ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2025 ಗಾಮನಗಟ್ಟಿಯ ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಧಾರವಾಡ  01: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2025 ರ ಅಂಗವಾಗಿ ಹುಬ್ಬಳ್ಳಿ ಗಾಮನಗಟ್ಟಿಯ ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆಯಲ್ಲಿ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಧಾರವಾಡ (ಪಶ್ಚಿಮ) ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪಸಾರಿಗೆ ಆಯುಕ್ತ ನೂರ್ ಮೊಹಮ್ಮದ್ ಬಾಷಾ ಅವರು ರಸ್ತೆ ಅಪಘಾತಕ್ಕೆ ಕಾರಣ ಹಾಗೂ ಸಂಚಾರಿ ನಿಯಮಗಳನ್ನು ವಾಹನ ಚಾಲಕರಿಗೆ ಮನವರಿಕೆ ಮಾಡಿ, ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ದ್ವಿಚಕ್ರ ವಾಹನ ಬಳಸುವ ಪೋಷಕರಿಗೆ 4 ವರ್ಷದ ಒಳಗಿನ ಮಕ್ಕಳಿಗೆ ಸೇಪ್ಟಿ ಹಾರ್ನೆಸ್‍ನನ್ನು ಬಳಸಿಕೊಂಡು ವಾಹನವನ್ನು ಚಲಾಯಿಸುವಂತೆ ವಾಹನ ಚಾಲಕರಿಗೆ ಸಲಹೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿಗಳಾದ ರಮೇಶ ಮಾಳಗಿ, ಹಿಮೋವಾನಿ, ಸಚಿನ್ ಹುಲಕೋಟಿ, ವಿಜಯ ಕಮ್ಮಾರ, ಅಬ್ಬಾಸಾಹೇಬ್ ಅವರು ಭಾಗವಹಿಸಿದ್ದರು.

  • Related Posts

    ಫೆ 14 ರಂದು ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಲು ಆಗ್ರಹಿಸಿ

    ಧಾರವಾಡ 11 :ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಬಿಸಿಯೂಟ ಕಾರ್ಮಿಕರ ಸಂಘ(ರಿ)ದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

    ಗ್ರಾಮ ಆಡಳಿತ ಅಧಿಕಾರಿಗಳ‌ ಸಂಘದ ಮುಷ್ಕರ

    ಧಾರವಾಡ11 :  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ನಗರದ ತಹಶೀಲ್ದಾರ‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ್ದ ಕರೆಯ ಮೇರೆಗೆ ಗ್ರಾಮ ಆಡಳಿತ…

    RSS
    Follow by Email
    Telegram
    WhatsApp
    URL has been copied successfully!