ಧಾರವಾಡ 05 :- ಪತ್ರಕರ್ತ ರವಿಕುಮಾರ ಅವರು ಕೆ.ವೈ.ಸಿ ಅಪ್‌ಡೇಟ ಮಾಡಲು ಮುಗಿಬಿದ್ದ ಜನ, ಬೆಳ್ಳಂಬೆಳಿಗ್ಗೆ ಕ್ಯೂ ಎಂಬ ಶಿರ್ಷಿಕೆಯಡಿ ವಿಶೇಷ ಲೇಖನ ಬರೆದಿದ್ದರು. ಗ್ಯಾಸ ಸಿಲಿಂಡರ್ ಏಜನ್ಸಿಯವರು ಕೆ.ವೈ.ಸಿ ಅಪ್‌ಡೇಟ ಮಾಡುವಂತೆ ದಿನಾಂಕ ನಿಗದಿ ಮಾಡಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜನರು ಬೆಳ್ಳಂಬೆಳಿಗ್ಗೆ ಸರತಿ ಸಾಲಿನಲ್ಲಿ ನಿಂತು ಕಷ್ಟಪಟ್ಟು ಹರಸಾಹಸ ಪಡುತ್ತಿರುವ ಕುರಿತು ಲೇಖನ ಬರೆದಿದ್ದರು. ಈ ವರದಿ ಗಮನಿಸಿದ ಆಹಾರ ಮತ್ತು ನಾಗರಿಕ ಇಲಾಖೆ ಅಪಡೇಟಗಾಗಿ ದಿನಾಂಕ ನಿಗದಿ ಪಡಿಸಿಲ್ಲ ಗ್ರಾಹಕರು ತಮಗೆ ಅನುಕೂಲವಾದಾಗ ಮಾಡಬಹುದು ಎಂದು ಪ್ರಕಟಣೆ ನೀಡಿತು.
ಜನಸಾಮಾನ್ಯರ ಕಷ್ಟಕ್ಕೆ ಪರಿಹಾರ ತಂದುಕೊಟ್ಟ ಈ ವರದಿಯ ಫಲಶೃತಿ ಕಂಡಿರುವುದನ್ನು ಪರಿಗಣಿಸಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದೆ.
ಇವರಿಗೆ ಪ್ರಶಸ್ತಿ ಲಭಿಸಿರುವುದು ಸಂತೋಷದ ಸಂಗತಿಯಾಗಿದ್ದು ಪತ್ರಕರ್ತ ಮಿತ್ರರು ಸೇರಿದಂತೆ ಧಾರವಾಡದ ಮಾಧ್ಯಮ ಬಳಗವು ಪ್ರಶಸ್ತಿ ಪುರಸ್ಕೃತ ರವಿಕುಮಾರ ಅವರಿಗೆ ಅಭಿನಂದಿಸಿ ಶುಭ ಕೋರಿದೆ.ಹೀಗೆ ವರದಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಎಲ್ಲರ ಗಮನ ಸೆಳೆದು ಪ್ರಶಸ್ತಿಗಳಿಗೆ ಭಾಜನರಾಗಲಿ ಎಂದು ಶುಭ ಹಾರೈಸುತ್ತೇವೆ.