ಎಸ್.ಎಸ್.ಎಲ್.ಸಿ ಪರೀಕ್ಷೆ

ALL THE BEST. ……. YOU ALL ARE THE BEST !

ಧಾರವಾಡದ ಎಲ್ಲ ಪ್ರೌಢಶಾಲಾ ಶಿಕ್ಷಕ ಸಮೂಹಕ್ಕೆ,ಅಧಿಕಾರಿಗಳಿಗೆ ನನ್ನದೊಂದು ದೊಡ್ಡ ನಮಸ್ಕಾರ. ನೀವೆಲ್ಲರೂ ಮಾಡುತ್ತಿರುವ ಪ್ರಯತ್ನವನ್ನು ಎಷ್ಟು ಹೊಗಳಿದರೂ ಸಾಲದು.

ಮಿಷನ್ ವಿದ್ಯಕಾಶಿಗಾಗಿ ನೀವೆಲ್ಲ ಒಕ್ಕಟ್ಟಿಂದ ನಿರಂತರವಾಗಿ ಮಾಡಿರುವ ಮಹಾ ಪ್ರಯಾಸ ಅಧ್ಭುತ.

ನೀವೆಲ್ಲಾ ಮಕ್ಕಳ ಯಶಸ್ಸಿಗೆ ತೋರಿರುವ ಸಹಾನುಭೂತಿ ಹಾಗು ಕರ್ತವ್ಯ ನಿಷ್ಠೆ ಒಂದು ಮಾದರಿಯೇ ಆಗಿದೆ.

ಈಗ ನಿಮ್ಮೆಲ್ಲರ ಭಗೀರಥ ಪ್ರಯತ್ನದ ಸತ್ಯದ ಕ್ಷಣ ಬಂದಿದೆ. ನಿಮ್ಮೆಲ್ಲರ (ನನ್ನದೂ) ಎದೆ ಬಡಿತ ಜಿಲ್ಲೆಯನ್ನು ಆವರಿಸಿದೆ. ಎಲ್ಲರೂ ಆತಂಕದಿಂದ ಶುರುವಾಗುವ ಪರೀಕ್ಷೆಗಳ ನಿರೀಕ್ಷೆಯಲ್ಲಿ ಇದ್ದೀರಿ. ಆತಂಕ ಬೇಡ.

ಫಲಿತಾಂಶ ಏನೇ ಆಗಲಿ, ನಿಮ್ಮೆಲ್ಲರ ಪ್ರಯತ್ನ ಎಲ್ಲರಿಂದ ಪ್ರಶಂಸೆ ಪಡೆದಿದೆ ಹಾಗೂ ಆಡಳಿತ ಹೇಗಿರಬೇಕೆಂಬ ಮಾದರಿಯಾಗಿದೆ.

ಈ ಮಿಷನಿನ ಮುಂಚೂಣಿಯಲ್ಲಿರುವ ಡಿಸಿ ದಿವ್ಯ ಪ್ರಭು ಅವರ ಸಾರಥ್ಯಕ್ಕಂತೂ ಎಷ್ಟು ಪ್ರಶಂಸಿಸಿದರೂ ಸಾಲದು.

ಬಹುಶಃ ಈ ಬಾರಿಯ SSLC ಫಲಿತಾಂಶದಿಂದ ನೀವೆಲ್ಲಾ ಈ ಮಿಷನ್ನನ್ನು ‘ ಮಿಷನ್ ದಿವ್ಯ ಕಾಶಿ ‘ ಎಂದು ಮರು ನಾಮಕರಣ ಮಾಡಬೇಕಾಗುತ್ತದೆ !

ALL THE BEST. ……. YOU ALL ARE THE BEST !

ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ಪ್ರೊ.ಎಸ್.ಎಂ. ಶಿವಪ್ರಸಾದ್
ಡೀನ್, ಐಐಟಿ ಧಾರವಾಡ ಮತ್ತು ಸಲಹೆಗಾರರು, ಮಿಷನ್ ವಿದ್ಯಾಕಾಶಿ, ಧಾರವಾಡ