ಧಾರವಾಡ : ಗಾಜಾ ಮೇಲೆ ಇಸ್ರೇಲ್ ನಡೆಸಿದ ಘೋರ ದಾಳಿಯನ್ನು ಖಂಡಿಸಿ ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಎನ್ ಟಿ ಟಿ ಸತ್ಯರ ಸನ್ಮತಿ ರಸ್ತೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ಗಾಜಾದಲ್ಲಿ ಇಸ್ರೇಲ್ ನಡೆಸಿದ ನರಮೇಧದ ಘೋರ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕು. ಪ್ರಪಂಚದಾದ್ಯಂತ ಪ್ರಾಮಾಣಿಕ ಚಿಂತನೆಯ, ಪ್ರಜಾಪ್ರಭುತ್ವ ಮನಸ್ಸಿನ ಜನತೆ ಸಾಮ್ರಾಜ್ಯಶಾಹಿಯ ಈ ಅನಾಗರಿಕ ಕೃತ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಅದರ ವಿರುದ್ಧ ಪ್ರತಿಭಟನೆಯ ಧ್ವನಿಯನ್ನು ಎತ್ತುತ್ತಿದ್ದಾರೆ. ಎ ಐ ಕೆ ಕೆ ಎಂ ಎಸ್, ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ಇಂದು ಧಾರವಾಡದಲ್ಲಿ ಎಐಕೆಎಂಎಸ್ ಕಚೇರಿಯ ಎದುರು ಗಾಜಾದ ಮೇಲೆ ನಡೆದ ನರಮೇಧದ ಮತ್ತು ಅದಕ್ಕೆ ಬೆಂಬಲವಾಗಿರುವ ಅಮೆರಿಕನ್ ಸಾಮ್ರಾಜ್ಯಶಾಹಿಯ ಈ ಘೋರ ಕೃತ್ಯದ ವಿರುದ್ಧ ಪ್ರತಿಭಟಿಸಲಾಯಿತು.

ಈ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ರಾಜ್ಯಾಧ್ಯಕ್ಷರಾದ ಎಂ.ಶಶಿಧರ್ ಅವರು ಮಾತನಾಡುತ್ತಾ, ಅಮೆರಿಕನ್ ಸಾಮ್ರಾಜ್ಯಶಾಹಿ ಆರ್ಥಿಕ ಮಿಲಿಟರೀಕರಣದ ದೃಷ್ಟಿಯಿಂದ ನಿರಂತರವಾಗಿ ಗಾಜಾದ ಮೇಲೆ ದಾಳಿ ಮಾಡಿ. ಗಾಜಾವನ್ನು ತನ್ನ ಮಿಲಿಟರಿ ನೆಲೆಯನ್ನಾಗಿಸುವ ಹುನ್ನಾರ ನಡೆಸುತ್ತಿದೆ. ಆದ್ದರಿಂದ ಇತ್ತೀಚೆಗೆ ಅಮೆರಿಕದಲ್ಲಿ ಲಕ್ಷಾಂತರ ಜನರು ಟ್ರಂಪ್ ಸರ್ಕಾರದ ವಿರುದ್ಧ ಗಾಜಾದಲ್ಲಿ ನಡೆಯುತ್ತಿರುವ ನರಮೇದವನು ಖಂಡಿಸಿ ಪ್ರತಿಭಟಿಸಿದ್ದಾರೆ. ಒಟ್ಟಾರೆಯಾಗಿ ಸಾಮ್ರಾಜ್ಯವಾದ ಕೊನೆ ಆಗಬೇಕೆಂದು ಹೇಳಿದರು.

ಹಕ್ಕೊತ್ತಾಯಗಳು :
ಗಾಜಾದಲ್ಲಿ ನರಮೇಧವನ್ನು ನಿಲ್ಲಿಸಿ.
ಅಮೆರಿಕನ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ.
ಪ್ರಪಂಚದಾದ್ಯಂತ ಸಾಮ್ರಾಜ್ಯಶಾಹಿಯ ವಿರುದ್ಧ ಕಾರ್ಮಿಕರು ಮತ್ತು ರೈತರ ಒಗ್ಗಟ್ಟು ಚಿರಾಯುವಾಗಲಿ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣವರ, ಎಸ್ ಎನ್ ಸ್ವಾಮಿ, ಗೋವಿಂದ್ ಬಳ್ಳಾರಿ, ಮಲ್ಲನಗೌಡ ,ಹನುಮೇಶ ಹುಡೆದ ಮುಂತಾದವರು ಇದ್ದರು.