ಪಂಚ ಗ್ಯಾರಂಟಿ — ಗುತ್ತಿಗೆದಾರರ ಹಣವನ್ನು ಕಾಂಗ್ರೆಸ್‌ನವರು ಡೈವರ್ಟ್ – ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಆಕ್ರೋಶ.

ಧಾರವಾಡ ೦೫ : ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ಶೇ . 40 ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಮಾಡಿದ್ದ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ . ಈ ಕುರಿತು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ತಮ್ಮ ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಗುತ್ತಿಗೆದಾರರ 25 ರಿಂದ 30 ಸಾವಿರ ಕೋಟಿ ಬಿಲ್‌ನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ . ಮೂರು ವರ್ಷಗಳಿಂದ ಸರ್ಕಾರ ಸರಿಯಾಗಿ ಬಾಕಿ ಬಿಲ್ ಕೊಡುತ್ತಿಲ್ಲ . 25 ಸಾವಿರ ಕೋಟಿ ರೆಗ್ಯುಲರ್ ಪೇಮೆಂಟ್ ಬಾಕಿ ಇದೆ . ಬೃಹತ್ ನೀರಾವರಿ ಇಲಾಖೆಯ 10 ಸಾವಿರ ಕೋಟಿ , ಸಣ್ಣ ನೀರಾವರಿ ಇಲಾಖೆಯ 3 ಸಾವಿರ ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯ 4 ಸಾವಿರ ಕೋಟಿ ಬಿಲ್ ಬಾಕಿ ಇದೆ . ಇದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಿಲ್ ಕೂಡ ಬಾಕಿ ಇದೆ ಎಂದರು.

ಎರಡು ತಿಂಗಳಿಗೊಮ್ಮೆ ಸ್ವಲ್ಪ ಸ್ವಲ್ಪ ಪೇಮೆಂಟ್ ಮಾಡುತ್ತಿದ್ದಾರೆ . ಆಮೇಲೆ ಬಾಕಿ ಬಿಲ್ ಹಾಗೆಯೇ ಉಳಿಯುತ್ತಿದೆ. ಒಮ್ಮೆಲೆ ಎಲ್ಲವನ್ನೂ ಕ್ಲಿಯರ್ ಮಾಡಿದರೆ ತೊಂದರೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೇಮೆಂಟ್ ಕ್ಲಿಯರ್ ಮಾಡುವ ಭರವಸೆ ನೀಡಿತ್ತು . ಪಂಚ ಗ್ಯಾರಂಟಿ ಬಂದ ಮೇಲೆ ಆ ಹಣವನ್ನು ಅದಕ್ಕೆ ಈ ಕಾಂಗ್ರೆಸ್‌ನವರು ಡೈವರ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಇಲಾಖೆಯದ್ದು 4 ತಿಂಗಳಿನಿಂದ ದುಡ್ಡು ಬಂದಿಲ್ಲ . ಬೃಹತ್ ನೀರಾವರಿ ಇಲಾಖೆಯದ್ದು 6 ತಿಂಗಳಿನಿಂದ ದುಡ್ಡು ಬಂದಿಲ್ಲ . ರಾಜಕಾರಣಿಗಳು ಇಂತವರಿಗೇ ಗುತ್ತಿಗೆ ಕೊಡಬೇಕು ಎಂದು ಒತ್ತಡ ಹಾಕುತ್ತಾರೆ . ಇದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ . ಶಾಸಕರು , ಸಚಿವರು ಈ ವಿಷಯದಲ್ಲಿ ತಲೆ ಹಾಕಬಾರದು . ಜನವರಿ 15 ರ ಒಳಗೆ ಹಣ ಕೊಡುವ ಮಾತನ್ನು ಅಧಿವೇಶನದಲ್ಲಿ ಹೇಳಿದ್ದರು . ಅದನ್ನು ನೋಡಿಕೊಂಡು ನಾವು ಧರಣಿ ಮಾಡುತ್ತೇವೆ . ಟೆಂಡರ್ ನಡುವೆ ಬಂದು ತೊಂದರೆ ಕೊಡುವ ರಾಜಕಾರಣಿಗಳ ಮನೆ ಎದುರೇ ಧರಣಿ ಮಾಡುತ್ತೇವೆ ಎಂದರು.

ಬೀದರ್‌ನಲ್ಲಿ ಓರ್ವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಅವರು ಸಿವಿಲ್ ಗುತ್ತಿಗೆ ಕೆಲಸ ಮಾಡುತ್ತಿದ್ದರು . ಈಗ ವಾತಾವರಣ ಕೆಟ್ಟು ಹೋಗಿದೆ . ಒತ್ತಡಕ್ಕೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ . ಅದಕ್ಕೆ ಮಧ್ಯವರ್ತಿಗಳು ಬರದಂತೆ ನೋಡಿಕೊಳ್ಳಬೇಕು . ಪ್ರಿಯಾಂಕ್ ಖರ್ಗೆ ಬೆಂಬಲಿಗರ ಒತ್ತಡಕ್ಕೆ ಈ ಆತ್ಮಹತ್ಯೆ ನಡೆದಿದೆ . ಇದರಿಂದ ಸಚಿವರ ಹೆಸರೇ ಹಾಳಾಗುತ್ತದೆ . ಯಾರೇ ಸಚಿವರು ಇರಲಿ , ಶಾಸಕರು ಇರಲಿ , ಬೆಂಬಲಿಗರು ಇರಲಿ ಸಚಿವರ ಮೇಲೆ ಆರೋಪ ಬಂದಾಗ ಅದಕ್ಕೆ ಸಚಿವರೇ ಹೊಣೆಗಾರರಾಬೇಕಾಗುತ್ತದೆ ಎಂದರು.

‌ ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಮಾನೆ ,ದೂಡ್ಡಬಸವನಗೌಡಾ,ನಾಗಪ್ಪ ಅಷ್ಟಗಿ, ಬಿ ವಿ ಹಿರೇಮಠ ಉಪಸ್ಥಿತರಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!