
ಧಾರವಾಡ 18 : ರಾಷ್ಟೀಯ ಸೇವಾ ಯೋಜನಾ ಕೋಶ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆ, ಕರ್ನಾಟಕ ಸರ್ಕಾರ, ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ 2024. -25 ಅನ್ನು ಕರಾಕಾವಿ, ಕಾನೂನು ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸರ್ದ್ಪೆಗೆ 18 ಸಂಯೋಜಿತ ಕಾನೂನು ಮಹಾವಿದ್ಯಾಲಯಗಳಿಂದ ಸುಮಾರು ಒಟ್ಟು 88 ಕಾನೂನು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಬಾಗವಹಿಸಿದ್ದರು. ಸದರಿ ಸ್ಪರ್ದೆಯನ್ನು ಕಾನೂನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜು ಇವರು ಸಸಿಗೆ ನಿರೂಣಿಸುವುದರ ಮೂಲಕ ಉದ್ಘಾಟಿಸಿ ಉದ್ಘಾಟನಾ ಭಾಷಣವನ್ನು ಮಾಡಿದರು. ಕಾನೂನು ವಿದ್ಯಾರ್ಥಿಗಳು ಕಾನೂನನ್ನು ತಿಳಿದುಕೊಂಡು ಅದನ್ನು ಹೇಗೆ ಮಂಡಿಸಬೇಕು ಎಂದು ತಿಳಿಸಿದರು.
ಗೀತಾ ಈ. ಕೌಲಗಿ ಕೆ.ಎ.ಎಸ್. ಕುಲಸಚಿವರು, ಕರಾಕಾವಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಪ್ರೊ. ಡಾ. ಸಿ. ಎಸ್. ಪಾಟೀಲ ನಿರ್ದೇಶಕರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆಯ, ಬೆಂಗಳೂರು, ಪ್ರೊ. ಡಾ. ರತ್ನಾ ಆರ್, ಭರಮಗೌಡರ್ ಡೀನ್‌ರು ಮತ್ತು ಕುಲಸಚಿವರು (ಮೌಲ್ಯಮಾಪನ) ಕರಾಕಾವಿ, ಹಾಗೂ ನಿರ್ದೇಶಕರು, ಕರಾಕಾವಿಯ ಕಾನೂನು ಶಾಲೆ, ಶ್ರೀ ಸಂಜೀವಕುಮಾರ್ ಸಿಂಗ್ ಕೆ.ಎಸ್.ಎ.ಎಸ್. ಹಣಕಾಸು ಅಧಿಕಾರಿಗಳು, ಕರಾಕಾವಿ, ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆಯ ಸಂಶೋದನಾ ವಿಭಾಗದ ಮುಖ್ಯಸ್ಥರಾದ ಡಾ. ರೇವಯ್ಯ ಒಡೆಯರ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಫರ್ಧೆಯ ಸಮಾರೋಪ ಸಮಾರಂಭವನ್ನು ಸಾಯಂಕಾಲ ಹಮ್ಮಿಕೊಳ್ಳಲಾಯಿತು. ಈ ಸಮಾರಂಭಕ್ಕೆ ಜಿ. ಎಸ್. ಸಂಗ್ರೇಶಿ ಆಯುಕ್ತರು, ರಾಜ್ಯ ಚುನಾವಣಾ ಆಯೋಗ ಮುಖ್ಯ ಅತಿಥಿಗಳಾಗಿ ಆಗಮಿಸಿ ಕರ್ನಾಟಕದ ರಾಜ್ಯ ಮುಖ್ಯಮಂತ್ರಿಗಳಲ್ಲಿ ಅತಿ ಹೆಚ್ಚಿನವರು ಕಾನೂನು ಪದವಿಯನ್ನು ಹೊಂದಿದ್ದು, ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶವಿದೆ ಎಂದು ಹೇಳಿದರು. ಹಾಗೆಯೇ ಪ್ರಸ್ತುತ ಚುನಾವಣಾ ವ್ಯವಸ್ಥೆಯು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ಡಾ. ಸಿ. ಎಸ್. ಪಾಟೀಲ ನಿರ್ದೇಶಕರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆ, ಬೆಂಗಳೂರು, ಪ್ರೊ. ಡಾ. ರತ್ನಾ ಆರ್, ಭರಮಗೌಡರ್ ಡೀನ್‌ರು ಮತ್ತು ಕುಲಸಚಿವರು (ಮೌಲ್ಯಮಾಪನ) ಕರಾಕಾವಿ, ಹಾಗೂ ನಿರ್ದೇಶಕರು, ಕರಾಕಾವಿಯ ಕಾನೂನು ಶಾಲೆ, ಸಂಜೀವಕುಮಾರ್ ಸಿಂಗ್ ಕೆ.ಎಸ್.ಎ.ಎಸ್. ಹಣಕಾಸು ಅಧಿಕಾರಿಗಳು, ಕರಾಕಾವಿ, ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆಯ ಸಂಶೋದನಾ ವಿಭಾಗದ ಮುಖ್ಯಸ್ಥರಾದ ಡಾ. ರೇವಯ್ಯ ಒಡೆಯರ ಹಾಗೂ ಕಾರ್ಯಕ್ರಮದ ಸಂಯೋಜಕರು ಮತ್ತು ಕರಾಕಾವಿಯ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಐ. ಬಿ. ಬಿರಾದಾರ ಉಪಸ್ಥಿತರಿದ್ದರು ಶಿವಕುಮಾರ್ ಪ್ರಶಸ್ತಿಗಳ ವಿತರಣೆ ಮಾಡಿದರು.
ಈ ಸ್ಪರ್ಧೆಯಲ್ಲಿ ವಿಜೇತರಾದವರ ವಿದ್ಯಾರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
ಭಾವನಾ ಡಿ. 01 ಸಮಯ, ಕೆಎಲ್‌ಇ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿ
02. ಮಲ್ಲಿಕಾರ್ಜುನ ಪುಜಾರಿ, ಆರ್.ಎಲ್. ಕಾನೂನು ಮಹಾವಿದ್ಯಾಲಯ, ಬೆಳಗಾವಿ
03 ಸಂತೋಷ ಹಡಪದ, ಹೆಚ್. ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯ, ಬೈಲಹೊಂಗಲ
04 ಶ್ರೇಯಾ ಕೆ. ಹುದ್ದಾರ, ಕೆಎಲ್‌ಇ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿ
05 ಪೂರ್ಣಾನಂದ ಗಾಳಿ, ಕೆಎಲ್‌ಇ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿ
06 ನಾಗರತ್ನಾ ಪಾಟೀಲ, ಕೆಎಲ್‌ಇ ಬಿ. ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿ
07 ನಾಗರಾಜ ಎಮ್. ಎಮ್.ಇ.ಎಸ್. ಕಾನೂನು ಮಹಾವಿದ್ಯಾಲಯ, ಸಿರಸಿ
08 ಪ್ರತೀಕ್ಷಾ ಶೆಟ್ಟಿ, ಕೆಎಲ್‌ಇ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿ
09 ಗಣೇಶ ಡಿ. ಎಸ್. ಕೆಎಲ್‌ಇ ಜಿ. ಕೆ. ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿ
10 ಮಾಂತೇಶ ಚೌಧರಿ, ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ, ವಿಜಯಪುರ
ಕಾನೂನು ಶಾಲೆಯ ವಿದ್ಯಾರ್ಥಿಗಳಾದ ಪ್ರಮತಿ ಪ್ರಾರ್ಥಿಸಿದರು ಅಭಿಷೇಕ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು ಶ್ರವಣಾ ಮತ್ತು ಜಾನ್ಹವಿ ಕಟ್ಟಿ ನಿರೂಪಿಸಿದರು ರೋಹನ್ ಮತ್ತು ಶ್ರೀಲಕ್ಷಿö್ಮ ವಂದನಾರ್ಪಣೆ ಮಾಡಿದರು .