ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ
ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ
ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ
ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.
‌ ಸಿಸ್ಟರ ಸಾಲಿ ಡಿ’ ಸೋಜ ಪ್ರಾಂತ್ಯಾಧಿಕಾರಿಗಳು ಬೆಥನಿ ಕನ್ಯಾಸ್ತ್ರೀಯರ ಸಂಸ್ಥೆ ಧಾರವಾಡ
ಇವರು ಉದ್ಘಾಟಿಸಿ ಮಾತನಾಡಿ,
ತಪ್ಪು ಮಾಡಿ ಕೆಲವರು ಬಂಧಿಖಾನೆ ನಿವಾಸಿಗಳಾಗಿದ್ದು ಸೆರೆವಾಸದಲ್ಲಿದ್ದರೆ. ತಪ್ಪುಗಳು ಮಾಡಿಯೂ ಕಾನೂನಿನಿಂದ ತಪ್ಪಿಸಿಕೊಂಡು ‌ಹೊರಗಡೆ ಇವರವವರು ಹಲವರು ಇದ್ದಾರೆ.
ಬಂಧಿಖಾನೆ ನಮ್ಮ‌ ಮನಪರಿವರ್ತನೆಗಿರುವ ಒಂದು ಅವಕಾಶ ಎಂದರಿತು‌, ಜೊತೆಯಲ್ಲಿ ಇದ್ದವರನ್ನು ಪ್ರೀತಿಸಿ ಗೌರವಿಸುವುದು ಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಸಮಾಜ ಸೇವಾ ಶಾಸ್ತ್ರ ಕರ್ನಾಟಕ ವಿಶ್ವವಿದ್ಯಾಲಯ ಎಚ್.ಓ.ಡಿ. ಡಾ.ಸಂಗೀತಾ ಮಾನೆ
ಮಾತನಾಡಿ ಬಂಧಿಖಾನೆ ಮಹಿಳಾ ನಿವಾಸಿಗಳಿಗೆ ಕರಕುಶಲ ‌ತರಬೇತಿಯನ್ನು ಕಲಿತು ಸ್ವಾವಲಂಬನೆಯ‌ ಜೀವನ‌ ಜೀವಿಸಲು ಕರೆ ನೀಡಿದರು.
ಸಿಸ್ಟರ ಎಲ್ಪಿನಾ ರೊಡ್ರಿಗಸ್ ಮುಖ್ಯಸ್ಥರಾ ಪ್ರೀಜನ್ ಮಿನಿಸ್ಟರಿ ಇಂಡಿಯಾ ಬೆಳಗಾವಿ ‌ಇವರು ಕಥೆಯ ಮೂಲಕ ಬದುಕಿನಲ್ಲಿ ‌ಕಷ್ಟಗಳನ್ನು‌ ಸವಾಲಾಗಿ ಸ್ವೀಕರಿಸಿ ಸಮಾಧಾನದಿಂದ ಮುನ್ನುಗ್ಗಬೇಕು ಎಂದರು.
ಎಮ್‌ಎಮ್‌ ಮರಗಟ್ಟಿ ಜೇಲರ ಇವರು ,ಬಂಧಿಖಾನೆ ಮಹಿಳಾ ನಿವಾಸಿಗಳಿಗೆ ಬದುಕು‌ ಹೊಸದಾಗಿ ಉತ್ತಮವಾಗಿ ಸಾಗಿಸಲು ಒಂದು ಅವಕಾಶ ಹಾಗಾಗಿ ಸಮಯ ಹಾಳು ಮಾಡದೆ ,ಕರಕುಶಲ ಉದ್ಯೋಗ ಕಲಿಯುತ ಸಮಯ ಕಳೆಯಲು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ‌ ಶ್ರೀಮತಿ ವೆಂಕಮ್‌ ಸೋಮಾಪುರ ಇವರು ಸೆರೆವಾಸದಲ್ಲಿದ್ದು ಓದಲು ಅವಕಾಶ ಇದೆ. ಅದರ ಸದಬಳಕೆ ಮಾಡಿಕೊಳ್ಳಲು ಕರೆ ನೀಡಿದರು.
ಡಾ ಇಸಬೆಲಾ ಝೇವಿಯರ್ ಇವರು ಸಾಧನಾ ಸಂಸ್ಥೆಯೂ ಕಳೆದ ಮೂರು ತಿಂಗಳಲ್ಲಿ ಬ್ಯೂಟಿ ಪಾರ್ಲರ ತರಬೇತಿ ನೀಡುತ್ತಿದ್ದೆ.ಅದರ ಲಾಭ ಪಡೆಯಲು ತಿಳಿಸುತ್ತಾ ಬಂಧಿಖಾನೆ ನಿವಾಸಿಗಳಿಗೆ ಹೊರ ಬಂದರು ಸಾಧನಾ ಸಂಸ್ಥೆಯು ತನ್ನ ಸಹಾಯ ನೀಡುವುದಾಗಿ ತಿಳಿಸುತ್ತಾ ,ಕೇಂದ್ರ ಕಾರಾಗೃಹ ಜೇಲರ ಮೆಡಮ್ ಎಮ್ ಎಮ್ಮ‌ಮರಕಟ್ಡಿ ಹಾಗೂ ಸುಪರಿಟೆಂಡೆಟ್ ಮಹಾದೇವ ನಾಯಕ ಹಾಗೂ ಸಿಬ್ಬಂದಿ ವರ್ಗದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ‌ವೆನಿಟಾ ಪೇರ್ನಾಂಡಿಸ್ , ‌ವಿಲ್ಮಾ , ಶ್ರೀಮತಿ ಅನಿತಾ ಕರಜಗಿ ಡಾ ಸುಶಿಕ್ಷಿತ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ‌ ವೈಶಾಲಿ ಸ್ವಾಗತಿಸಿದರು. ಕರಬೆಟ್ಟ ಕಾರ್ಯಕ್ರಮ ನಿರ್ವಹಿಸಿದರು.