
ಧಾರವಾಡ 13 : ಸಾಮಾಜಿಕ ಬದಲಾವಣೆಯೇ ಸಮಾಜದ ಬದಲಾವಣೆಯಾಗಿದೆ. ಸಮಾಜವು ಅಭಿವೃದ್ಧಿಯಾಗಬೇಕಾದರೆ ಬದಲಾವಣೆ ಅನಿವಾರ್ಯವಾಗಿದೆ. ಎಂದು ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಡಾ.ಅಮೀರುನ್ನೀಸಾ ಶೇಖ್ ಹೇಳಿದರು.
ನಗರದ ಅಂಜುಮನ್ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ “ಯುವಜನತೆ ಮತ್ತು ಸಮಾಜಿಕ ಬದಲಾವಣೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬದಲಾವಣೆಗೆ ಕಾರಣಗಳೆನು? ಭೌಗೋಳಿಕ ಮತ್ತು ಬೌದ್ಧಿಕ ಬದಲಾವಣೆಯು ಸಮಾಜದ ಬದಲಾವಣೆಗೆ ಮೂಲವಾಗಿದೆ ಇದರಲ್ಲಿ ಯುವಜನಾಂಗದ ಪಾತ್ರ ಮಹತ್ವವಾದದ್ದು ಸಾಂಸ್ಕೃತಿಕ, ತಾಂತ್ರಿಕ, ವೈಜ್ಞಾನಿಕ-ವೈಚಾರಿಕ ಅಂಶಗಳ ಹಿನ್ನಲೆಯಲ್ಲಿ ಸಮಾಜವು ಬದಲಾವಣೆಯಾಗುತ್ತಿರುವುದನ್ನು ನೋಡಬಹುದು, ಯುವಜನಾಂಗವು ಸಮಾಜದ ಬದಲಾವಣೆಗೆ ಬಹು ಮುಖ್ಯ ಕೊಡುಗೆಯನ್ನು ನೀಡುತ್ತಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಐ. ಎಮ್. ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ. ಸಂಯೋಜಕ ಡಾ.ಎನ್.ಬಿ. ನಾಲತವಾಡ ಉಪಸ್ಥಿತರಿದ್ದರು. ಉಸ್ಮಾನ್ ಅತ್ತಾರ ಕುರಾನ್ ಪಠಿಸಿದರು. ಪ್ರವೀಣ್ ಲಮಾಣಿ ಶ್ಲೋಕ ಪಠಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಮೀನಾ. ಆರ್. ನದಾಫ್ ಸ್ವಾಗತಿಸಿ, ಪರಿಚಯಿಸಿದರು. ವಾಸಿಂ ದಖಾನಿ ನಿರೂಪಿಸಿದರು. ಪ್ರೊ ಮುಸ್ಕಾನ್ ಸವಣೂರ ವಂದಿಸಿದರು.