
ಧಾರವಾಡ : ಸಂಗೀತ ಲೋಕದ ದಿಗ್ಗಜ ಅಂತರಾಷ್ಟ್ರೀಯ ಖ್ಯಾತಿಯ ಸರೋದವಾದಕ ಪಂಡಿತ್ ರಾಜೀವ್ ತಾರಾನಾಥರ ನೆನಪಿನಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಮೆಮೋರಿಯಲ್ ಟ್ರಸ್ಟ್ , ಮೈಸೂರ್ ಹಾಗೂ ಧಾರವಾಡದ ಜಿ.ಬಿ.ಜೋಷಿ ಮೆಮೋರಿಯಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮ ಒಂದನ್ನು ಶುಕ್ರವಾರ ದಿನಾಂಕ 11 ಏಪ್ರಿಲ್ 2025 ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5.30 ಗಂಟೆಗೆ ಪಂಡಿತ್ ರಾಜೀವ್ ತಾರಾನಾಥರ ಬಗ್ಗೆ “ನಗುವನ”ಕ್ರಿಯೇಶನ್ಸ್ ಅಡಿಯಲ್ಲಿ ಎಚ್ ಆರ್ ಸುಜಾತ ಹಾಗೂ ಎನ್ನಾರ್ ವಿಶುಕುಮಾರ್ ಇವರು ನಿರ್ಮಿಸಿದ ಸಾಕ್ಷಿ ಚಿತ್ರವನ್ನು ಪ್ರದರ್ಶಿಸಲಾಗುವುದು, ನಂತರ ಡಾ. ರಾಜೀವ್ ತಾರಾನಾಥ್ ರ ಬಗ್ಗೆ ವಿವಿಧ ಲೇಖಕರು ಬರೆದ ಸಂಕಲನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ್ ಕಂಬಾರ ಅವರು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕದ ಕುರಿತು ಹಿರಿಯ ವಿಮರ್ಶಕ ಡಾ. ಬಸವರಾಜ್ ಕಲ್ಗುಡಿ ಅವರು ಮಾತನಾಡಲಿದ್ದಾರೆ. ಪಂಡಿತ್ ರಾಜೀವ್ ತಾರಾನಾಥ್ ಅವರ ಸ್ನೇಹ ವ್ಯಕ್ತಿತ್ವದ ಕುರಿತು ಮನೋಹರ ಗ್ರಂಥ ಮಾಲಯ ಡಾ. ರಮಕಾಂತ್ ಜೋಶಿ ಹಾಗೂ ಪ್ರಸಿದ್ಧ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅನಂತರ ಪ್ರಸಿದ್ಧ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಇವರ ಬಾಂಸೂರಿ ವಾದನ ನಡೆಯಲಿದೆ.
ಈ ಅಪರೂಪದ ಕಾರ್ಯಕ್ರಮವನ್ನು ಧಾರವಾಡದ ಸಾಹಿತ್ಯ ಸಂಗೀತ ಕಲಾ ರಸಿಕರು ವೀಕ್ಷಿಸಿ ಆನಂದ್ಅನುಭವ ಪಡೆಯಬೇಕೆಂದು ಸಂಚಾಲಕರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.