ಧಾರವಾಡ ೧೪ : ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಎಲ್ಲ ಕಾದಂಬರಿಗಳನ್ನು ಹಾಗೆಯೇ ಅವರ ಜೀವನವನ್ನು ಕುರಿತು ಗಳಗನಾಥರು ಮತ್ತು ಅವರ ಕಾದಂಬರಿಗಳು ಎಂಬ ಡಾ. ಕೃಷ್ಣಮರ‍್ತಿ ಕಿತ್ತೂರ ಅವರು ಬರೆದ ಪುಸ್ತಕ ಇಂದು ರಂಗಾಯಣ ಆವರಣದಲ್ಲಿಯ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲರು ಪುಸ್ತಕ ಬಿಡುಗಡೆ ಮಾಡಿದರು.
ಸಾಹಿತಿ ಪ್ರೊ. ಹರ್ಷ ಡಂಬಳ ಪುಸ್ತಕದ ಕುರಿತು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಶ್ರೀ ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ ದುಷ್ಯಂತ ನಾಡಗೌಡರು ವಹಿಸಿದ್ದರು.
ಬಿಡುಗಡೆ ಸಮಾರಂಭದಲ್ಲಿ ಈ ಗ್ರಂಥದ ಮುಖ್ಯಪ್ರೇರಣೆಯಾದ ಬಿ. ವಿ. ಕುಲಕರ್ಣಿ ಇವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಳಗನಾಥ ಕುಟುಂಬದ ವೆಂಕಟೇಶ ಗಳಗನಾಥ ಹಾಗೂ ಕುಟುಂಬದವರು ಮತ್ತು ಡಾ.ಕೃಷ್ಣಮೂರ್ತಿ ಕಿತ್ತೂರ ಕುಟುಂಬದ ಅವರ ಮಗ ಆನಂದತೀರ್ಥ, ವಸಂತ ರಾಜಪುರೋಹಿತ ಹಾಗೂ ಇತರರು ಪಾಲ್ಗೊಂಡಿದ್ದರು. ಗ್ರಂಥ ಮಾಲೆಯ ಹಿರಿಯ ಪ್ರಕಾಶಕರಾದ ಡಾ. ರಮಾಕಾಂತ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.