದುಕು ಒಂದು ಭ್ರಮೆ ಅಲ್ಲ ಬದುಕನ್ನು ರೂಪಿಸುವಲ್ಲಿ ಎಲ್ಲರೂ ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ. ಈ ರಾಷ್ಟ್ರಕ್ಕಾಗಿ ನಾವೆಲ್ಲರೂ ಅಳಿಲು ಸೇವೆಯನ್ನಾದರು ಕೂಡ ಮಾಡಬೇಕು. ಅಂದಾಗ ಮಾತ್ರ ಜೀವನ ಸಾರ್ಥಕತೆ ಪಡೆಯುತ್ತದೆ. ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ .ಎಸ್. ಸಾಳುಂಕೆ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಹಸನಾಗಿಸಿಕೊಳ್ಳುವತ್ತ ತಮ್ಮ ಜೀವನ ಸಾಗಿಸಬೇಕು. ರಾಷ್ಟ್ರದ ನಿರ್ಮಾಣ ನಿಮ್ಮೆಲ್ಲರ ಹೊಣೆಯಾಗಿದೆ. ದೃಢ ವಿಶ್ವಾದಿಂದ, ಜ್ಞಾನದಿಂದ ಸಾಧನೆಯತ್ತ ಸಾಗಲು ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆ, ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ, ಚಿನ್ನದ ಪದಕ ಗಳಿಸಿದ ಹಾಗೂ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ವಿ.ಬಿ.ಸಾವಿರಮಠ, ಪ್ರೊ. ಜೆ.ಟಿ. ಗುಡಗುರ್,ಪ್ರೊ.ಆರ್. ವೈ.ಬುದಿಹಾಳ್, ಡಾ .ಮೃತ್ಯುಂಜಯ ಅಂಗಡಿ, ಪ್ರೊ. ವಿ.ಬಿ ಸಾವಿರ ಮಠ್ ಹಾಗೂ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ವಿಭಾಗದ ಕಾರ್ಯದರ್ಶಿ ಪ್ರಜ್ಞಲ್ ಸ್ವಾಮಿ ಎಂ. ಆರ್ ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.