
ಧಾರವಾಡ07 : ಏಪ್ರಿಲ್ ೨೦೨೫: ಉತ್ತರ ಕರ್ನಾಟಕದ ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾದ ಎಸ್‌ಡಿಎಎ ನಾರಾಯಣ ಹಾರ್ಟ್ ಸೆಂಟರ್ ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರವೂ ಕಳೆದ ವರ್ಷ ವ್ಯಾಸ್ಕೂಲರ್ ಚಿಕಿತ್ಸಾ ವಿಭಾಗ ಪ್ರಾರಂಭಿಸಿತ್ತು, ಇದು ಆರಂಭವಾದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ 250 ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆಗಳನ್ನು ನಡೆಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಎಂದು
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ ಪಟ್ಟಣಶೆಟ್ಟಿ ತಿಳಸಿದರು.ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು
ಉತ್ತರ ಕರ್ನಾಟಕದಲ್ಲಿ ವ್ಯಾಸ್ಕೂಲರ್ ಚಿಕಿತ್ಸಕರು ವಿರಳ, ಬೆರಳಣಿಕೆಯನ್ನು ತಜ್ಞ ವೈದ್ಯರು ಮಾತ್ರ ಇಲ್ಲಿ ಲಭ್ಯ ಇಂತಹ ಸಂದರ್ಭದಲ್ಲಿ ನಾರಾಯಣ ಹಾರ್ಟ್ ಸೆಂಟರ್ ಇದಕ್ಕಾಗಿಯೇ ಒಂದು ವಿಶೇಷ ವಿಭಾಗ ಆರಂಭಿಸಿ, ವ್ಯಾಸ್ಕೂಲ ಅಥವಾ ರಕ್ತನಾಳೀಯ ರೋಗಗಳಿಗೆ ಸಂಬಂಧಿಸಿದಂತೆ ಇಲ್ಲಿಯ ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸುವಂತೆ ಮಾಡಿದೆ. ಈ ವಿಭಾಗವು ಸುಮಾರು 250 ಕ್ಕೂ ಅಧಿಕ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ಒದಗಿಸಿ ಸಾಧನೆ ಮಾಡಿದೆ. ವ್ಯಾಸ್ಕೂಲರ್ ಚಿಕಿತ್ಸಕರ ಕೊರತೆಯಿರುವ ಈ ಪ್ರದೇಶದಲ್ಲಿ, ಆಸ್ಪತ್ರೆಯು ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ನೀಡುವ ತನ್ನ ಬದ್ಧತೆಯನ್ನು ಈ ಸಾಧನೆ ಮೂಲಕ ಎತ್ತಿ ಹಿಡಿದಿದ ಎಂದರು.
ಅತ್ಯಾಧುನಿಕ ಲೇಸರ್ ಅದ್ದೇಶನ್ ನೊಂದಿಗೆ ವ್ಯಾಸ್ಕೂಲ ಆರೈಕೆ
ಆಸ್ಪತ್ರೆಯ ಮುಕುಟಕ್ಕೆ ಇನ್ನೊಂದು ಗರಿ ಎನ್ನುವಂತೆ ವ್ಯಾಡ್ಯೂಲರ್ ಚಿಕಿತ್ಸೆಗಾಗಿ ಅತ್ಯಾಧುನಿಕ ಎಂಡೋವೆನಸ್ ಲೇಸರ್ ಥೇರಪಿ (EVLT) ಯನ್ನು ಪರಿಚಯಿಸಿದೆ. ಇದು ವ್ಯಾಪ್ಯೂಲರ್ ಆರೈಕೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. EVLT ಸಾಂಪ್ರದಾಯಿಕ ರಕ್ತನಾಳದ ಶಸ್ತ್ರಚಿಕಿತ್ಸೆಗಿಂತ ಕನಿಷ್ಠಗಾಯದ ಚಿಕಿತ್ಸೆ (ಮಿನಿಮಲ್ ಇನ್‌ವೇಸಿವ್) ಆಯ್ಕೆಯಾಗಿದೆ. ಇದರ ವೈಶಿಷ್ಟ್ಯವನೆಂದರೆ ರೋಗಿಯೂ ಶೀಘ್ರ ಚೇತರಿಕೆ ಆಗುವದಲ್ಲದೆ, ಕಡಿಮೆ ನೋವು ಮತ್ತು ಉತ್ತಮ ರಕ್ತ ಪರಿಚಲನೆಯನ್ನು ಈ ಚಿಕಿತ್ಸೆ ನೀಡುತ್ತದೆ. ವಿಶೇಷವೆನೆಂದರೆ ಈ ವಿಭಾಗವು ಪ್ರಾರಂಭವಾದ ಒಂದು ವರ್ಷದ ಅವಧಿಯಲ್ಲಿ 100 ಕ್ಕೂ ಹೆಚ್ಚು ಲೇಸರ್ ಥೇರಪಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.“ನಮ್ಮ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ತಂತ್ರಜ್ಞಾನವು ರೋಗಿಗಳಿಗೆ ಆರಾಮದೊಂದಿಗೆ ನಿಖರವಾದ ಚಿಕಿತ್ಸೆಯನ್ನು ನೀಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ,” ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ ಪಟ್ಟಣಶೆಟ್ಟಿಯವರು ಹೇಳಿದರು.
ವ್ಯಾಸ್ಕೂಲ ಮತ್ತು ಎಂಡೋವ್ಯಾಪ್ಯೂಲರ್ ತಜ್ಞ ಡಾ. ಬಸವರಾಜೇಂದ್ರ ಆನೂರ್ ಶೆಟ್ರು ಅವರ ನೇತೃತ್ವದಲ್ಲಿ ಈ ವಿಭಾಗವು ತೆರೆದ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾಫ್ಲ್ಯಾಬ್‌ನಲ್ಲಿನ ಎಂಡೋವ್ಯಾಪ್ಯೂಲರ್ ಚಿಕಿತ್ಸೆಗಳೆರಡರಲ್ಲೂ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡುತ್ತಿದೆ. ಇದರಿಂದಾಗಿ ರೋಗಿಗಳು ದೂರದ ಊರುಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದೆ ಸುಧಾರಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಿದೆ. ನಮ್ಮ ಗುರಿ ರೋಗಿಗಳಿಗೆ ತಮ್ಮ ಊರಿನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡುವುದು,’ ಎಂದು ಡಾ. ಬಸವರಾಜೇಂದ್ರ ಆನೂರ್ ಶೆಟ್ರು ಹೇಳಿದರು.
ಎಂಡೋವ್ಯಾಸ್ಟೈಲರ್’ ತಂತ್ರಗಳೊಂದಿಗೆ ಫೆರಿಫೆರಲ್ ವ್ಯಾಸ್ಕುಲರ್ ರೋಗ ಆರೈಕೆ
ಈ ಕೇಂದ್ರವು ಫೆರಿಫೆರಲ್ ವ್ಯಾಸ್ಕೂಲರ ರೋಗದಿಂದ (Peripheral Vascular Disease (PVD) ಯಿಂದ ಬಳಲುತ್ತಿರುವ ರೋಗಿಗಳಿಗೆ ಸುಧಾರಿತ ಎಂಡೋವ್ಯಾಸ್ಟೈಲರ್ ಅಂಜಿಯೋಪ್ಲಾಸ್ಟಿ ಮತ್ತು ಸೈಂಟಿಂಗ್ ಅನ್ನು ಸಹ ನೀಡುತ್ತಿದೆ. ಇಲ್ಲಿಯವರೆಗೆ 80 ಕ್ಕೂ ಹೆಚ್ಚು ಯಶಸ್ವಿ ಎಂಡೋವ್ಯಾಸ್ತ್ರಲರ್ ಚಿಕಿತ್ಸೆಗಳನ್ನು ನಡೆಸಲಾಗಿದೆ, ಎಂದು ಡಾ. ಆನೂರ್ ಶೆಟ್ರು ತಿಳಿಸಿದರು. ಈ ಕಾಯಿಲೆಯು ಹೃದಯ ಮತ್ತು ಮೆದುಳಿನ ಹೊರಗಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ, ಸಾಮಾನ್ಯವಾಗಿ ಕಾಲುಗಳು ಮತ್ತು ಪಾದಗಳಲ್ಲಿ ಇದು ನೋವು, ಮರಗಟ್ಟುವಿಕೆ ಮತ್ತು ತೀವ್ರ ತರವಾದ ಪ್ರಕರಣಗಳಲ್ಲಿ ಪಾದದ ಗ್ಯಾಂಗ್ರೀನ್ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಎಂಡೋವ್ಯಾಸ್ಟೈಲರ್ ಆಂಜಿಯೋಪ್ಲಾಸ್ಟಿ ಮತ್ತು ಸ್ಟಟಿಂಗ್ ಕನಿಷ್ಠ ಗಾಯದ ಚಿಕಿತ್ಸಾ ವಿಧಾನಗಳಾಗಿದ್ದು, ಇದು ಪೀಡಿತ ಅಂಗಗಳಿಗೆ ರಕ್ತದ ಹರಿವನ್ನು ಪರಿಣಾಮಕಾರಿಯಾಗಿ ಪುನಃ ಸ್ಥಾಪಿಸುತ್ತದೆ, ಇದರಿಂದಾಗಿ ರೋಗಿಗಳ ಜೀವನದ ಗುಣಮಟ್ಟವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದರು. ಎಂಡೋವ್ಯಾಸ್ಕಲರ್ ಸ್ಟೆಟಿಂಗ್: ಆಂಜಿಯೋಪ್ಲಾಸ್ಟಿ ನಂತರ, ಅಪಧಮನಿಯನ್ನು ತೆರೆದಿಡಲು ಮತ್ತು ಭವಿಷ್ಯದಲ್ಲಿ ಮತ್ತೆ ಕಿರಿದಾಗುವುದನ್ನು ತಡೆಯಲು ಸ್ಟಂಟ್‌ನ್ನು ಅಪಧಮನಿಯಲ್ಲಿ ಇರಿಸಲಾಗುತ್ತದೆ.
ಅತಿ ಶೀಘ್ರದಲ್ಲಿ ಮಧುಮೇಹ ಪಾದ ಚಿಕಿತ್ಸಾಲಯ ಆರಂಭ
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ತನ್ನ ಹೊಸ ಮಧುಮೇಹ ಪಾದ ಚಿಕಿತ್ಸಾಲಯವನ್ನು ಪ್ರಾರಂಭಿಸುತ್ತಿದೆ. ಇದು ಮಧುಮೇಹ ದಿಂದ ಪಾದಗಳಲ್ಲಿ ಉಂಟಾಗುವ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾದ ಸೌಲಭ್ಯವಾಗಿದೆ ಎಂದು ಡಾ. ಆನೂರ್ ಶೆಟ್ರು ತಿಳಿಸಿದರು, ಈ ಚಿಕಿತ್ಸಾಲಯವು ಅತಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು. ಜಾಗತಿಕವಾಗಿ ಮಧುಮೇಹ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಪಾದದ ಸಮಸ್ಯೆಗಳು ಮಧುಮೇಹಿ ರೋಗಿಗಳಿಗೆ ಅತ್ಯಂತ ಗಂಭೀರವಾದ ಮತ್ತು ತಡಗಟ್ಟುಬಹುದಾದ ಸಮಸ್ಯೆಗಳಲ್ಲಿ ಒಂದಾಗಿದೆ. ಹೊಸ ಚಿಕಿತ್ಸಾಲಯವು ಸುಧಾರಿತ ರೋಗ ನಿರ್ಣಯ ಸಾಧನಗಳು, ಅತ್ಯಂತ ಶಿಸ್ತಿನ ಆರೈಕೆ ತಂಡಗಳು ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಹೊಂದಿದ್ದು, ಮಧುಮೇಹ ಪಾದದ ಹುಣ್ಣುಗಳು, ಸೊಂಕುಗಳು ಮತ್ತು ಬಾಹ್ಯ ನರರೋಗ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳ ಸಮಗ್ರ ನಿರ್ವಹಣೆಯನ್ನು ಖಚಿತ ಪಡಿಸುತ್ತದೆ ಎಂದರು.
“ಗ್ಯಾಂಗ್ರಿನ್ ನಿಂದಾಗಿ ಕಾಲು ಕತ್ತರಿಸುವಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಲು ಮತ್ತು ವಿಶೇಷ ಆರೈಕೆಯನ್ನು ಒದಗಿಸಲು ಈ ನಮ್ಮ ಹೊಸ ಸೇವೆಯ ಗುರಿಯಾಗಿದೆ,” ಎಂದು ಡಾ. ಬಸವರಾಜೇಂದ್ರ ಆನೂ ಶೆಟ್ರು ಹೇಳಿದರು.ಮಧುಮೇಹ ಪಾದ ಚಿಕಿತ್ಸಾಲಯವು ಈ ಕೆಳಗಿನ ಸೇವೆಗಳನ್ನು ನೀಡಲಿದೆ
* ನಿಯಮಿತ ವಾದ ತಪಾಸಣೆ
. ಗಾಯದ ಆರೈಕೆ ಮತ್ತು ಹುಣ್ಣು ನಿರ್ವಹಣೆ
ವ್ಯಾಕ್ಯೂಲರ್ ಮೌಲ್ಯಮಾಪನ
ಪಾದದ ಆರೈಕೆ ಮತ್ತು ಮಧುಮೇಹ ನಿರ್ವಹಣೆಯ ಕುರಿತು ಶಿಕ್ಷಣ
* ಕ್ಯಾಮ್ ಆರ್ಶೋಟಿಕ್ಸ್ ಮತ್ತು ಪಾದರಕ್ಷೆಗಳ ಶಿಫಾರಸ್ಸುಗಳು
* ಬಹು-ಶಿಸ್ತಿನ ವಿಧಾನದೊಂದಿಗೆ, ಈ ಚಿಕಿತ್ಸಾಲಯವು ಗಾಯದ ಆರೈಕೆ, ಸೋಂಕು ನಿಯಂತ್ರಣ ಮತ್ತು ವ್ಯಾಸ್ಕೂಲ ಮೌಲ್ಯಮಾಪನ ನೀಡುತ್ತದೆ, ಇದರಿಂದ ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ಖಚಿತ ಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೀನಿಯರ್ ಮಾರ್ಕೇಟಿಂಗ್ ಮ್ಯಾನೇಜರ್ ಅಜೇಯ ಹುಲಮನಿ, ಡೆಪ್ಯೂಟಿ ಮ್ಯಾನೇಜರ್ ದುಂಡೇಶ ತಡಕೋಡ ಹಾಗೂ ಇತರರು ಉಪಸ್ಥಿತರಿದ್ದರು.
ಎಸ್‌ಡಿಎಐ ನಾರಾಯಣ ಹಾರ್ಟ್ ಸೆಂಟರ್ ಕುರಿತು
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಉತ್ತರ ಕರ್ನಾಟಕದಲ್ಲಿ 24/7 ಕಾರ್ಯ ನಿರ್ವಹಿಸುವ ಆಧುನಿಕ ಹೃದಯ ಚಿಕಿತ್ಸಾ ಸೌಲಭ್ಯವಾಗಿದೆ. ಇದು ಅತ್ಯಾಧುನಿಕ ಕ್ಯಾಬ್, ಎರಡು ಹೃದಯ ಶಸ್ತ್ರಚಿಕಿತ್ಸಾ ಕೊಠಡಿಗಳು, CCU, ಮತ್ತು CITU ಗಳನ್ನು ಹೊಂದಿದೆ. ಈ ಕೇಂದ್ರವು ಹೃದಯ ರೋಗತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ವ್ಯಾಸ್ಕೂಲರ್ ತಜ್ಞರು, ಮತ್ತು ಹೃದಯ ಅರವಳಿಕೆ ತಜ್ಞರನ್ನೊಳಗೊಂಡ ನುರಿತ ತಂಡವನ್ನು ಹೊಂದಿದ್ದು, ವಿಶ್ವದರ್ಜೆಯ ಹೃದಯ ರಕ್ತನಾಳದ ಆರೈಕೆಯನ್ನು ಒದಗಿಸಲು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಜೇಯ ಹುಲಮನಿ 8884418727 ಸಂಪಕಿ೯ಸಲು ಕೋರಿದರು.