
ಧಾರವಾಡ 29 : ಪಂಜಾಬಿನಲ್ಲಿ ನಡೆಯುತ್ತಿರುವ ರೈತ ಹೋರಾಟದ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಮತ್ತು ಪಂಜಾಬ್ ನ ಆಫ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಪೊರೇಟ್ ಪರವಾದ ನೀತಿಯನ್ನು ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ರಾಷ್ಟ್ರಪತಿಗಳಿಗೆ ಮತ್ತು ಪಂಜಾಬ್ ನ ರಾಜ್ಯಪಾಲರಿಗೆ ಧಾರವಾಡ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಂಕರ ಅಂಬಲಿ, ಮಹೇಶ್ ಪತ್ತಾರ್, ಗಂಗಾಧರ್ ಬಡಿಗೇರ್, ಬಿ ಐ ಈಳಿಗೆರ್ ದೀಪಾ ಧಾರವಾಡ, ಲಕ್ಷ್ಮಣ ಬಕಾಯಿ , ಲಕ್ಷ್ಮಣ ಜಡೆಗಣ್ಣವರ್ ಮುಂತಾದವರು ಇದ್ದರು.