
ಧಾರವಾಡ 13 : ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ 15 ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ, ನಾಡು-ನುಡಿ, ಜಲ, ಸಾಹಿತ್ಯ-ಸಾಂಸ್ಕೃತಿಕ, ಕೃಷಿ, ಶಿಕ್ಷಣ ಚಿಂತನೆ, ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಿ 15 ರಂದು ಮುಂಜಾನೆ 10.30 ಕ್ಕೆ ಆಲೂರ ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟನೆ ಮಾಡುವರು. ಮನಸೂರ ಶ್ರೀ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಬಸವರಾಜ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯಸ್ಫೂರ್ತಿ ಆರ್ಟ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಸದಾನಂದ ಎಸ್ ಬಂಗೆಣ್ಣನವರ ವಹಿಸುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಗ್ರಾಮೀಣ ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಸಾಹಿತಿಗಳು ಹಾಗೂ ಸಂಘಟಕರಾದ ಮಾರ್ತಾಂಡಪ್ಪ ಕತ್ತಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರಿನ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ, ಜಾನಪದ ಕಲಾವಿದರು, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕತರಾದ ಇಮಾಮಸಾಬ ವಲ್ಲೆಪ್ಪಣ್ಣವರ, ಬೆಳಗಾವಿ ಜಿಲ್ಲೆಯ ಕ.ಸಾ.ಪ. ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಮೆಣಸಿನಕಾಯಿ ಆಗಮಿಸುವರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಟ್ಯಸ್ಪೂರ್ತಿ ಆರ್ಟ & ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ ಚಲನಚಿತ್ರ ಗೀತೆಗೆ ನೃತ್ಯ, ಇಮಾಮಸಾಬ ವಲ್ಲೆಪ್ಪನವರ ಅವರಿಂದ ತತ್ವಪದ, ಚಿನ್ನು ವಸ್ತ್ರದ ಅವರ ಸ್ವರ್ಣ ಮಯೂರಿ ನೃತ್ಯಸಂಸ್ಥೆ ಹುಬ್ಬಳ್ಳಿಯವರಿಂದ ವಚನರೂಪಕ ನೃತ್ಯ, ಸುಮಾ ಹಡಪದ ಅವರಿಂದ ಕವಿಗೋಷ್ಟಿ, ಮೊಬೈಲ್ ಮಲ್ಲ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಬಂಗೆಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.